Fixed Deposit : ಪೋಸ್ಟ್ ಆಫೀಸ್ ಯೋಜನೆಗಳು ಹೂಡಿಕೆ ಮಾಡುವುದಕ್ಕೆ ಸೂಕ್ತವಾದ ಮತ್ತು ಲಾಭದಾಯಕವಾದ ಯೋಜನೆಗಳಾಗಿದೆ. ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ, ನಿಮಗೆ ಒಳ್ಳೆಯ ರಿಟರ್ನ್ಸ್ ಬರುವುದರ ಜೊತೆಗೆ ನಿಮ್ಮ ಹಣ ಕೂಡ ಸುರಕ್ಷಿತವಾಗಿ ಇರುತ್ತದೆ.
ಕೆಲಸಕ್ಕೆ ಹೋಗುತ್ತಿದ್ದು, ನಿಮ್ಮ ಬಳಿ ಲಕ್ಷದವರೆಗೂ ಹಣ ಇದ್ದರೆ, ಅದನ್ನು ನೀವು ಪೋಸ್ಟ್ ಆಫೀಸ್ ನಲ್ಲಿ (Post Office) FD ಮಾಡಿದರೆ, ಒಳ್ಳೆಯ ರಿಟರ್ನ್ಸ್ ಪಡೆಯಬಹುದು. ಹಾಗಾಗಿ ಇದು ಉತ್ತಮವಾದ ಆಯ್ಕೆ ಆಗಿದೆ.
ಪೋಸ್ಟ್ ಆಫೀಸ್ ನ FD ಯೋಜನೆಯಲ್ಲಿ 6.9% ಇಂದ 7.5% ವರೆಗು ಬಡ್ಡಿದರ ನಿಗದಿ ಆಗಿರುತ್ತದೆ. ಇಲ್ಲಿ ನೀವು 1 ವರ್ಷದಿಂದ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ನೀವು ಎಷ್ಟು ವರ್ಷಕ್ಕೆ ಹೂಡಿಕೆ ಮಾಡುತ್ತೀರೋ ಅದರ ಮೇಲೆ ಬಡ್ಡಿದರ ನಿಗದಿ ಆಗುತ್ತದೆ.
ಹೊಸ ಜಿಯೋ ಪ್ರಿಪೇಯ್ಡ್ ಪ್ಲಾನ್, ಬೆಲೆ ಏರಿಕೆ ನಡುವೆ ಅಗ್ಗದ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್ ಲಾಂಚ್
ಹಾಗೆಯೇ ಈ ಯೋಜನೆಯಲ್ಲಿ ಮಿನಿಮಮ್ 1000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಇನ್ನು ಬಡ್ಡಿದರವನ್ನು 3 ತಿಂಗಳಿಗೆ ಒಂದು ಸಾರಿ, ಲೆಕ್ಕ ಹಾಕಿ, ನಿಮ್ಮ ಖಾತೆಗೆ ಡೆಪಾಸಿಟ್ ಮಾಡಲಾಗುತ್ತದೆ.
ಇಲ್ಲಿ ನೀವು ಡೆಪಾಸಿಟ್ ಮಾಡುವ ಹಣವನ್ನು ಹಾಗೆಯೇ ಬಿಟ್ಟರೆ, ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಅವಧಿ ಮುಗಿಯುವುಕ್ಕಿಂತ ಮೊದಲೇ ಹಣವನ್ನು ವಾಪಸ್ ಪಡೆಯಲು ಬಯಸಿದರೆ, ಆಗ ಸ್ವಲ್ಪ ಮೊತ್ತವನ್ನು ಕಡಿತಗೊಳಿಸಿ ಕೊಡಲಾಗುತ್ತದೆ.
ಈ ವಿಚಾರವನ್ನು ನೀವು ನೆನಪಿನಲ್ಲಿ ಇಡಬೇಕು. ಹಾಗಿದ್ದಲ್ಲಿ, ಪೋಸ್ಟ್ ಆಫೀಸ್ ನಲ್ಲಿ ನೀವು ಸುಮಾರು 2 ಲಕ್ಷ ರೂಪಾಯಿಗಳನ್ನು FD ಮಾಡಿದರೆ, ಎಷ್ಟು ರಿಟರ್ನ್ಸ್ ಪಡೆಯುತ್ತೀರಿ ಎಂದು ನೋಡೋಣ..
ಸ್ಟೇಟ್ ಬ್ಯಾಂಕಿನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ, ಸಿಗಲಿದೆ ಅನ್ನಪೂರ್ಣ ಯೋಜನೆಯಲ್ಲಿ 50,000!
2 ಲಕ್ಷ ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ಇಷ್ಟು:
*1 ವರ್ಷದ ಅವಧಿಗೆ 6.9% ಬಡ್ಡಿ ಸಿಗುತ್ತದೆ
*2 ವರ್ಷದ ಅವಧಿಗೆ 7.0% ಬಡ್ಡಿ ಸಿಗುತ್ತದೆ
*3 ವರ್ಷದ ಅವಧಿಗೆ 7.1% ಬದ್ದು ಸಿಗುತ್ತದೆ
*5 ವರ್ಷದ ಅವಧಿಗೆ 7.5%, ಬಡ್ಡಿ ಸಿಗುತ್ತದೆ.
1 ಲಕ್ಷ ಹೂಡಿಕೆ ಮಾಡಿದರೆ, ಸಿಗುವ ಹಣವೆಷ್ಟು:
*1 ವರ್ಷದ ಅವಧಿಗೆ 6.9% ಬಡ್ಡಿದರದಲ್ಲಿ ₹7,080 ರೂಪಾಯಿ ಬಡ್ಡಿ ಸಿಗಲಿದ್ದು, ₹1,07,080 ರೂಪಾಯಿ ರಿಟರ್ನ್ಸ್ ಪಡೆಯುತ್ತಾರೆ.
*2 ವರ್ಷದ ಅವಧಿಗೆ 7.0% ಬಡ್ಡಿದರದಲ್ಲಿ ₹14,888 ರೂಪಾಯಿ ಬಡ್ಡಿ ಸಿಗಲಿದ್ದು, ₹1,14,888 ರೂಪಾಯಿ ಬಡ್ಡಿ ಪಡೆಯುತ್ತೀರಿ.
*3 ವರ್ಷದ ಅವಧಿಗೆ 7.1% ಬಡ್ಡಿದರ ಸಿಗಲಿದ್ದು, ₹23,507 ಬಡ್ಡಿ ಸಿಗಲಿದ್ದು, ₹1,23,507 ರಿಟರ್ನ್ಸ್ ಬರುತ್ತದೆ.
*5 ವರ್ಷಗಳ ಅವಧಿಗೆ 7.5% ಬಡ್ಡಿದರದಲ್ಲಿ ₹44,994 ರೂಪಾಯಿ ಬಡ್ಡಿದ ಸಿಗಲಿದ್ದು, ₹1,44,994 ರೂಪಾಯಿ ರಿಟರ್ನ್ಸ್ ಬರುತ್ತದೆ.
2 ಲಕ್ಷ ಹೂಡಿಕೆ ಮಾಡಿದರೆ ಸಿಗುವ ಹಣ ಇಷ್ಟು:
*1 ವರ್ಷದ ಅವಧಿಗೆ 6.9% ಬಡ್ಡಿದರದಲ್ಲಿ ₹14,161 ರೂಪಾಯಿ ಬಡ್ಡಿ ಸಿಗಲಿದ್ದು, ₹2,14,161 ರೂಪಾಯಿ ರಿಟರ್ನ್ಸ್ ಪಡೆಯುತ್ತಾರೆ.
*2 ವರ್ಷದ ಅವಧಿಗೆ 7.0% ಬಡ್ಡಿದರದಲ್ಲಿ ₹29,776 ರೂಪಾಯಿ ಬಡ್ಡಿ ಸಿಗಲಿದ್ದು, ₹2,29,776 ರೂಪಾಯಿ ಬಡ್ಡಿ ಪಡೆಯುತ್ತೀರಿ.
*3 ವರ್ಷದ ಅವಧಿಗೆ 7.1% ಬಡ್ಡಿದರ ಸಿಗಲಿದ್ದು, ₹47,015 ಬಡ್ಡಿ ಸಿಗಲಿದ್ದು, ₹2,47,015 ರಿಟರ್ನ್ಸ್ ಬರುತ್ತದೆ.
*5 ವರ್ಷಗಳ ಅವಧಿಗೆ 7.5% ಬಡ್ಡಿದರದಲ್ಲಿ ₹89,989 ರೂಪಾಯಿ ಬಡ್ಡಿದ ಸಿಗಲಿದ್ದು, ₹2,89,989ರೂಪಾಯಿ ರಿಟರ್ನ್ಸ್ ಬರುತ್ತದೆ.
How Much returns will be received for 2 lakh fixed Deposit in post office
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.