ನಿಮ್ಮ ಕೃಷಿ ಜಮೀನಿಗೆ ಹೋಗೋಕೆ ದಾರಿ ಇಲ್ವಾ! ಬಂತು ಹೊಸ ರೂಲ್ಸ್
ಕೃಷಿ ಜಮೀನಿಗೆ ಹೋಗಲು ಅನುಮತಿ ಇಲ್ಲದಿದ್ದರೆ ಅಧಿಕಾರಿಗಳು ಮಧ್ಯ ಪ್ರವೇಶಿಸಬೇಕು ಎಂಬ ರಾಜ್ಯ ಸರ್ಕಾರದ ಹೊಸ ಸುತ್ತೋಲೆ ರೈತರಿಗೆ ನೆಮ್ಮದಿ ತಂದಿದೆ

- ಕೃಷಿ ಜಮೀನಿನ ಪ್ರವೇಶ ಹಕ್ಕಿಗೆ Easement Act ನ ಅಡಿ ಭದ್ರತೆ
- ದಾರಿ ನಿರಾಕರಣೆ ಮಾಡಿದರೆ ತಹಸೀಲ್ದಾರ್, ಪೊಲೀಸ್ ಅಧಿಕಾರಿ ಮಧ್ಯ ಪ್ರವೇಶ
- 1966ರ ಭೂ ಕಂದಾಯ ನಿಯಮದಲ್ಲಿ ದಾರಿ ಹಕ್ಕಿಗೆ ತೀವ್ರ ಬೆಂಬಲ
ಬೆಂಗಳೂರು (Bengaluru): ರೈತರು ತಮ್ಮ ಜಮೀನಿಗೆ ಹೋಗಲು ಕೆಲವು ಸಲ ಖಾಸಗಿ ಜಾಗಗಳನ್ನು ಬಳಕೆಗೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಅಲ್ಲದೆ ಕಾಲುದಾರಿ, ಬಂಡಿದಾರಿ ಮೂಲಕ ಸಾಗಬೇಕಾದ ಅನಿವಾರ್ಯತೆ ಕೆಲವೊಮ್ಮೆ ಜಗಳಗಳಿಗೆ ಕಾರಣವಾಗುತ್ತಿದ್ದು, ಈ ವಿಷಯವು ಕಾನೂನು ಮಟ್ಟಕ್ಕೂ ತಲುಪಿದ್ದ ಉದಾಹರಣೆಗಳು ಇವೆ.
ಈ ಸಮಸ್ಯೆಗಳಿಗೆ ಸಮಾಧಾನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹೊಸ ಸುತ್ತೋಲೆ (Karnataka government circular) ಹೊರಡಿಸಿದ್ದು, ರೈತರಿಗೆ ನೆಮ್ಮದಿಯ ಸುದ್ದಿಯಾಗಿದೆ. ಇದರಲ್ಲಿ, ರೈತರು ತಮ್ಮ ಜಮೀನಿಗೆ ಹೋಗಲು ಅನುವು ಮಾಡಿಕೊಡುವುದು ಎಲ್ಲರ ಕರ್ತವ್ಯ ಎಂಬ ನಿಲುವನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇದ್ರೆ ಈ ರೀತಿ ಮಾಡಲು ಸೂಚನೆ
ಹೆಚ್ಚಾಗಿ ಗೊಂದಲ ಉಂಟಾಗುವ ದಾರಿ ಹಕ್ಕು (Right of Way) ಸಂಬಂಧಿತ ವಿಚಾರಗಳಲ್ಲಿ ಈ ಹೊಸ ಸುತ್ತೋಲೆ ಸ್ಪಷ್ಟತೆ ಒದಗಿಸಿದೆ. ರೈತರು ವ್ಯವಸಾಯದ ಉದ್ದೇಶದಿಂದ ತಮ್ಮ ಜಮೀನಿಗೆ ಹೋಗಲು ಖಾಸಗಿ ಜಮೀನಿನಲ್ಲಿ ಕಾಲುದಾರಿ ಬಳಸುವ ಅವಶ್ಯಕತೆ ಉಂಟಾದಾಗ, ಅದನ್ನು ನಿರಾಕರಿಸಲು ಯಾರಿಗೂ ಹಕ್ಕಿಲ್ಲ.
ಈ ವೇಳೆ ಖಾಸಗಿ ಜಾಗದ ಮಾಲೀಕರು ಸಹಕರಿಸದೆ ಇದ್ದರೆ, ತಹಸೀಲ್ದಾರ್ ಅಥವಾ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ಸುತ್ತೋಲೆಯ ಪ್ರಮುಖ ಅಂಶವಾಗಿದೆ. ಈ ಮೂಲಕ ಸರಕಾರಿ ಸಹಾಯದಿಂದ ರೈತರಿಗೆ ನ್ಯಾಯ ಒದಗಿಸಲು ದಾರಿ ತೆರೆಯಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಹೊಸ ಕಡ್ಡಾಯ ನಿಯಮ!
ಸುತ್ತೋಲೆಯು 1966ರ ಭೂ ಕಂದಾಯ ನಿಯಮದ (Land Revenue Rules, 1966) 59ನೇ ನಿಯಮದ ಪ್ರಕಾರ ಜಾರಿಗೊಂಡಿದೆ. ಈ ನಿಯಮದಲ್ಲಿ ದಾರಿಯ ಹಕ್ಕುಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ ಮತ್ತು ಜಮೀನುಗಳ ಉಪಯೋಗದ ಹಕ್ಕುಗಳು ರಿಜಿಸ್ಟರ್ ನಲ್ಲಿ ದಾಖಲಿಸುವ ಅವಕಾಶವಿದೆ.
ಅಲ್ಲದೆ, The Indian Easement Act, 1882 ಪ್ರಕಾರ, ಜಮೀನಿನ ಮಾಲೀಕರಿಗೆ ಹಾಗೂ ಅದನ್ನು ಉಪಯೋಗಿಸುತ್ತಿರುವವರಿಗೆ ತಮ್ಮ ಜಮೀನಿಗೆ ಪ್ರವೇಶ ಮಾಡುವ ಹಕ್ಕು ಕಾನೂನುಬದ್ಧವಾಗಿದೆ. ಯಾರೂ ಈ ಹಕ್ಕಿಗೆ ತಡೆ ನೀಡಬಾರದು ಎಂಬ ನಿಲುವನ್ನು ಈ ನಿಯಮ ಪಡೆಯುತ್ತದೆ.
Karnataka Govt Rule Assures Right of Way for Farmers




