Money Making Idea : ಈಗ ಎಲ್ಲರೂ ಕೂಡ ಉತ್ತಮವಾಗಿ ಹಣ ಸಂಪಾದನೆ ಮಾಡಬೇಕು, ಕೋಟ್ಯಾಧಿಪತಿ ಆಗಬೇಕು ಎಂದು ಬಯಸುತ್ತಾರೆ. ಮೊದಲೆಲ್ಲಾ ಹಣ ಸಂಪಾದನೆಗೆ ಬೇರೆ ಥರದ ಮಾರ್ಗಗಳು ಇದ್ದವು, ಹಣವನ್ನು Fixed Deposit ಅಥವಾ Rd ಯಲ್ಲಿ ಹೂಡಿಕೆ ಮಾಡುವುದು ಮಾಡುತ್ತಿದ್ದರು,
ಆದರೆ ಈಗ ಜನರಿಗೆ ಅದರಿಂದ ರಿಟರ್ನ್ಸ್ ಬರುವಷ್ಟು ಕಾಯುವ ತಾಳ್ಮೆ ಇರುವುದಿಲ್ಲ. ಹಾಗಾಗಿ ಬಹಳ ಬೇಗ ಹಣ ಗಳಿಸಿ, ಕೋಟ್ಯಾಧಿಪತಿ ಆಗಬೇಕು ಎಂದುಕೊಂಡಿರುವವರು ಈ ಕೆಲವು ಬ್ಯುಸಿನೆಸ್ ಐಡಿಯಾಗಳನ್ನು (Business Idea) ಟ್ರೈ ಮಾಡಬಹುದು..
1. ಡಿಜಿಟಲ್ ಮಾರ್ಕೆಟಿಂಗ್ (Digital Marketing) : ಕಡಿಮೆ ಸಮಯದಲ್ಲಿ ಒಳ್ಳೆಯ ಆದಾಯ ಗಳಿಸುವ ಉತ್ತಮವಾದ ಬ್ಯುಸಿನೆಸ್ ಐಡಿಯಾ ಇದು. ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಎರಡು ಥರದಲ್ಲಿ ಈ ಕೆಲಸ ಮಾಡಬಹುದು, ನಿಮ್ಮ ವೆಬ್ಸೈಟ್ ಅಥವಾ ಬ್ಲಾಗ್ ಮೂಲಕ ಅಥವಾ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಮೂಲಕ, ಬೇರೆ ಬ್ರ್ಯಾಂಡ್ ಗಳ ಪ್ರೊಮೋಷನ್ ಮಾಡಬಹುದು.
ಇದಕ್ಕೆ ಒಳ್ಳೆಯ ದುಡ್ಡು ಸಿಗುತ್ತದೆ. ಹಲವು ಜನರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಂಡಲ್ ಮಾಡುವುದಕ್ಕೆ ಈ ರೀತಿಯ ಏಜೆನ್ಸಿ ಗಳನ್ನು ಸಂಪರ್ಕಿಸುತ್ತಾರೆ. ಸರಿಯಾದ ಸಮಯಕ್ಕೆ, ಕ್ರಿಯೇಟಿವ್ ಆಗಿ ಪೋಸ್ಟ್ ಮಾಡಿಕೊಡಬಹುದು. ಈ ಕೆಲಸಕ್ಕೆ ಒಳ್ಳೆಯ ಆದಾಯ ಇದೆ.
ಸ್ವಂತ ಬಿಸಿನೆಸ್, ವ್ಯಾಪಾರ ಮಾಡೋರಿಗೆ ಕಡಿಮೆ ಬಡ್ಡಿಗೆ ಸಿಗಲಿದೆ 2 ಲಕ್ಷ ಬಿಸಿನೆಸ್ ಲೋನ್! ಅಪ್ಲೈ ಮಾಡಿ
2. ಲೀಸ್ ರೆಂಟಲ್ ಡಿಸ್ಕೌಂಟಿಂಗ್ (Lease Rental Discount) : ಬಾಡಿಗೆ ಡಿಸ್ಕೌಂಟ್ ಪಡೆಯಬಹುದು, ನಿಮ್ಮ ಬಳಿ ಸ್ವಂತ ಮನೆ ಇದ್ದರೆ ಅಥವಾ ಸ್ವಂತ ಕಟ್ಟಡ ಇದ್ದರೆ, ಅದಕ್ಕೆ ಬರುವ ಬಾಡಿಗೆ ಮೊತ್ತವನ್ನು ಅಡಮಾನವಾಗಿ ಇಟ್ಟು, ಸಾಲ ತೆಗೆದುಕೊಳ್ಳಬಹುದು.
ಇಲ್ಲಿ ನೀವು ಸಾಲವನ್ನು ಮರುಪಾವತಿ ಮಾಡುವುದಿಲ್ಲ, ಬಾಡಿಗೆಗೆ ಇರುವವರು ಬಾಡಿಗೆ ಪಾವತಿ ಮಾಡುವ ಮೊತ್ತವನ್ನು ಸಾಲಕ್ಕೆ EMI ರೂಪದಲ್ಲಿ ಪಾವತಿ ಮಾಡಬಹುದು. ಇಲ್ಲಿ ನೀವು ಸಾಲ (Loan) ಪಡೆದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದರೆ, ಒಳ್ಳೆಯ ಲಾಭ ಗಳಿಸಬಹುದು. ಇಲ್ಲಿ ನೀವು ಸಾಲ ಕಟ್ಟಿದ ಹಾಗೂ ಇರುವುದಿಲ್ಲ, ಇನ್ವೆಸ್ಟ್ಮೆಂಟ್ ಇಂದ ಕೂಡ ಒಳ್ಳೆಯ ಆದಾಯ ಬರುತ್ತದೆ.
3. ಶೇರ್ ಮಾರ್ಕೆಟ್ (Share Market) : ದಿಢೀರ್ ಎಂದು ಹಣ ಗಳಿಸಬೇಕು ಎಂದರೆ ಅದಕ್ಕಾಗಿ ನೀವು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಸಿಗುವ ಲಾಭವೇನೋ ಜಾಸ್ತಿ ಇರುತ್ತದೆ. ಆದರೆ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು, ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಂಡಿರಬೇಕು. ಶೇರ್ ಮಾರ್ಕೆಟ್ ಹೇಗೆ ಕೆಲಸಮಾಡುತ್ತದೆ, ಹೇಗೆ ಹೂಡಿಕೆ ಮಾಡಬೇಕು ಎನ್ನುವ ಜ್ಞಾನ ಪಡೆದು ಹೂಡಿಕೆ ಮಾಡಿದರೆ, ಉತ್ತಮವಾದ ಲಾಭ ಗಳಿಸಬಹುದು.
ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ರಿಟರ್ನ್ಸ್ ಬರುತ್ತೆ? ಒಟ್ಟಾರೆ ಸಿಗೋ ಬಡ್ಡಿ ಎಷ್ಟು ಗೊತ್ತಾ?
4. ರೂಮ್ ರೆಂಟ್ (Room Rent): ನಿಮ್ಮ ಮನೆಯಲ್ಲಿ ಎಕ್ಸ್ಟ್ರಾ ರೂಮ್ ಇದ್ದರೆ, ಅದನ್ನು ಬಾಡಿಗೆಗೆ ಕೊಡಬಹುದು. ಹೌದು, ಪ್ರವಾಸಿಗರು ಅಥವಾ ಇನ್ನಿತರ ಜನರು ತಂಗುವುದಕ್ಕಾಗಿ ಜಾಗ ಹುಡುಕುತ್ತಾರೆ. ಅಂಥವರಿಗಾಗಿ ನಿಮ್ಮ ಮನೆಯಲ್ಲಿರುವ ಎಕ್ಸ್ಟ್ರಾ ರೂಮ್ ಕೊಟ್ಟರೆ, ಅವರಿಗೂ ಸಹಾಯ ಆಗುತ್ತದೆ.
ಜೊತೆಗೆ ನಿಮಗು ಒಳ್ಳೆಯ ಆದಾಯ ಬರುತ್ತದೆ. ಇದಕ್ಕಾಗಿ ನೀವು ಆನ್ಲೈನ್ ನಲ್ಲಿಯೇ ಜಾಹೀರಾತನ್ನು ಕೊಡಬಹುದು, ಅಗತ್ಯ ಇರುವವರು ನಿಮ್ಮನ್ನು ಕಾಂಟ್ಯಾಕ್ಟ್ ಮಾಡಿ, ರೂಮ್ ಪಡೆಯುತ್ತಾರೆ.
Do This Work to Earn Money, here is the Money Making Ideas
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.