ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ, ಕೋಲಾರದಲ್ಲಿ ಅತಿ ಹೆಚ್ಚು!

Story Highlights

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ (fake doctors) ಗಂಭೀರವಾಗಿದೆ.

ಬೆಂಗಳೂರು (Bengaluru): ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ (fake doctors) ಗಂಭೀರವಾಗಿದೆ. ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯಕ್ಕೆ ಹೆಸರುವಾಸಿಯಾಗಿದೆ. ಪ್ರತಿ ಜಿಲ್ಲೆಗೆ ಖಾಸಗಿ ಅಥವಾ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸೇವೆ ಸಲ್ಲಿಸುತ್ತಿವೆ.

ಬೆಂಗಳೂರು (Bengaluru), ಮೈಸೂರು (Mysuru), ದಾವಣಗೆರೆ, ಬೆಳಗಾವಿ (Belagavi), ಬಾಗಲಕೋಟೆ, ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ (Medical Colleges).

ಉಡುಪಿಗೆ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವು

ಕಳೆದ ದಶಕಗಳಲ್ಲಿ ಸ್ಥಾಪಿತವಾದ ವೈದ್ಯಕೀಯ ಕಾಲೇಜುಗಳ ಮೂಲಕ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಸಾವಿರಾರು ವೈದ್ಯರು ಉನ್ನತ ಹುದ್ದೆಯಲ್ಲಿದ್ದಾರೆ. ಇಂತಹ ರಾಜ್ಯವನ್ನು ನಕಲಿ ವೈದ್ಯರ ಹಾವಳಿಯೂ ಕಾಡುತ್ತಿದೆ.

ಈ ವರ್ಷ 623 ನಕಲಿ ವೈದ್ಯರನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಕೋಲಾರ, ವಿಜಯಪುರ, ತುಮಕೂರು ಭಾಗದಲ್ಲಿ ಹೆಚ್ಚು ಬೋಗಸ್ ವೈದ್ಯರು ಇರುವುದನ್ನು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಖಚಿತಪಡಿಸಿದೆ.  ಇತ್ತೀಚೆಗೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ರಾಜ್ಯಾದ್ಯಂತ ಏಕಕಾಲಕ್ಕೆ ದಾಳಿ ನಡೆಸಿತ್ತು.

ರಾಜ್ಯದಲ್ಲಿ 35,132 ಮಂದಿ ವೈದ್ಯರಾಗಿ ನೋಂದಣಿ (Registered Doctors) ಮಾಡಿಸಿಕೊಂಡಿದ್ದು, 623 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದು, 163 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 193 ಕ್ಲಿನಿಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 89 ಮಂದಿಗೆ ದಂಡ ವಿಧಿಸಲಾಗಿದೆ.

ಬೆಂಗಳೂರು ನಗರದಲ್ಲಿ ರಾಜಕಾಲುವೆ ಅಕ್ಕ-ಪಕ್ಕ 50 ಅಡಿಯಲ್ಲಿ ಇರುವ ಕಟ್ಟಡಗಳ ತೆರವು!

ಕೋಲಾರದಲ್ಲಿ ಅತಿ ಹೆಚ್ಚು – Highest in Kolar

ರಾಜ್ಯದಲ್ಲಿ ನಕಲಿ ವೈದ್ಯರಿಲ್ಲದ ಜಿಲ್ಲೆ ಇಲ್ಲ. ಇದರಲ್ಲಿ ಕೋಲಾರದಲ್ಲಿ (Kolar) 2023 ರಿಂದ 2024 ಸೆಪ್ಟೆಂಬರ್ ವರೆಗೆ ನಡೆದ ದಾಳಿಯಲ್ಲಿ 115 ನಕಲಿ ವೈದ್ಯರನ್ನು (fake doctors) ಗುರುತಿಸಲಾಗಿತ್ತು. ತುಮಕೂರಿನಲ್ಲಿ 84, ವಿಜಯನಗರದಲ್ಲಿ 81, ಕಲಬುರಗಿಯಲ್ಲಿ 64 ಮಂದಿ ಸಿಕ್ಕಿಬಿದ್ದರೆ ಉಳಿದ ಜಿಲ್ಲೆಗಳಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ದಕ್ಷಿಣ ಕನ್ನಡದಲ್ಲಿ 17 ಮಂದಿ ಹಾಗೂ ಪ್ರತಿ ಜಿಲ್ಲೆಯಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ.

identified 623 fake doctors this year in Karnataka including Bengaluru

Related Stories