ಕೇವಲ ₹107 ರೂಪಾಯಿಗೆ ರೀಚಾರ್ಜ್ ಪ್ಲಾನ್ ತಂದ BSNL ನೆಟ್ ವರ್ಕ್, ಏರ್‌ಟೆಲ್ ಹಾಗೂ ಜಿಯೋಗೆ ಢವಢವ
ಜನರಿಗೆ ಅನುಕೂಲ ಆಗುವ ಹಾಗೆ ಬಹಳ ಕಡಿಮೆ ಬೆಲೆಗೆ 107 ರೂಪಾಯಿಗೆ ಮತ್ತೊಂದು ಪ್ಲಾನ್ ಅನ್ನು ಹೊರತಂದಿದೆ BSNL. ಈ ಪ್ಲಾನ್ ಇಂದ ಏನೆಲ್ಲಾ ಅನುಕೂಲ ಜನರಿಗೆ ಸಿಗುತ್ತದೆ ಎಂದು ತಿಳಿಯೋಣ.
BSNL Recharge Plan : ಪ್ರಸ್ತುತ ನಮ್ಮ ದೇಶದಲ್ಲಿ ಹೆಚ್ಚಾಗಿ ಚರ್ಚೆ ಆಗುತ್ತಿರುವುದು ಬಿ.ಎಸ್.ಎನ್. ಎಲ್ ನೆಟ್ವರ್ಕ್ ಬಗ್ಗೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಬೇರೆ ಎಲ್ಲಾ ಟೆಲಿಕಾಂ ನೆಟ್ವರ್ಕ್ ಕಂಪನಿಗಳ ಪ್ಲಾನ್ ಗಿಂತ BSNL ಪ್ಲಾನ್ ಗಳು ಬಹಳ ಕಡಿಮೆ ಬೆಲೆಯ ಪ್ಲಾನ್ ಆಗಿದ್ದು, ಜನರು ಈಗ ಏರ್ಟೆಲ್ (Airtel), ಜಿಯೋ (Jio) ಬಿಟ್ಟು ಬಿ.ಎಸ್.ಎನ್.ಎಲ್ ನೆಟ್ವರ್ಕ್ ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಈ ನೆಟ್ವರ್ಕ್ ನಲ್ಲಿ 18 ರೂಪಾಯಿ ಇಂದ ರೀಚಾರ್ಜ್ ಪ್ಲಾನ್ ಗಳು (Recharge Plans) ಶುರುವಾಗುತ್ತದೆ. ₹3999 ರೂಪಾಯಿಗಳವರೆಗು ರೀಚಾರ್ಜ್ ಪ್ಲಾನ್ ಗಳನ್ನು ಕಾಣಬಹುದು.
ಬೇರೆ ಕಂಪನಿಗಳ 3 ತಿಂಗಳ ಪ್ಲಾನ್, 6 ತಿಂಗಳ ಪ್ಲಾನ್ ಗಳಿಗಿಂತ ಕಡಿಮೆ ಬೆಲೆಯಲ್ಲಿ 1 ವರ್ಷದ ಅವಧಿಯ ಪ್ಲಾನ್ ಗಳು BSNL ಕಾಣಸಿಗುತ್ತದೆ. ಮುಂಬರುವ ದಿನಗಳಲ್ಲಿ 4G, 5G ಕೂಡ ಲಾಂಚ್ ಆಗುತ್ತಿರುವ ಕಾರಣ, BSNL ಬೆಸ್ಟ್ ಎಂದು ಜನರು BSNL ಗೆ ಬರುತ್ತಿದ್ದಾರೆ.
ಈ ವೇಳೆ ಜನರಿಗೆ ಅನುಕೂಲ ಆಗುವ ಹಾಗೆ ಬಹಳ ಕಡಿಮೆ ಬೆಲೆಗೆ 107 ರೂಪಾಯಿಗೆ ಮತ್ತೊಂದು ಪ್ಲಾನ್ ಅನ್ನು ಹೊರತಂದಿದೆ BSNL. ಈ ಪ್ಲಾನ್ ಇಂದ ಏನೆಲ್ಲಾ ಅನುಕೂಲ ಜನರಿಗೆ ಸಿಗುತ್ತದೆ ಎಂದು ತಿಳಿಯೋಣ..
Jio ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ Airtel ನೆಟ್‌ವರ್ಕ್, ಗ್ರಾಹಕರು ಫುಲ್ ಖುಷ್
ಮೊದಲಿಗಿಂತಲು ಈಗ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳು BSNL ನಲ್ಲಿ ಲಭ್ಯವಿರುವ ಕಾರಣ ಹೆಚ್ಚಿನ ಜನರು BSNL ಗೆ ಬರುತ್ತಿದ್ದಾರೆ. ಹಾಗಾಗಿ BSNL ಸಂಸ್ಥೆ ಕೂಡ ಜನರಿಗೆ ಅನುಕೂಲ ಆಗುವ ಹಾಗೆ ಇನ್ನು ಕೆಲವು ಪ್ಲಾನ್ ಗಳನ್ನು ಜಾರಿಗೆ ತರುತ್ತಲಿದೆ, ಈ ನಡುವೆ BSNL ಕಡೆಯಿಂದ ಮತ್ತೊಂದು ಹೊಸ ಪ್ರತಿಭೆ ಜಾರಿಗೆ ತರಲಾಗಿದ್ದು, ಇದು ಕಡಿಮೆ ಬೆಲೆಗೆ ಉತ್ತಮವಾದ ಪ್ಲಾನ್ ಆಗಿದ್ದು, ಜನರಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ. ಈ ಪ್ಲಾನ್ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..
BSNL ಇದೀಗ ಜಾರಿಗೆ ತಂದಿರುವುದು ಕೇವಲ 107 ರೂಪಾಯಿಯ ರೀಚಾರ್ಜ್ ಪ್ಲಾನ್ (Pre Paid Recharge) ಆಗಿದೆ, ಇದು 1 ತಿಂಗಳ ಅವಧಿಯ ರೀಚಾರ್ಜ್ ಪ್ಲಾನ್ ಆಗಿದೆ. ಕೇವಲ 107 ರೂಪಾಯಿಗೆ ಒಂದು ಇಡೀ ತಿಂಗಳು ಜಾರಿಯಲ್ಲಿರುವ ಯೋಜನೆ ಇದಾಗಿದ್ದು, ಜನರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ಒಂದು ತಿಂಗಳ ಯೋಜನೆ ಆಗಿದೆ.
ಈ 107 ರೂಪಾಯಿಗಳ ಪ್ಲಾನ್ ನಲ್ಲಿ ಗ್ರಾಹಕರಿಗೆ ಯಾವೆಲ್ಲಾ ಪ್ರಯೋಜನಗಳನ್ನು BSNL ನೀಡುವುದಕ್ಕೆ ಮುಂದಾಗಿದೆ ಎಂದು ತಿಳಿದುಕೊಳ್ಳೋಣ..
107 ರೂಪಾಯಿಯ ಪ್ಲಾನ್:
*ಈ 107 ರೂಪಾಯಿಯ ಪ್ಲಾನ್ ವ್ಯಾಲಿಡಿಟಿ 1 ತಿಂಗಳು ಅಲ್ಲ, 35 ದಿನಗಳ ವ್ಯಾಲಿಡಿಟಿ ಹೊಂದಿದೆ.
*ಈ ಯೋಜನೆಯಲ್ಲಿ 3GB ಡೇಟಾ ಸಿಗಲಿದ್ದು, ಸಿಮ್ ಆಕ್ಟಿವೇಟ್ ಮಾಡಿಸಲು ಇದು ಉತ್ತಮವಾದ ಪ್ಲಾನ್ ಆಗಿದೆ.
*ಈ ಪ್ಲಾನ್ ನಲ್ಲಿ ನಿಮಗೆ 200 ಮಿನಿಟ್ಸ್ ಫ್ರೀ ಕಾಲ್ಸ್ ಸೌಲಭ್ಯ ಸಿಗುತ್ತದೆ.
*ಹಾಗೆಯೇ ಫ್ರೀ ಕಾಲರ್ ಟ್ಯೂನ್ಸ್ ಸೇವೆ ಕೂಡ ಸಿಗುತ್ತದೆ.
*ಡೇಟಾ ಮುಗಿದ ಮೇಲೆ 40kbps ಸ್ಪೀಡ್ ನಲ್ಲಿ ಉಪಯೋಗಿಸಬಹುದು.
BSNL Network Launches Recharge Plan for Rs 107, Bumper Offer for Customers