Bangalore News

ಹೊಸಕೋಟೆಯಲ್ಲಿ ತಂದೆಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ತಂದೆಯಿಂದಲೇ ಮಗಳ ಮೇಲೆ ಧಾರುಣ ಘಟನೆ ನಡೆದಿದೆ, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

  • ತಂದೆಯೇ ಮಗಳ ಮೇಲೆ ಅಮಾನವೀಯ ಕೃತ್ಯವೆಸಗಿದ ಘಟನೆ ಬೆಳಕಿಗೆ
  • ಮನೆಯಿಂದ ದೂರವಿದ್ದು ಯುವತಿ ಪಿಜಿಯಲ್ಲಿ ಆಶ್ರಯ
  • ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ, ಆರೋಪಿ ಬಂಧನ

ಬೆಂಗಳೂರು (Bengaluru): ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ (Hoskote) 19 ವರ್ಷದ ಯುವತಿಗೆ ಭಯಾನಕ ಅನುಭವ ಎದುರಾಯಿತು. ತನ್ನ ತಂದೆಯೇ ಅಪರಾಧಿ ಆಗಿ ಪರಿಣಮಿಸಿದ ಈ ದಾರುಣ ಘಟನೆಯು ಅಕ್ಷರಶಃ ಸಮಾಜವೇ ತಲೆತಗ್ಗಿಸುವಂತದ್ದು. ಯುವತಿ ನಿರಂತರ ಪೀಡನೆ ತಾಳಲಾರದೆ ಮನೆ ಬಿಟ್ಟು ಹೋಗಿ ಪಿಜಿ (PG) ಸೇರಿದ್ದಳು.

ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮಂಜುನಾಥ್ (Manjunath) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಈತನ ವಿರುದ್ಧ ಅತ್ಯಾಚಾರ ಮತ್ತು ಜೀವ ಬೆದರಿಕೆ ಆರೋಪಗಳು ಕೇಳಿಬಂದಿವೆ.

ಹೊಸಕೋಟೆಯಲ್ಲಿ ತಂದೆಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ

ಈತ ತನ್ನ ಕೃತ್ಯದ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು ಕಾರು ಮಾಲೀಕರಿಗೆ ಆತಂಕ! ಬೆಳಗಾಗುವಷ್ಟರಲ್ಲಿ ಚಕ್ರಗಳೇ ಮಾಯ

ಆರೋಪಿಯ ಬಂಧನ: ತನಿಖೆ ಮುಂದುವರಿದಿದೆ

ಸಂತ್ರಸ್ತ ಯುವತಿಯ ಕುಟುಂಭಸ್ಥಿತಿ ಮತ್ತು ಭಯವನ್ನು ಗಮನದಲ್ಲಿ ಇಟ್ಟುಕೊಂಡು, ಮಹಿಳಾ ಪೊಲೀಸ್ ಅಧಿಕಾರಿಗಳು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ. ತಂದೆಯ ಕಾಟ ತಾಳಲಾರದೆ ಯುವತಿ ಮನೆಯಿಂದ ದೂರವಾಗಿದ್ದಳು ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ಮಹಿಳಾ ಸುರಕ್ಷತೆ ಕುರಿತು ಮತ್ತೆ ಚರ್ಚೆ ಹುಟ್ಟಿಸಿದೆ.

Hoskote father arrested for abusing daughter

English Summary

Our Whatsapp Channel is Live Now 👇

Whatsapp Channel

Related Stories