ಪಿಯುಸಿ ಪಾಸಾದವರಿಗೆ ಕೇಂದ್ರದಿಂದ ಸಿಗಲಿದೆ 20 ಸಾವಿರ ವಿದ್ಯಾರ್ಥಿವೇತನ! ಹೊಸ ಸ್ಕಾಲರ್ಶಿಪ್ ಯೋಜನೆ

ಪಿಯುಸಿ ಆಗಿರುವವರಿಗೆ ಸಿಗಲಿದೆ 20 ಸಾವಿರ ಸ್ಕಾಲರ್ಶಿಪ್! ಕೇಂದ್ರ ಸರ್ಕಾರದ ಸ್ಕಾಲರ್ಶಿಪ್ ಯೋಜನೆಗೆ ಇಂದೇ ಅಪ್ಲೈ ಮಾಡಿ

Education scholarship : ಈಗ ವಿದ್ಯಾಭ್ಯಾಸ ಎನ್ನುವುದು ಬಹಳ ದುಬಾರಿ ಆಗಿದೆ. ಎಷ್ಟೇ ಹಣವಿದ್ದರು ಮಕ್ಕಳನ್ನು ಓದಿಸಲು ಹಣಕಾಸಿನ ಖರ್ಚು ಜಾಸ್ತಿ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಹಲವಾರು ಮಕ್ಕಳಿಗೆ ಓದುವುದಕ್ಕೆ ಆಸೆ ಇದ್ದರೂ ಕೂಡ ಆರ್ಥಿಕ ಸಮಸ್ಯೆಯ ಕಾರಣದಿಂದ ಅವರಿಗೆ ಕಷ್ಟವಾಗುತ್ತದೆ.

ಅಂಥ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಕ್ಕಾಗಿ ಕೇಂದ್ರ ಸರ್ಕಾರವು ಪಿಎಮ್ ಉಷಾ ವಿದ್ಯಾರ್ಥಿವೇತನ (Education scholarship) ಯೋಜನೆಯನ್ನು ಜಾರಿಗೆ ತಂದಿದ್ದು, ಪಿಯುಸಿ ಪಾಸ್ ಆಗುರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ಪಡೆಯಬಹುದು.

ಹೌದು, ಪಿಎಮ್ ಉಷಾ ಸ್ಕಾಲರ್ಶಿಪ್ ಯೋಜನೆಯ ಮೂಲಕ ಪಿಯುಸಿ ಪಾಸ್ ಆಗಿದ್ದು, ಡಿಗ್ರಿ ಓದಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ 3 ವರ್ಷ ಡಿಗ್ರಿ ಮಾಡುವುದಕ್ಕಾಗಿ, ಕೇಂದ್ರ ಸರ್ಕಾರದ ಕಡೆಯಿಂದ ಈ ಒಂದು ಸ್ಕಾಲರ್ಶಿಪ್ ಕೊಡಲಾಗುತ್ತಿದೆ.

Opportunity to apply online for Education scholarship for the year 2024-25

20 ಸಾವಿರದವರೆಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಸಿಗಲಿದ್ದು, ಇದಕ್ಕೆ ಅರ್ಹತೆಯ ಮಾನದಂಡಗಳು ಏನೇನು? ಯಾರೆಲ್ಲಾ ಪಿಎಮ್ ಉಷಾ ಯೋಜನೆಗೆ ಅರ್ಜಿ ಸಲ್ಲಿಸಬಹುದು? ಈ ಎಲ್ಲಾ ಮಾಹಿತಿಗಳನ್ನು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಗ್ರಾಹಕರನ್ನು ಸೆಳೆಯಲು Jio ಮೆಗಾ ಪ್ಲ್ಯಾನ್‌, ಅತೀ ಕಡಿಮೆ ಬೆಲೆಗೆ 5G ಡೇಟಾ ರಿಚಾರ್ಜ್ ಪ್ಲಾನ್ ಲಾಂಚ್!

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು:

ಪಿಎಮ್ ಉಷಾ ಯೋಜನೆಯ ಸೌಲಭ್ಯ ಪಡೆಯಲು ಬಯಸುವ ವಿದ್ಯಾರ್ಥಿ 2024ನೇ ಸಾಲಿನಲ್ಲಿ ಪಿಯುಸಿ ಪಾಸ್ ಆಗಿದ್ದು, 80% ಗಿಂತ ಜಾಸ್ತಿ ಮಾರ್ಕ್ಸ್ ಪಡೆದಿರಬೇಕು. 3 ವರ್ಷದ ಡಿಗ್ರಿ ಕೋರ್ಸ್ ಮಾಡುವವರು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ, ಇದರ ಸೌಲಭ್ಯ ಪಡೆದುಕೊಳ್ಳಬಹುದು..

ಸಿಗುವ ಸ್ಕಾಲರ್ಶಿಪ್ ಎಷ್ಟು?

ಪಿಎಮ್ ಉಷಾ ಯೋಜನೆಗೆ ಅರ್ಜಿ ಸಲ್ಲಿಸಿ, ಸ್ಕಾಲರ್ಶಿಪ್ ಗೆ ಯಾರೆಲ್ಲಾ ಆಯ್ಕೆ ಆಗುತ್ತಾರೋ ಅಂಥವರಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ ಎಂದು ನೋಡುವುದಾದರೆ..

*ಡಿಗ್ರಿ ಮೊದಲ ವರ್ಷದ ಅಡ್ಮಿಷನ್ ಗಾಗಿ ₹12 ಸಾವಿರ ಸ್ಕಾಲರ್ಶಿಪ್ ಸಿಗುತ್ತದೆ.
*2 ಹಾಗೂ 3ನೇ ವರ್ಷದ ಅಡ್ಮಿಷನ್ ಗಾಗಿ ₹20 ಸಾವಿರ ಸ್ಕಾಲರ್ಶಿಪ್ ಸಿಗುತ್ತದೆ.

ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ರಿಟರ್ನ್ಸ್ ಬರುತ್ತೆ? ಒಟ್ಟಾರೆ ಸಿಗೋ ಬಡ್ಡಿ ಎಷ್ಟು ಗೊತ್ತಾ?

ಬೇಕಾಗುವ ದಾಖಲೆಗಳು:

*ವಿದ್ಯಾರ್ಥಿಯ ಆಧಾರ್ ಕಾರ್ಡ್
*ಫೋನ್ ನಂಬರ್
*ಆಧಾರ್ ಕಾರ್ಡ್
*10 ಹಾಗೂ 12ನೇ ತರಗತಿಯಲ್ಲಿ ಪಾಸ್ ಆಗಿರುವ ಮಾರ್ಕ್ಸ್ ಕಾರ್ಡ್
*ಡಿಗ್ರಿಗೆ ಅಡ್ಮಿಷನ್ ಆಗಿರುವ ದಾಖಲೆಗಳು

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:

ಅರ್ಜಿ ಸಲ್ಲಿಕೆಗೆ 2024ರ ಅಕ್ಟೊಬರ್ ಕೊನೆಯ ದಿನಾಂಕ ಆಗಿದ್ದು, ಕ್ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್ಲೈನ್ ಆಗಿರುತ್ತದೆ, https://scholarships.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 080-23311330 ಈ ನಂಬರ್ ಗೆ ಅರ್ಜಿ ಕರೆ ಮಾಡಬಹುದು.

PUC passers will get 20 thousand Education scholarship from the center

Related Stories