ಗೃಹಲಕ್ಷ್ಮಿ ಯೋಜನೆ ಹಣ 3 ತಿಂಗಳಿಗೊಮ್ಮೆ ಜಮೆ! ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ

ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ ಹಣ ನೀಡಲು ತಾಂತ್ರಿಕ ತೊಂದರೆಗಳಿವೆ, ಆದರೂ ಮೂರು ತಿಂಗಳಿಗೆ ಹಣ ನೀಡುತ್ತಿದ್ದೇವೆ: ಹೆಚ್.ಎಂ. ರೇವಣ್ಣ ಸ್ಪಷ್ಟನೆ

  • ಜಿಎಸ್‌ಟಿ ತೊಂದರೆಗಳಿಂದ 1.2 ಲಕ್ಷ ಜನರಿಗೆ ಹಣ ಸಿಗಲೇ ಇಲ್ಲ
  • ಈಗಾಗಲೇ 58 ಸಾವಿರ ಪ್ರಕರಣಗಳನ್ನು ಬಗೆಹರಿಸಲಾಗಿದೆ
  • ಸಿಎಂ ಬದಲಾವಣೆ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ

ಬೆಂಗಳೂರು (Bengaluru): ಗೃಹಲಕ್ಷ್ಮಿ ಯೋಜನೆ ಕುರಿತಾಗಿ ಮೂರು ತಿಂಗಳಿಗೆ (3 months) ಒಂದೇ ಬಾರಿಯಾಗಿ ಹಣ ನೀಡಲಾಗುತ್ತಿದೆ, ಆದರೆ ಪ್ರತಿ ತಿಂಗಳು (monthly) ಹಣ ನೀಡಲು ಹಲವಾರು ತಾಂತ್ರಿಕ ಹಾಗೂ ಹಣಕಾಸು ತೊಂದರೆಗಳು ಎದುರಾಗುತ್ತಿರುವುದು ಗೃಹಲಕ್ಷ್ಮಿ (Gruha lakshmi Scheme) ಯೋಜನೆಯ ಅಧ್ಯಕ್ಷ ಹೆಚ್.ಎಂ. ರೇವಣ್ಣ (H M Revanna) ಅವರಿಂದ ತಿಳಿದುಬಂದಿದೆ.

ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ, “ನಾವು ಅಧಿಕಾರಕ್ಕೆ ಬಂದ ದಿನದಿಂದ ಹಣ ನಿಲ್ಲಿಸಿದ್ದಿಲ್ಲ. ಆದರೆ ಪ್ರತಿ ತಿಂಗಳು ಹಣ ನೀಡುವುದು ತಕ್ಷಣ ಸಾಧ್ಯವಿಲ್ಲ. ಜಿಎಸ್‌ಟಿ (GST) ವಿವರಗಳ ತೊಂದರೆ ಕಾರಣ 1.20 ಲಕ್ಷ ಮಹಿಳೆಯರಿಗೆ ಹಣ ರವಾನೆಯಾಗಿಲ್ಲ. ಅವರಲ್ಲಿ 58 ಸಾವಿರ ಪ್ರಕರಣಗಳನ್ನು ಈಗಾಗಲೇ ಬಗೆಹರಿಸಲಾಗಿದೆ” ಎಂದರು.

ಇದನ್ನೂ ಓದಿ : ಬೆಂಗಳೂರು ಸರ್ಕಾರಿ ಸೈಟ್‌ಗಳು ಹರಾಜು! ಅಡಿ ಬರೀ ₹500 ರೂಪಾಯಿ ಮಾತ್ರ

ಹಣ ನೀಡುವ ವ್ಯವಸ್ಥೆ ಹಲವು ಹಂತಗಳಲ್ಲಿ ತಾಂತ್ರಿಕ ತಪಾಸಣೆಗೊಳಗಾಗುತ್ತದೆ. ಬ್ಯಾಂಕ್ ಖಾತೆಗಳ (bank accounts) ಪರಿಶೀಲನೆ, ಆಧಾರ್-ಪ್ಯಾನ್ ಲಿಂಕ್, ಜಿಎಸ್‌ಟಿ ಲಾಭಾರ್ಥಿಗಳ ಹೆಸರಿನಲ್ಲಿ ತೊಂದರೆ ಇವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾನೂನುಬದ್ಧವಾಗೇ 3 ತಿಂಗಳಿಗೊಮ್ಮೆ ಹಣ ನೀಡುತ್ತಿರುವುದಾಗಿ ಸ್ಪಷ್ಟಪಡಿಸಲಾಗಿದೆ.

ನಂತರದ ಬೆಳವಣಿಗೆಗಳಲ್ಲಿ ಮತ್ತೆ ಹಲವು ಸಚಿವರು, ಅವರ ಮಾತನ್ನು ತಿರುಚಲು ಮುಂದಾದರು, ಆದರೆ ಇನ್ನೂ ಮಹಿಳೆಯರಿಗೆ ಯೋಜನೆಯಲ್ಲಿ ನಿಜಕ್ಕೂ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಗೊಂದಲಕ್ಕೆ ಸರಿಯಾದ ಉತ್ತರ ಸಿಗುತ್ತಲೇ ಇಲ್ಲ. ಇನ್ನೊಂದೆಡೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು, ಕೇವಲ ಒಂದೇ ತಿಂಗಳ ಹಣ ಬಾಕಿ ಇದೆ, ಒಂದು ವಾರದಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಈ ಬಿಗ್ ಅಪ್ಡೇಟ್! ಹೊಸ ಮಾಹಿತಿ

ಆದರೆ ಫಲಾನುಭವಿಗಳು, ತಮ್ಮ ಬ್ಯಾಂಕ್ ಪಾಸ್ ಬುಕ್ ತೋರಿಸುವುದರ ಮೂಲಕ, ತಮಗೆ ಮೂರು ತಿಂಗಳ ಹಣವೇ ಬಂದಿಲ್ಲ ಎನ್ನುತ್ತಿದ್ದಾರೆ. ಕೆಲವರು ಪ್ರಾರಂಭದ ಎರಡು ಮೂರು ಕಂತಿನ ನಂತರ ಹಣ ಜಮೆ ಆಗಿಲ್ಲ ಎಂದು ದೂರುತ್ತಿದ್ದಾರೆ.

Gruha Lakshmi Scheme

ಸಿಎಂ ಬದಲಾವಣೆಯ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಎಂ. ರೇವಣ್ಣ, “ಸಿಎಂ ಬದಲಾವಣೆ ಕುರಿತ ಯಾವುದೇ ನಿರ್ಧಾರ ಹೈಕಮಾಂಡ್ (high command) ಮಟ್ಟದಲ್ಲಿ ನಡೆದಿಲ್ಲ. ಕೆಲವೊಂದು ಗೊಂದಲಗಳು ಇವೆ ಆದರೆ ಪಕ್ಷದ ನಾಯಕರು ಅದನ್ನು ಬಗೆಹರಿಸಿದ್ದಾರೆ. ಮಾಧ್ಯಮಗಳ ಮುಂದೆ ಈ ವಿಚಾರ ಚರ್ಚೆ ಮಾಡದಂತೆ ಸೂಚನೆ ಇದೆ” ಎಂದು ಹೇಳಿದರು.

ಇದನ್ನೂ ಓದಿ: ರೈತರಿಗೆ ಬಂಪರ್ ಸಬ್ಸಿಡಿ! ಗಿರಣಿ, ರಾಗಿ ಕ್ಲೀನಿಂಗ್ ಯಂತ್ರಗಳಿಗೆ 90% ಸಹಾಯಧನ

ಡಿಕೆಶಿ (D K Shivakumar) ಮತ್ತು ಸಿದ್ದರಾಮಯ್ಯ (Siddaramaiah) ಪಕ್ಷದ ಜೋಡೆತ್ತುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.  ಪಕ್ಷದ ಬಲವರ್ಧನೆಗೆ ಇವರು ಸಂಕಲ್ಪ ಬದ್ಧರಾಗಿದ್ದಾರೆ” ಎಂದರು. ರಾಜಕೀಯದಲ್ಲಿ ತೊಂದರೆಗಳು ಸಾಮಾನ್ಯ, ಆದರೆ ಅಂತಿಮ ತೀರ್ಮಾನಗಳೆಲ್ಲವೂ ದೆಹಲಿ ಹೈಕಮಾಂಡ್ ಗೆ ಬಿಟ್ಟದ್ದು ಎಂದು ಅವರು ಅಭಿಪ್ರಾಯಪಟ್ಟರು.

Hurdles in Monthly Gruha lakshmi Payments

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories