ಈ ದೇಶದಲ್ಲಿ ಜಿರಳೆಗೆ ಚಿನ್ನದ ಬೆಲೆ, 1 ಕೆಜಿ ಜಿರಳೆ ರೇಟ್ ಕೇಳಿದ್ರೆ ತಲೆ ತಿರುಗುತ್ತೆ! ಇಲ್ಲಿದೆ ವೈರಲ್ ಸುದ್ದಿ

Cockroaches : ಜಿರಳೆ ಉತ್ಪಾದನೆಯನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಈ ಜನ! ಜಿರಳೆಗು ಸಿಗಲಿದೆ ಚಿನ್ನದ ಬೆಲೆ... ಇಲ್ಲಿದೆ ಸಂಪೂರ್ಣ ಮಾಹಿತಿ

Bengaluru, Karnataka, India
Edited By: Satish Raj Goravigere

Cockroaches : ವಿಶ್ವದ ಹಲವೆಡೆ ಹಲವು ಬಗೆಯ ಪ್ರಾಣಿಗಳನ್ನು, ಕೀಟಗಳನ್ನು ಆಹಾರವಾಗಿ ಬಳಸಲಾಗುತ್ತದೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಅವುಗಳಲ್ಲಿ ಜಿರಳೆ ಕೂಡ ಇದೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಹೌದು, ಚೈನಾ ಮತ್ತು ಆಫ್ರಿಕಾ ಈ ದೇಶಗಳಲ್ಲಿ ಜಿರಳೆಗಳನ್ನು ಆಹಾರ ಪದಾರ್ಥವಾಗಿ ಬಳಸಲಾಗುತ್ತದೆ.

ಇದಕ್ಕೆ ಕಾರಣ ಅವುಗಳಲ್ಲಿ ಇರುವ ಕೆಲವು ಪೋಷಕಾಂಶಗಳು ಎಂದು ಹೇಳಲಾಗುತ್ತಿದೆ. ಈಗ ವಿಶ್ವದ ಕೆಲವು ಪ್ರದೇಶಗಳಲ್ಲಿ ಜಿರಳೆಗೂ ಚಿನ್ನದಷ್ಟು ಬೆಲೆ (Gold Price) ಬಂದಿದೆ ಎಂದರೆ ಖಂಡಿತ ತಪ್ಪಲ್ಲ.

Cockroach Farms Makes Huge Money in China

ಹೌದು, ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ ಮೀನು, ಆಡು, ಕೋಳಿ ಇವುಗಳಲ್ಲಿ ಹೇಗೆ ಪ್ರೊಟೀನ್ ಅಂಶ ಇದೆಯೋ, ಅದೇ ರೀತಿ ಜಿರಳೆಗಳಲ್ಲಿ ಕೂಡ ಪ್ರೊಟೀನ್ ಅಂಶವಿದ್ದು, ಇವುಗಳಲ್ಲಿ ಪ್ರೊಟೀನ್ ಇರುವ ಮಟ್ಟವನ್ನು ಹೋಲಿಸಿದರೆ, 14% ಪ್ರೊಟೀನ್ ಜಿರೆಲೆಗಳಲ್ಲಿ ಇದೆ ಎಂದು ಮಾಹಿತಿ ಸಿಕ್ಕಿದೆ.

ಈ ಕಾರಣಕ್ಕೆ ಚೈನಾ ದೇಶದಲ್ಲಿ ಹಾಗೂ ಆಫ್ರಿಕಾದ ಕೆಲವು ಭಾಗಗಳಲ್ಲಿ ಜಿರಳೆಗಳನ್ನು (Cockroaches) ಆಹಾರ ಪದಾರ್ಥವಾಗಿ ಬಳಕೆ ಮಾಡುತ್ತಾರೆ. ಹಾಗೆಯೇ ಇನ್ನೊಂದು ವಿಚಾರ ಏನು ಎಂದರೆ, ಜಿರಳೆಗಳನ್ನು ಬೆಳೆಸುವುದನ್ನೇ ಕೆಲವರು ಉದ್ಯೋಗ ಮಾಡಿಕೊಂಡಿದ್ದಾರೆ.

ಇನ್ಮುಂದೆ ನಿಮ್ಮ ಚಿನ್ನಾಭರಣ ಕಳ್ಳತನ ಆದ್ರೆ ಅಥವಾ ಕಳೆದು ಹೋದ್ರೂ ಪೂರ್ತಿ ಹಣ ಸಿಗುತ್ತೆ! ಹೀಗೆ ಮಾಡಿ

ಹೌದು, ನಮ್ಮಲ್ಲಿ ಕುರಿ ಕೋಳಿ ಸಾಕಾಣಿಕೆ ಯಾವ ರೀತಿ ಇದೆಯೋ ಆ ದೇಶಗಳಲ್ಲಿ ಜಿರಳೆ ಸಾಕಾಣಿಕೆ ಕೂಡ ನಡೆಯುತ್ತದೆ. ಜಿರಳೆಗಳನ್ನು ಬೆಳೆಸಿ ಅವುಗಳನ್ನು ಉತ್ತಮವಾದ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ನಾನ್ ವೆಜ್ ಸೇವನೆಯ ಹಾಗೆ ಜಿರಳೆ ಸೇವನೆ ಕೂಡ ಜಾಸ್ತಿಯಾಗಬಹುದು ಎನ್ನಲಾಗಿದೆ.

ಪ್ರಸ್ತುತ ಸುಮಾರು 6 ಸಾವಿರ ಕೀಟಗಳನ್ನು ತಿನ್ನುವುದಕ್ಕೆ ಬಳಸಲಾಗುತ್ತದೆ, ಆ ಸಾಲಿಗೆ ಜಿರಳೆ ಕೂಡ ಸೇರಿದ್ದು, 2030ರ ವೇಳೆಗೆ ಸುಮಾರು 8 ಬಿಲಿಯನ್ ಜನರು ಜಿರಳೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆ ಎನ್ನುವ ಮಾಹಿತಿ ಸ್ಟಡಿ ಗಳಿಂದ ತಿಳಿದುಬಂದಿದೆ.

ಹಾಗೆಯೇ ಜಿರಳೆಗಳನ್ನು ಬೆಳೆಸುವವರ ಬಗ್ಗೆ ಹೇಳುವುದಾದರೆ, ಆಫ್ರಿಕಾದ ತಾಂಜಾನಿಯಲ್ಲಿರುವ ವ್ಯಕ್ತಿಯ ಹೆಸರು ಡೇನಿಯಲ್ ರೋಹುರಾ, ಈ ವ್ಯಕ್ತಿ ಜಿರಳೆಗಳನ್ನು ಬೆಳಸುತ್ತಿದ್ದು, 1 ಕೆಜಿ ಜಿರಳೆಯನ್ನು 5 ಯುರೋಸ್ ಗೆ ಮಾರಾಟ ಮಾಡುತ್ತಾನೆ.

ಜಿರಳೆ ಸಾಕುವ ಬಹಳಷ್ಟು ಜನರಿದ್ದು, ಜಿರಳೆ ಇಂದ ಎಣ್ಣೆ ತಯಾರಿಕೆ ಕೂಡ ಮಾಡುತ್ತಾರೆ ಎನ್ನುತ್ತಾರೆ ಎನ್ನುವುದು ಮತ್ತೊಂದು ವಿಷಯ. ಆಫ್ರಿಕಾದ ಉಗಾಂಡಾದ ಜನರು ಜಿರಳೆ ಸೇವನೆ ಮಾಡುವುದನ್ನು ಪ್ರಮುಖ ಆಹಾರವಾಗಿ ಮಾಡಿಕೊಳ್ಳಲು ಕಾಯುತ್ತಿದ್ದಾರೆ, ಇನ್ನಷ್ಟು ಬುಡಕಟ್ಟು ಜನಾಂಗದ ಆಹಾರ ಇದು ಎಂದು ಪರಿಗಣಿಸಲಾಗಿದೆ.

ಜಿಯೋ ಗ್ರಾಹಕರಿಗಾಗಿ ಬಂಪರ್ ರಿಚಾರ್ಜ್ ಪ್ಲಾನ್ ಬಿಡುಗಡೆ, ಅಗ್ಗದ ಬೆಲೆಗೆ 5G ಡೇಟಾ ರಿಚಾರ್ಜ್ ಮಾಡಿಕೊಳ್ಳಿ

ಚೈನಾ ದೇಶದ ಕ್ಸಿಚಾಂಗ್‌ ಎನ್ನುವ ಪ್ರದೇಶದಲ್ಲಿ ಪ್ರಪಂಚದ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕ ಇದೆ. ಇಲ್ಲಿ AI ಸಹಾಯ ಬಳಸಿ ಜಿರಳೆಗಳನ್ನು ಉತ್ಪಾದಿಸುತ್ತಾರೆ. ಈ ದೇಶದ ರೆಸ್ಟೋರೆಂಟ್ ಗಳಲ್ಲಿ ಕೂಡ ಜಿರಳೆಗಳ ವಿಶೇಷ ರೆಸಿಪಿ ಇರುತ್ತದೆ. ಹಾಗೆಯೇ ಜಿರಳೆಗಳನ್ನು ಔಷಧಿ ಉತ್ಪಾದಿಸಲು ಹಾಗೂ ಸೌಂದರ್ಯವರ್ಧಕಗಳ ತಯಾರಿಕೆಗೆ ಕೂಡ ಬಳಸಲಾಗುತ್ತದೆ. ಈ ರೀತಿಯಲ್ಲಿ ಜಿರಲೆಗು ಈಗ ಚಿನ್ನದ ಹಾಗೆ ಬೇಡಿಕೆ ಹಾಗು ಬೆಲೆ ಬಂದಿದೆ ಎಂದರೆ ತಪ್ಪಲ್ಲ.

Cockroach Farms Makes Huge Money in China