ರೈತರಿಗೆ ಸಂಬಂಧಿಸಿದ ಹಾಗೆ ಭೂಮಿಯ (Agriculture Land) ವಿಚಾರದಲ್ಲಿ ಸಾಕಷ್ಟು ಮೋಸ ನಡೆಯುತ್ತಿದೆ. ಅಲ್ಲದೆ ಮರಣ ಹೊಂದಿರುವ ರೈತರ ಹೆಸರಿನಲ್ಲಿ ಇನ್ನು ದಾಖಲೆಗಳು ಇದ್ದು, ಇದೆಲ್ಲವೂ ಸರ್ಕಾರದ ಗಮನಕ್ಕೆ ಬಂದಿದೆ.
ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರೆ ಈ ಒಂದು ಪ್ರಮುಖ ಕೆಲಸವನ್ನು ಮಾಡಲೇಬೇಕು ಎಂದು ಸೂಚನೆಯನ್ನು ನೀಡಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಏನು ಎಂದು ತಿಳಿಯೋಣ…
ರೈತರಿಗೆ ಆಗುತ್ತಿರುವ ಈ ತೊಂದರೆ ಇಂದ ತಪ್ಪಿಸಿಕೊಳ್ಳಲು ಸರ್ಕಾರ ಒಂದು ಪರಿಹಾರವನ್ನು ತಂದಿದ್ದು, ಎಲ್ಲಾ ರೈತರು ಕೂಡ ತಮ್ಮ RTC ಅನ್ನು ಆಧಾರ್ ಕಾರ್ಡ್ (Aadhaar Card) ಜೊತೆಗೆ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.
7ನೇ ತರಗತಿ ಪಾಸ್ ಆಗಿದ್ರೂ ಸಾಕು, ನಿಮಗೆ ಸಿಗಲಿದೆ KSRTC ಯಲ್ಲಿ ಕೆಲಸ, ಇಂದೇ ಅರ್ಜಿ ಸಲ್ಲಿಸಿ!
ಈ ಪ್ರಕ್ರಿಯೆಯನ್ನು ಈಗಾಗಲೇ ಶುರು ಮಾಡಲಾಗಿದೆ. ಒಂದು ಕೃಷಿ ಭೂಮಿಯ ಮಾಲೀಕತ್ವವನ್ನು ದೃಢೀಕರಿಸಲು, ಹಾಗೆಯೇ ಕೃಷಿ ಭೂಮಿಯ ವಿಚಾರದಲ್ಲಿ ಆಗುವ ಮೋಸಗಳನ್ನು ತಡೆಯಲು ಇದು ಸರಿಯಾದ ವಿಧಾನ ಆಗಿದೆ.
ಈಗ RTC ಸ್ಟೇಟಸ್ ಹೇಗಿದೆ ಎಂದರೆ, ನಮ್ಮ ರಾಜ್ಯದಲ್ಲಿ ಮರಣ ಹೊಂದಿರುವ 19 ಲಕ್ಷ ರೈತರ ಹೆಸರಿನಲ್ಲಿ ಸುಮಾರು 6 ಲಕ್ಷ RTC ರಿಜಿಸ್ಟರ್ ಆಗಿದೆ. ಕೆಲವು ಸಾರಿ ಕುಟುಂಬಗಳಲ್ಲಿ ಆಸ್ತಿ ಹಂಚಿಕೆ ವೇಳೆ ಆಗುವ ಸಮಸ್ಯೆ ಇಂದ, ಜಗಳದಿಂದ ಕೆಲವು ರೈತರು ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಬದಲಾಯಿಸಿಯೇ ಇಲ್ಲ, ಅದು ಅವರ ತಂದೆಯ ಹೆಸರಿನಲ್ಲೇ ಇದೆ. ಇದನ್ನು ತಪ್ಪಿಸಲು ಗ್ರಾಮಾಧಿಕಾರಿಗಳೇ ರೈತರ ಮನೆಗೆ ಹೋಗಿ, ಆಧಾರ್ ಅನ್ನು RTC ಜೊತೆಗೆ ಲಿಂಕ್ ಮಾಡುವುದಕ್ಕೆ ಸಹಾಯ ಮಾಡುತ್ತಾರೆ.
ಬಾಡಿಗೆ ಕಟ್ಟುವವರಿಗೆ ಸಿಹಿ ಸುದ್ದಿ, ಬೆಂಗಳೂರಿನ ಈ ಏರಿಯಾಗಳಲ್ಲಿ ಕಡಿಮೆಯಾಗಿದೆ ಬಾಡಿಗೆ ದರ!
ಇದಕ್ಕಾಗಿ ಒಂದು ಅಭಿಯಾನವನ್ನು ಶುರು ಮಾಡಲಾಗಿದ್ದು, ಅದರ ಹೆಸರು ‘ನನ್ನ ಭೂಮಿ, ನನ್ನ ಗುರುತು’. ಕಂದಾಯ ಇಲಾಖೆ ಈ ಒಂದು ಅಭಿಯಾನ ಶುರು ಮಾಡಿ, ಇದರ ಮೂಲಕ ಆಧಾರ್ ಜೊತೆಗೆ RTC ಲಿಂಕ್ ಮಾಡಿಕೊಡಲಾಗುತ್ತಿದೆ.
ಹೊರ ರಾಜ್ಯಗಳಲ್ಲಿ ಕೂಡ ಈ ಪ್ರಕ್ರಿಯೆ ಶುರುವಾಗಿದೆ. ರೈತರು ಮೃತರಾದ ಬಳಿಕ ಅವರ ಮಕ್ಕಳು ತಾವಾಗಿಯೇ ಬಂದು, RTC ಬದಲಾವಣೆ ಮಾಡುವುದಕ್ಕೆ ಕಂದಾಯ ಅದಾಲತ್ ಅಭಿಯಾನವನ್ನು ಜಾರಿಗೆ ತರಲಾಗಿದೆ.
10, 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ ಒಮ್ಮೆಲೇ ಬಿಡುಗಡೆ ಆಗಲಿದೆ! ಇಲ್ಲಿದೆ ಬಿಗ್ ಅಪ್ಡೇಟ್
ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ ನಮ್ಮ ರಾಜ್ಯದಲ್ಲಿ ಒಟ್ಟು 1.87 ಕೋಟಿ ರೈತರ RTC ದಾಖಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ 3.86 ಕೋಟಿ RTC ಗಳು ಬೇರೆ ಬೇರೆ ಹೆಸರಿನಲ್ಲಿ ಕಂಡುಬಂದಿದೆ. ಇದೆಲ್ಲವನ್ನು ಸರಿಪಡಿಸಲು ಸರ್ಕಾರ ಈ ಒಂದು ಹೊಸ ಅಭಿಯಾನವನ್ನು ಶುರು ಮಾಡಿದ್ದು, ಅವುಗಳನ್ನು ಎಲ್ಲಾ ರೈತರು ಪಾಲಿಸಬೇಕು.
Link aadhaar card to Property, link to all state properties is mandatory
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.