ಪಿಯುಸಿ ಪಾಸ್ ಆಗಿದ್ರೆ ಸಾಕು ಗುರು, ಸಿಗಲಿದೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸ! ಇಂದೇ ಅಪ್ಲೈ ಮಾಡಿ
ಪ್ರಸ್ತುತ ರಾಜ್ಯದ ಸಾವಿರಾರು ಗ್ರಾಮ ಪಂಚಾಯಿತಿ 6,026 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲಾಗುತ್ತದೆ. ಖಾಲಿ ಇರುಗ 4 ಹುದ್ದೆಗಳು ಯಾವುವು ಎಂದು ನೋಡೋಣ
ಪಿಯುಸಿ ಓದಿದ್ದು ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಕಾದಿದೆ. ಪ್ರಸ್ತುತ ಗ್ರಾಮ ಪಂಚಾಯಿತಿಯಲ್ಲಿ (Gram Panchayat Job) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಬಗ್ಗೆ ಎಲ್ಲಾ ಜಿಲ್ಲೆಗಳ ಆಡಳಿತಾಧಿಕಾರಿಗಳಿಗೆ ಆದೇಶವನ್ನು ಕಳಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಪಿಯುಸಿ ಪಾಸ್ ಅವಿರುವವರಿಗೆ ಈ ಹುದ್ದೆಯನ್ನು ಪಡೆಯುವುದಕ್ಕೆ ಅವಕಾಶ ಇದ್ದು, ನಿಮಗೆಲ್ಲಾ ಸರ್ಕಾರಿ ಉದ್ಯೋಗ ಪಡೆಯಲು ಇದು ಒಂದು ಉತ್ತಮವಾದ ಅವಕಾಶ ಆಗಿದೆ. ಹಾಗಿದ್ದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಯಾವೆಲ್ಲಾ ಹುದ್ದೆಗಳು (Government Job) ಖಾಲಿ ಇದೆ? ಅವುಗಳಿಗೆ ಬೇಕಾಗಿರುವ ಅರ್ಹತೆಗಳು ಏನೇನು? ಎಲ್ಲವನ್ನು ತಿಳಿಸಿಕೊಡುತ್ತೇವೆ ನೋಡಿ..
ಎಲ್ಲಾ ದಾಖಲೆಗಳು ಸರಿ ಇದ್ರೂ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಸರ್ಕಾರದಿಂದ ಬಿಗ್ ಅಪ್ಡೇಟ್
ಖಾಲಿ ಇರುವ ಹುದ್ದೆಗಳ ವಿವರ:
ಪ್ರಸ್ತುತ ರಾಜ್ಯದ ಸಾವಿರಾರು ಗ್ರಾಮ ಪಂಚಾಯಿತಿ 6,026 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲಾಗುತ್ತದೆ. ಖಾಲಿ ಇರುಗ 4 ಹುದ್ದೆಗಳು ಯಾವುವು ಎಂದು ನೋಡುವುದಾದರೆ..
1. ಬಿಲ್ ಕಲೆಕ್ಟರ್
2. ಡೇಟಾ ಎಂಟ್ರಿ ಆಪರೇಟರ್ ಕಂ ಕ್ಲರ್ಕ್
3. ವಾಟರ್ ಆಪರೇಟರ್
4. ಸ್ವಚ್ಛತಾಗಾರರು
ಇದಿಷ್ಟು ಕೆಲಸಗಳು ಪ್ರಸ್ತುತ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ.
ನೇಮಕಾತಿ ನಿಯಮಗಳು:
ಪ್ರಸ್ತುತ ಈ ಹುದ್ದೆಗಳು ಖಾಲಿ ಇರುವುದಕ್ಕೆ ಕಾರಣ ಈಗಾಗಲೇ ಕೆಲಸ ಮಾಡುತ್ತಿದ್ದವರು ಮರಣ ಹೊಂದಿರುವುದು, ನಿವೃತ್ತಿ ಹೊಂದಿರುವುದು ಅಥವಾ ಪ್ರೊಮೋಷನ್ ಪಡೆದಿರುವುದು ಆಗಿರುತ್ತದೆ.
ಈ ಹುದ್ದೆಗಳಲ್ಲಿ ಬೇರೆಯವರು ಕೆಲಸ ಮಾಡದೇ ಹೋದರೆ, ನೇಮಕಾತಿ ಮಾಡಿಕೊಳ್ಳಬಹುದು ಎಂದು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ. ಈ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, 29/6/2020ರಲ್ಲಿ ಜಾರಿಗೆ ತಂದಿರುವ ನಿಯಮಗಳ ಅನುಸಾರ, ಪಂಚಾಯಿತಿ ಇಲಾಖೆಯ ಅಧಿಕಾರಿಗಳಿಗೆ ಆದೇಶವನ್ನು ತಲುಪಿಸಲಾಗಿದೆ.
ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್! ನೀವೂ ಅರ್ಜಿ ಹಾಕಿದ್ರೆ ಇಲ್ಲಿದೆ ಅಪ್ಡೇಟ್
ವಿದ್ಯಾರ್ಹತೆ:
*ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಪಿಯುಸಿ ಪಾಸ್ ಆಗಿದ್ರೆ ಸಾಕು, ಅಂಥವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
*ಹಾಗೆಯೇ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಕೂಡ ದ್ವಿತೀಯ ಪಿಯುಸಿ ಪಾಸ್ ಆಗಿದ್ರೆ ಸಾಕು, ಆದರೆ ಅದರ ಜೊತೆಗೆ ಕಂಪ್ಯೂಟರ್ ಕಲಿತಿರಬೇಕು.
*ವಾಟರ್ ಆಪರೇಟರ್ ಹುದ್ದೆಗೆ 7 ನೇ ತರಗತಿ ಪಾಸ್ ಆಗಿರುವವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
*ಸ್ವಚ್ಛತಾಗಾರರ ಹುದ್ದೆಗೆ ವಿದ್ಯಾರ್ಹತೆ ಇರುವುದಿಲ್ಲ, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
ತಮ್ಮ ಜಮೀನುಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ರಾಜ್ಯದ ಎಲ್ಲಾ ಆಸ್ತಿಗಳಿಗೆ ಲಿಂಕ್ ಕಡ್ಡಾಯ!
ನೇಮಕಾತಿ ಪ್ರಕ್ರಿಯೆ:
ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಈ ನಾಲ್ಕು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು, ಜಿಲ್ಲಾ ಪಂಚಾಯಿತಿಯ ವತಿಯಿಂದ ನೇಮಕಾತಿ ಮಾಡಿಕೊಳ್ಳುವುದಕ್ಕೆ ಅಧಿಸೂಚನೆ ಹೊರಡಿಸಿ, ಜಿಲ್ಲೆಯ ಮಟ್ಟಕ್ಕೆ ಅನುಗುಣ ಆಗುವ ಹಾಗೆ ನೇಮಕಾತಿ ನಡೆಸಿ, ಆಯ್ಕೆಯಾಗುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಗ್ರಾಮ ಪಂಚಾಯಿತಿ CEO ಗಳು ನೇಮಕಾತಿ ನಡೆಸಲಿದ್ದಾರೆ, ಈ ಪ್ರಕ್ರಿಯೆಗೆ ತಕ್ಕ ಹಾಗೆ, ವಿವಿಧ ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಕೆ ಶುರುವಾದ ಬಳಿಕ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಬಹುದು.
If you pass PUC, you will get a job in Gram Panchayat, Apply today