2 ಸಾವಿರದ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಪ್ಲಾನ್! ಸರ್ಫ್ರೈಸ್ ತಯಾರಿ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಆರ್ಥಿಕವಾಗಿ ಬಲಪಡಿಸಲು 'ಗೃಹಲಕ್ಷ್ಮಿ ಸಂಘ' ರಚನೆಗೆ ಉದ್ದೇಶ. ಪ್ರಾಯೋಗಿಕ ಆರಂಭದ ಬಳಿಕ ರಾಜ್ಯವ್ಯಾಪಿ ವಿಸ್ತರಣೆ, ಅಂಗನವಾಡಿ ಸುವರ್ಣೋತ್ಸವದ ವೇಳೆ ಉದ್ಘಾಟನೆ.

  • ಗೃಹಲಕ್ಷ್ಮಿ ಸಂಘ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭ
  • ಗೃಹಲಕ್ಷ್ಮಿ ಯಜಮಾನಿಯರಲ್ಲಿ ಆರ್ಥಿಕ ಬದಲಾವಣೆ ಗುರಿ
  • ಅಂಗನವಾಡಿ ಸುವರ್ಣೋತ್ಸವದಲ್ಲಿ ಸಂಘಗಳ ಉದ್ಘಾಟನೆ

ಬೆಂಗಳೂರು (Bengaluru): ರಾಜ್ಯದಲ್ಲಿ ಮಹಿಳಾ ಬಲವರ್ಧನೆಗೆ ಮತ್ತೊಂದು ಹೆಜ್ಜೆ ಇಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಅಡಿಯಲ್ಲಿ ಹಣ ಪಡೆಯುತ್ತಿರುವ ಮಹಿಳೆಯರಿಗೆ (beneficiaries) ಆರ್ಥಿಕವಾಗಿ ಸಬಲತೆ ನೀಡುವ ಉದ್ದೇಶದಿಂದ ‘ಗೃಹಲಕ್ಷ್ಮಿ ಸಂಘ’ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿ ಆಯ್ದ ನಾಲ್ಕರಿಂದ ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಲಾಗುತ್ತಿದ್ದು, ಯಶಸ್ಸು ಕಂಡ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.

ಈ ಯೋಜನೆಯು ನೂತನ ಯತ್ನವಾಗಿದ್ದು, ಮಹಿಳೆಯರಲ್ಲಿ ಶಕ್ತಿ ಬೆಳೆಸಲು ಹಾಗೂ ತಾವೇ ಉದ್ಯೋಗ ಸೃಷ್ಟಿಸಿಕೊಳ್ಳಲು (self-employment) ಉತ್ತೇಜನ ನೀಡಲಿದೆ.

ಇದನ್ನೂ ಓದಿ: ಕರ್ನಾಟಕ ಬಡಕುಟುಂಬಗಳಿಗೆ ಭೂ ಗ್ಯಾರಂಟಿ ಯೋಜನೆ! ಹಕ್ಕು ಪತ್ರ ವಿತರಣೆ

ಪ್ರತಿ ತಿಂಗಳು ಪಡೆಯುತ್ತಿರುವ ₹2000 ಹಣವನ್ನು ಶ್ರೇಯಸ್ಕರವಾಗಿ ಉಪಯೋಗಿಸಿ, ಸ್ವಸಹಾಯ ಗುಂಪುಗಳು, ಸಣ್ಣ ಉದ್ಯಮಗಳಿಗೆ ಚಾಲನೆ ನೀಡಲು ಈ ಸಂಘಗಳು ಸಹಾಯಕವಾಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಮಾಜಿ ಸಚಿವೆ ಮೋಟಮ್ಮನವರು ಸ್ಥಾಪಿಸಿದ್ದ ‘ಸ್ತ್ರೀಶಕ್ತಿ’ ಸಂಘಗಳಿಂದ ರಾಜ್ಯದ ಸಾವಿರಾರು ಮಹಿಳೆಯರಲ್ಲಿ ಬದಲಾವಣೆ ಕಂಡುಬಂದಿದ್ದಂತೆ, ಈಗಲೂ ‘ಗೃಹಲಕ್ಷ್ಮಿ ಸಂಘ’ಗಳ ಮೂಲಕ ಪುನಃ ಆ ಆರ್ಥಿಕ ಕ್ರಾಂತಿ ತರಲಾಗುವುದು ಎನ್ನುವುದು ಈ ಯೋಜನೆಯ ಆಶಯವಾಗಿದೆ. ಈ ಸಂಘಗಳು ಗ್ರಾಮೀಣ ಹಳ್ಳಿಗಳಲ್ಲೂ ನಿರ್ಮಾಣಗೊಳ್ಳಲಿದ್ದು, ಮನೆ ಮನೆಗೂ ಆರ್ಥಿಕ ಹಕ್ಕು ಸಿಗಲು ಬಲವಾದ ವೇದಿಕೆಯಾಗಲಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇದ್ರೆ ಈ ರೀತಿ ಮಾಡಲು ಸೂಚನೆ

Lakshmi Hebbalkar

ಅಕ್ಟೋಬರ್‌ನಲ್ಲಿ ಅಂಗನವಾಡಿಗಳ ಸುವರ್ಣೋತ್ಸವವನ್ನು ರಾಜ್ಯಾದ್ಯಂತ ಆಚರಿಸಲು ತೀರ್ಮಾನಿಸಲಾಗಿದ್ದು, ಇದೇ ಸಂದರ್ಭದಲ್ಲಿ ಮೈಸೂರು ಅಥವಾ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮವೊಂದರಲ್ಲಿ ಈ ಹೊಸ ಸಂಘಗಳ ಉದ್ಘಾಟನೆಯೂ ನಡೆಯಲಿದೆ.

ಇದರ ಜೊತೆಗೆ ಮಹಿಳಾ ಸಬಲೀಕರಣದ ವಿಷಯವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿವಿದ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರ ಯೋಜನೆ ರೂಪಿಸಿದೆ.

ಇದನ್ನೂ ಓದಿ: ನಿಮ್ಮ ಕೃಷಿ ಜಮೀನಿಗೆ ಹೋಗೋಕೆ ದಾರಿ ಇಲ್ವಾ! ಬಂತು ಹೊಸ ರೂಲ್ಸ್

ಈ ಕಾರ್ಯಕ್ರಮಕ್ಕೆ ಸರ್ಕಾರದ ಪ್ರಮುಖ ಅಧಿಕಾರಿಗಳು, ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಮುಂದಿನ ಹಂತದ ಅನುಷ್ಠಾನಕ್ಕಾಗಿ ಚರ್ಚೆ ನಡೆಸಿದ್ದಾರೆ. ಈ ಯೋಜನೆಯು ಮಹಿಳಾ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಕುಟುಂಬದ ಆರ್ಥಿಕ ಬೆಳವಣಿಗೆಯಲ್ಲೂ ಕೊಡುಗೆ ನೀಡಲಿದೆ.

Gruhalakshmi Sangha to Empower Women Financially

About Author:

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ…🔸ಇನ್ನಷ್ಟು ಓದಿ »

Related Stories