ಈ 15 ಜಿಲ್ಲೆಗಳ ಮಹಿಳೆಯರಿಗೆ ಬಂದೇ ಬಿಡ್ತು ಗೃಹಲಕ್ಷ್ಮಿ ಯೋಜನೆಯ ಹಣ! ಇಲ್ಲಿದೆ ಖುಷಿ ವಿಚಾರ
ಮಹಿಳೆಯರಿಗೆ ಶೀಘ್ರದಲ್ಲೇ ಪೆಂಡಿಂಗ್ ಇರುವ ಪೂರ್ತಿ ಹಣ ತಲುಪುತ್ತದೆ ಎಂದು ಸರ್ಕಾರ ತಿಳಿಸಿತ್ತು. ಅದೇ ರೀತಿ ಈಗ ಪೆಂಡಿಂಗ್ ಇರುವ 2 ತಿಂಗಳ ಹಣ ಒಟ್ಟಿಗೆ ಬಿಡುಗಡೆ ಆಗಿದೆ, ಈ 15 ಜಿಲ್ಲೆಗಳಲ್ಲಿ ನಿನ್ನೆಯ ಹಣ ಬಿಡುಗಡೆ ಆಗಿದೆ.
ನಮ್ಮ ರಾಜ್ಯದ ಮಹಿಳೆಯರು ಮನೆಯನ್ನು, ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಸಹಾಯ ಆಗಲಿ ಎಂದು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ರಾಜ್ಯದ ಮಹಿಳೆಯರ ಅಕೌಂಟ್ ಗೆ (Bank Account) 2000 ರೂಪಾಯಿಗಳು ಡಿಬಿಟಿ ಮೂಲಕ ವರ್ಗಾವಣೆ ಆಗುತ್ತಿದೆ.
ಮಹಿಳೆಯರು ಈ ಹಣದಿಂದ ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದಾರೆ, ದೈನಂದಿನ ಖರ್ಚುಗಳಿಗೆ ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಅವರಿಗೆಲ್ಲಾ ಅನುಕೂಲ ಆಗಿದೆ.
ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಸುಮಾರು 1 ವರ್ಷ ಆಗುತ್ತಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಸುಮಾರು 1.18 ಕೋಟಿ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅವರುಗಳ ಪೈಕಿ ಬಹುತೇಕ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ, ಆದರೆ ಇನ್ನೂ ಕೆಲವು ಮಹಿಳೆಯರಿಗೆ ಯೋಜನೆಯ ಹಣ ಇನ್ನು ತಪುಪಿಲ್ಲ.
ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಪಾಸ್ ಆಗಿದ್ರೆ ಸಾಕು ಅಪ್ಲೈ ಮಾಡಿ!
ಅಂಥವರು ನೀಡಿರುವ ದಾಖಲೆಗಳು ಸರಿಯಾಗಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು. ರೇಷನ್ ಕಾರ್ಡ್ (Ration card), ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಅಕೌಂಟ್ (Bank Account) ಇದೆಲ್ಲವೂ ಸರಿ ಇದ್ದರೆ ಹಣ ಬರುತ್ತದೆ..
ಟ್ಯಾಕ್ಸ್ ಪಾವತಿ ಮಾಡುವಂಥ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಹಾಗೆಯೇ ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಜಾರಿಗೆ ಬಂದಿರುವ ಈ ಎಲ್ಲಾ ಗ್ಯಾರೆಂಟಿ ಯೋಜನೆಗಳು ಮುಗಿದು ಹೋಗಬಹುದೇನೋ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು, ಆದರೆ ಇಂಥ ಊಹಾಪೋಹಗಳನ್ನು ರಾಜ್ಯ ಸರ್ಕಾರ ಸುಳ್ಳು ಮಾಡಿದೆ. ಹೌದು, ಸರ್ಕಾರ ಅಧಿಕಾರದಲ್ಲಿ ಇರುವಷ್ಟು ಸಮಯ ಕೂಡ ಜನರಿಗೆ ಎಲ್ಲಾ ಯೋಜನೆಗಳ ಸೌಲಭ್ಯ ಸಿಗುತ್ತದೆ ಎಂದು ಮಾಹಿತಿ ನೀಡಿದೆ..
ಸಿಎಂ ಸಿದ್ದರಾಮಯ್ಯ ಅವರು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಕಳೆದ ಮೂರು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಮಹಿಳೆಯರನ್ನು ತಲುಪಿಲ್ಲ.
ಎಲೆಕ್ಷನ್ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಈ ರೀತಿ ಆಗಿದ್ದು, ಮಹಿಳೆಯರಿಗೆ ಶೀಘ್ರದಲ್ಲೇ ಪೆಂಡಿಂಗ್ ಇರುವ ಪೂರ್ತಿ ಹಣ ತಲುಪುತ್ತದೆ ಎಂದು ಸರ್ಕಾರ ತಿಳಿಸಿತ್ತು. ಅದೇ ರೀತಿ ಈಗ ಪೆಂಡಿಂಗ್ ಇರುವ 2 ತಿಂಗಳ ಹಣ ಒಟ್ಟಿಗೆ ಬಿಡುಗಡೆ ಆಗಿದೆ, ಈ 15 ಜಿಲ್ಲೆಗಳಲ್ಲಿ ನಿನ್ನೆಯ ಹಣ ಬಿಡುಗಡೆ ಆಗಿದೆ.
12ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ! ಇನ್ಮುಂದೆ ಪ್ರತಿ ತಿಂಗಳು ಇದೇ ದಿನ ಹಣ ಬರುತ್ತೆ!
ಮಂಡ್ಯ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಕೋಲಾರ, ಕೊಡಗು, ಉಡುಪಿ, ದಕ್ಷಿಣ ಕನ್ನಡ ಇದಿಷ್ಟು ಜಿಲ್ಲೆಗಳಲ್ಲಿ ಪೆಂಡಿಂಗ್ ಹಣ ಒಟ್ಟಿಗೆ ಬಿಡುಗಡೆ ಆಗಿದ್ದು, ಮಹಿಳೆಯರು ತಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ಎಂದು ಡಿಬಿಟಿ ಮೂಲಕ ಸ್ಟೇಟಸ್ ಚೆಕ್ (Check Status) ಮಾಡಿಕೊಳ್ಳಬಹುದು. ಇನ್ನುಳಿದ ಜಿಲ್ಲೆಯ ಮಹಿಳೆಯರಿಗೆ ಕೂಡ ಶೀಘ್ರದಲ್ಲೇ ಯೋಜನೆಯ ಹಣ ತಲುಪಲಿದೆ.
Gruha Lakshmi Yojana money Released for the women of these 15 districts