Jio ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ Airtel ನೆಟ್‌ವರ್ಕ್, ಗ್ರಾಹಕರು ಫುಲ್ ಖುಷ್

ಕಳೆದ ಕೆಲವು ದಿನಗಳಿಂದ ಟೆಲಿಕಾಂ ಕಂಪನಿಗಳ ವಿಷಯಕ್ಕೆ ಸಂಬಂಧಿಸಿದ ಜಾಗೆ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಿದೆ. ಇತ್ತೀಚೆಗೆ ನಮ್ಮ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್ಟೆಲ್ ಮತ್ತು ಜಿಯೋ (Airtel and Jio) ತಮ್ಮ ರೀಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಳ ಮಾಡಿದ ಕಾರಣ ಗ್ರಾಹಕರಿಗೆ ಹೊರೆಯಾಗಿತ್ತು, ರೀಚಾರ್ಜ್ ಪ್ಲಾನ್ ಗಳಲ್ಲಿ ಸುಮಾರು 20% ದರ ಹೆಚ್ಚಳ ಆಗಿದ್ದ ಕಾರಣ ಜನರು ಬೇರೆ ನೆಟ್ವರ್ಕ್ ಗೆ ಪೋರ್ಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಟೆಲಿಕಾಂ ಕಂಪನಿಗಳಿಗೆ ಶಾಕ್ ಆಗಿದೆ ಎಂದರೂ ತಪ್ಪಲ್ಲ.

ಒಂದು ತಿಂಗಳ ಪ್ಲಾನ್ ಗಳು ಹಾಗೂ 1 ವರ್ಷದ ರೀಚಾರ್ಜ್ ಪ್ಲಾನ್ ಗಳು (Recharge Plans) ವಿಪರೀತ ಬೆಲೆಯ ಪ್ಲಾನ್ ಗಳಾಗಿದ್ದು, ಇದಕ್ಕಿಂತ 3 ತಿಂಗಳ ಅಂದರೆ 90 ದಿನಗಳ ರೀಚಾರ್ಜ್ ಪ್ಲಾನ್ ಗಳೇ ಉತ್ತಮ ಎಂದು ಜನರು ಅಂಥ ಪ್ಲಾನ್ ಗಳಿಗಾಗಿ ಹುಡಕುತ್ತಿದ್ದಾರೆ.

90 ದಿನಗಳ ರೀಚಾರ್ಜ್ ಮಾಡಿಕೊಂಡರೆ, ಅನುಕೂಲ ಹೆಚ್ಚು ಎಂದು ಹೇಳಲಾಗುತ್ತಿದೆ. ಇಂಥ ಸಮಯದಲ್ಲಿ ಈಗ ಏರ್ಟೆಲ್ ಟೆಲಿಕಾಂ ಸಂಸ್ಥೆ ಹೊಸದೊಂದು ರೀಚಾರ್ಜ್ ಪ್ಲಾನ್ (New Recharge Plan) ಹೊರತಂದಿದ್ದು, 90 ದಿನಗಳ ಈ ಪ್ಲಾನ್ ಬೇರೆ ಕಂಪನಿಗಳಿಗೆ ಸೆಡ್ಡು ಹೊಡೆಯುವ ಹಾಗಿದೆ.

ಗೋಲ್ಡ್ ಲೋನ್ ತಗೊಂಡು ಆ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಇನ್ಮುಂದೆ ಹೊಸ ರೂಲ್ಸ್

ಏರ್ಟೆಲ್ ಇಂದ ಹೊಸ ಪ್ಲಾನ್:

ಏರ್ಟೆಲ್ ಸಂಸ್ಥೆ ಇದೀಗ 90 ದಿನಗಳ ಹೊಸ ಪ್ಲಾನ್ ಅನ್ನು ಬಹಳ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಈ ಪ್ಲಾನ್ ಜಿಯೋ ಪ್ಲಾನ್ ಗಿಂತಲು (Jio Pre Paid) ಚೆನ್ನಾಗಿದೆ ಎಂದು ಹೇಳಲಾಗುತ್ತಿದ್ದು, ಇದು 929 ರೂಪಾಯಿಗಳ ರೀಚಾರ್ಜ್ ಪ್ಲಾನ್ (Airtel Recharge Plan) ಆಗಿದೆ.

ಇದು 90 ದಿನಗಳ ರೀಚಾರ್ಜ್ ಪ್ಲಾನ್ ಆಗಿದ್ದು, ಇದರಲ್ಲಿ ಉತ್ತಮವಾದ ಸೇವೆಗಳು ಸಿಗಲಿದೆ. 90 ದಿನಗಳವರೆಗೂ ದಿನಕ್ಕೆ 1.5GB ಡೇಟಾ ಸಿಗುತ್ತದೆ, ಜೊತೆಗೆ ಅನಿಯಮಿತ ಉಚಿತ ಕರೆಗಳು, ಹಾಗೂ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ.

ಇದು 90 ದಿನಗಳ ಅಂದರೆ 3 ತಿಂಗಳ ರೀಚಾರ್ಜ್ ಪ್ಲಾನ್, ಒಂದು ಸಾರಿ 929 ರೂಪಾಯಿಗೆ ರೀಚಾರ್ಜ್ ಮಾಡಿಸಿಕೊಂಡರೆ, ಮತ್ತೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಹಾಗೆ ಇರುವುದಿಲ್ಲ.

ಆರಾಮಾಗಿ ಮೂರು ತಿಂಗಳ ಕಾಲ ಈ ಉತ್ತಮವಾದ ಸೇವೆಗಳನ್ನು ಎಂಜಾಯ್ ಮಾಡಬಹುದು. ಇಂಟರ್ನೆಟ್ ಸ್ಪೀಡ್ ಹಾಗೂ ಕ್ವಾಲಿಟಿ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಇದೊಂದೇ ಅಲ್ಲದೇ ಏರ್ಟೆಲ್ ಈಗ ಒಳ್ಳೆಯ ವಾರ್ಷಿಕ ರೀಚಾರ್ಜ್ ಪ್ಲಾನ್ ಅನ್ನು ಕೂಡ ಹೊರತಂದಿದ್ದು, ಇದರಿಂದಲೂ ನಿಮಗೆ ಒಳ್ಳೆಯ ಪ್ರಯೋಜನವಿದೆ.

ಪೋಸ್ಟ್ ಆಫೀಸ್ ನಲ್ಲಿ 5 ರಿಂದ 10 ಲಕ್ಷ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ? ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ ಗೊತ್ತಾ?

₹1999 ರೂಪಾಯಿಯ ವಾರ್ಷಿಕ ಪ್ಲಾನ್:

ಇದು ಏರ್ಟೆಲ್ ನ ಹೊಸ ವಾರ್ಷಿಕ ರೀಚಾರ್ಜ್ ಪ್ಲಾನ್ ಆಗಿದ್ದು, ₹1999 ರೂಪಾಯಿಯ ಈ ಆಫರ್ ಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಇರುತ್ತದೆ. ಈ ಪ್ಲಾನ್ ನಲ್ಲಿ 1 ವರ್ಷಕ್ಕೆ ಒಟ್ಟು 24 GB ಉಚಿತ ಡೇಟಾ ಸಿಗುತ್ತದೆ, ಅದರ ಜೊತೆಗೆ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಹಾಗೂ ಅನಿಯಮಿತ ಕರೆಗಳ ಸೌಲಭ್ಯ ಇರುತ್ತದೆ.

ಜೊತೆಗೆ ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ಸ್ ಈ ಎಲ್ಲಾ ಸೌಲಭ್ಯ ಸಿಗುತ್ತದೆ. ಹೆಚ್ಚಾಗಿ ಡೇಟಾ ಬಳಸದೇ ಇರುವವರಿಗೆ ಇದು ಒಳ್ಳೆಯ ರೀಚಾರ್ಜ್ ಪ್ಲಾನ್ ಆಗಿದ್ದು, 1 ಸಾರಿ ರೀಚಾರ್ಜ್ ಮಾಡಿದರೆ, 1 ವರ್ಷಗಳ ಕಾಲ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಈ ತಳಿಯ 8 ಹಸುಗಳು ಇದ್ರೆ ಸಾಕು, ದಿನಕ್ಕೆ 150 ಲೀಟರ್ ಹಾಲು ಸಿಗುತ್ತೆ, ಕೈತುಂಬಾ ಆದಾಯ! ಯಾವ ತಳಿ ಗೊತ್ತಾ?

Airtel has released a recharge plan that is cheaper than Jio

======== Story End ========

Related Stories