Business Loan : ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಸ್ವಂತ ಬ್ಯುಸಿನೆಸ್ ಶುರು (Own Business) ಮಾಡಲು ಬಯಸುವವರಿಗೆ ಸಹಾಯ ನೀಡುತ್ತಿದೆ. ಇದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇದೀಗ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯನ್ನು ಶುರು ಮಾಡಲಾಗಿದೆ.
ಅರ್ಹತೆ ಹೊಂದಿರುವವರಿಗೆ ಈ ಒಂದು ಯೋಜನೆಯ ಮೂಲಕ ₹2 ಲಕ್ಷದವರೆಗು ಸಾಲ (Loan) ಸಿಗುತ್ತದೆ, ಇದಕ್ಕೆ ಕೇವಲ 4% ಬಡ್ಡಿ ನಿಗದಿ ಆಗಿದೆ. ಹಾಗಿದ್ದಲ್ಲಿ ಈ ಸಾಲ ಪಡೆಯುವುದು ಹೇಗೆ? ಯಾರೆಲ್ಲಾ ಈ ಸಾಲಕ್ಕೆ ಅರ್ಹತೆ ಪಡೆಯುತ್ತಾರೆ? ಪೂರ್ತಿ ಮಾಹಿತಿ ತಿಳಿಯೋಣ..
ಪಿಯುಸಿ ಪಾಸಾದವರಿಗೆ ಕೇಂದ್ರದಿಂದ ಸಿಗಲಿದೆ 20 ಸಾವಿರ ವಿದ್ಯಾರ್ಥಿವೇತನ! ಹೊಸ ಸ್ಕಾಲರ್ಶಿಪ್ ಯೋಜನೆ
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಎಂದರೇನು?
ಇದು ರಾಜ್ಯ ಸರ್ಕಾರದ ಹಲವು ನಿಗಮಗಳಲ್ಲಿ ಜಾರಿಯಲ್ಲಿರುವ ಯೋಜನೆ ಆಗಿದೆ. ಈ ಒಂದು ಯೋಜನೆಯ ಅನುಸಾರ, ಸ್ವಂತ ಉದ್ಯೋಗ ಅಥವಾ ಉದ್ಯಮ ಶುರು ಮಾಡಲು ಬಯಸುವವರಿಗೆ ಸರ್ಕಾರದ ಕಡೆಯಿಂದ ಅತೀಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ಸಿಗುತ್ತದೆ. ಹಾಗೆಯೇ ಈ ಸಾಲಕ್ಕೆ ಸಬ್ಸಿಡಿ (Subsidy Loan) ಸಿಗುತ್ತದೆ.
ಇದರಲ್ಲಿ ಸಿಗುವ ಸಾಲವೆಷ್ಟು?
ನಿಮ್ಮ ಬ್ಯುಸಿನೆಸ್ ಗೆ ಪ್ರೋತ್ಸಾಹ ನೀಡುವುದಕ್ಕೆ ಸರ್ಕಾರ ಈ ಒಂದು ಸಾಲ ಸೌಲಭ್ಯವನ್ನು (Loan Facility) ಕೊಡುತ್ತಿದೆ. ಇಲ್ಲಿ 2 ಲಕ್ಷ ಸಾಲ ಪಡೆದರೆ, 30 ಸಾವಿರ ಸಬ್ಸಿಡಿ ಸಿಗುತ್ತದೆ. ಇನ್ನು 1.70 ಲಕ್ಷ ನೀವು ಮರುಪಾವತಿ ಮಾಡಬೇಕು. ಹಾಗೆಯೇ 4% ಬಡ್ಡಿ ಕಟ್ಟಬೇಕಾಗುತ್ತದೆ.
ಹಾಗೆಯೇ 1 ಲಕ್ಷ ಸಾಲ ಪಡೆದರೆ, 20 ಸಾವಿರ ಸಬ್ಸಿಡಿ ಸಿಗುತ್ತದೆ. ಇನ್ನು 80 ಸಾವಿರ ಕಟ್ಟಬೇಕು. ಹಾಗೆಯೇ 4% ಬಡ್ಡಿದರವನ್ನು ಪಾವತಿ ಮಾಡಬೇಕಾಗುತ್ತದೆ. ಈ ರೀತಿಯ ಸಾಲ ಸೌಲಭ್ಯ ಸಿಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಒಂದು ವೇಳೆ ನೀವು ಕೂಡ ನಿಮ್ಮ ಬ್ಯುಸಿನೆಸ್ ಅಭಿವೃದ್ಧಿ ಪಡಿಸಲು, ಸಾಲ ಪಡೆಯಬೇಕು ಎಂದು ಬಯಸಿದರೇ, ಅದಕ್ಕಾಗಿ ನೀವು ಬೇಕಿರುವ ಎಲ್ಲಾ ದಾಖಲೆಗಳ ಜೊತೆಗೆ ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ನೀಡಿರುವ ಮಾಹಿತಿಗಳು ಸರಿಯಾಗಿದ್ದರೆ, ನಿಮಗೆ ಸಾಲ ಸಿಗುತ್ತದೆ..
ಗ್ರಾಹಕರನ್ನು ಸೆಳೆಯಲು Jio ಮೆಗಾ ಪ್ಲ್ಯಾನ್, ಅತೀ ಕಡಿಮೆ ಬೆಲೆಗೆ 5G ಡೇಟಾ ರಿಚಾರ್ಜ್ ಪ್ಲಾನ್ ಲಾಂಚ್!
ಬೇಕಾಗುವ ದಾಖಲೆಗಳು:
*ಅರ್ಜಿ ಹಾಕುವವರ ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ರೇಷನ್ ಕಾರ್ಡ್ ನಂಬರ್
*ನಿಮ್ಮ ಕ್ವಾಲಿಫಿಕೇಶನ್ ಸರ್ಟಿಫಿಕೇಟ್
ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ:
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಆಗಸ್ಟ್ 31 ಕೊನೆಯ ದಿನಾಂಕ ಆಗಿದ್ದು, ಈ ದಿನಾಂಕದ ಒಳಗೆ ಅಪ್ಲೈ ಮಾಡಬೇಕು.
ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ರಿಟರ್ನ್ಸ್ ಬರುತ್ತೆ? ಒಟ್ಟಾರೆ ಸಿಗೋ ಬಡ್ಡಿ ಎಷ್ಟು ಗೊತ್ತಾ?
ಅರ್ಹತೆಗಳು:
*ಅರ್ಜಿ ಹಾಕುವವರ ಮನೆಯವರ ವಾರ್ಷಿಕ ಆದಾಯ ಹಳ್ಳಿಯವರಾದರೆ ₹98 ಸಾವಿರದ ಒಳಗಿರಬೇಕು, ಸಿಟಿಯವರಿಗೆ ₹₹1.20 ಲಕ್ಷದ ಒಳಗಿರಬೇಕು.
*ಅರ್ಜಿ ಹಾಕುವ ವ್ಯಕ್ತಿ ನಮ್ಮ ರಾಜ್ಯದವರೇ ಆಗಿರಬೇಕು.
*18 ರಿಂದ 55 ವರ್ಷಗಳ ಒಳಗಿರುವವರು ಅರ್ಜಿ ಸಲ್ಲಿಸಬಹುದು.
*ಅರ್ಜಿ ಹಾಕುವವರ ಈ ಮೊದಲು ಯಾವುದೇ ಸಂಸ್ಥೆ ಇಂದ ಸಾಲ ಪಡೆದಿರಬಾರದು.
*ಅರ್ಜಿ ಹಾಕುವವರು ತಮ್ಮ ಏರಿಯಾದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರಬೇಕು, ಅದಕ್ಕೆ ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಲಿಂಕ್ ಆಗಿರಬೇಕು.
*ಮನೆಯಲ್ಲಿ ಒಬ್ಬರಿಗೆ ಮಾತ್ರ ಈ ಸಾಲ ಸೌಲಭ್ಯ ಸಿಗುತ್ತದೆ.
*ಶುರು ಮಾಡುವ ಉದ್ಯೋಗ ಅಥವಾ ಉದ್ಯಮದ ಬಗ್ಗೆ ತಿಳಿದಿರಬೇಕು.
*ಅರ್ಜಿ ಹಾಕುವವರಿಗೆ ಕೆಲಸ ಇರಬಾರದು.
2 lakh business loan will be available at low interest for own business
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.