ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಗಿಫ್ಟ್: ಸಾಲದ ಮೇಲೆ ಬಡ್ಡಿ ಮನ್ನಾ
2025-26ರ ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು. ಎರಡು ಬ್ಯಾಂಕ್‌ಗಳಲ್ಲಿ ರೈತರ ಬಡ್ಡಿ ಮನ್ನಾ. ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ-ಮೇಕೆ ಮಾರುಕಟ್ಟೆ ಸ್ಥಾಪನೆ.

- ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ಬಡ್ಡಿ ಮನ್ನಾ ಘೋಷಣೆ
- 37 ಲಕ್ಷ ರೈತರಿಗೆ ₹28,000 ಕೋಟಿ ಸಾಲ ನೀಡಲು ಸರ್ಕಾರ ಯೋಜನೆ
- ಬೆಂಗಳೂರಿನಲ್ಲಿ ಹೈಟೆಕ್ ಮಾರುಕಟ್ಟೆ, ಶ್ರಮಿಕರಿಗೆ ವಿಮಾ ಯೋಜನೆ
ರೈತರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ!
ಬೆಂಗಳೂರು (Bengaluru): 2025-26ನೇ ಸಾಲಿನ ಬಜೆಟ್‌ನ್ನು (Karnataka Budget 2025-26) ಮಂಡಿಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ರೈತರಿಗಾಗಿ ವಿಶೇಷ ಗಿಫ್ಟ್ ಘೋಷಿಸಿದ್ದಾರೆ.
ರಾಜ್ಯದ ಕೃಷಿ ಅಭಿವೃದ್ಧಿಗೆ ಮಹತ್ವ ನೀಡಿರುವ ಅವರು ಡಿಸಿಸಿ (DCC) ಮತ್ತು ಪಿಕಾರ್ಡ್ ಬ್ಯಾಂಕ್ (Picard Bank) ಮೂಲಕ ರೈತರು ಪಡೆದಿದ್ದ ಸಾಲದ ಬಡ್ಡಿಯನ್ನು (Loan Interest) ಸಂಪೂರ್ಣ ಮನ್ನಾ ಮಾಡಲಾಗಿದೆ.
ಈ ಯೋಜನೆಯಡಿ ₹240 ಕೋಟಿ ರೂಪಾಯಿ ಬಡ್ಡಿ ಮನ್ನಾ (Loan Interest Waived for Farmers) ಮಾಡಲಾಗಿದ್ದು, ರೈತರು ಯಾವುದೇ ಹೆಚ್ಚುವರಿ ಹಣ ಭರಿಸುವ ಅಗತ್ಯವಿಲ್ಲ. ಅಲ್ಲದೆ, 37 ಲಕ್ಷ ರೈತರು ಈ ಯೋಜನೆಯ ಲಾಭ ಪಡೆಯಲಿದ್ದು, ₹28,000 ಕೋಟಿ ರೂಪಾಯಿ ಕೃಷಿ ಸಾಲ (Agriculture Loan) ಒದಗಿಸಲಾಗುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಕುರಿತು ಕರ್ನಾಟಕ ಬಜೆಟ್‌ನಲ್ಲಿ ಮಹತ್ವದ ಘೋಷಣೆ
ಬೆಂಗಳೂರಿನಲ್ಲಿ ಆಧುನಿಕ ಕುರಿ-ಮೇಕೆ ಮಾರುಕಟ್ಟೆ!
ರಾಜ್ಯದ ಪಶುಸಂಗೋಪನೆ ಕ್ಷೇತ್ರವನ್ನು ವೃದ್ಧಿಸಲು ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ-ಮೇಕೆ ಮಾರುಕಟ್ಟೆ ಸ್ಥಾಪಿಸಲಾಗುವುದು. ಜೊತೆಗೆ, ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಹೂ ಮಾರುಕಟ್ಟೆ (Hi-Tech Flower Market) ಮತ್ತು ಕೆಜಿಎಫ್‌ನಲ್ಲಿ ಆಧುನಿಕ ಮಾರುಕಟ್ಟೆ (Modern Market in KGF) ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ.
ಈ ಯೋಜನೆಗಳು ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವುದರ ಜೊತೆಗೆ, ಕೃಷಿ ಆಧಾರಿತ ಉದ್ಯೋಗಗಳನ್ನೂ (Agri-based Jobs) ಹೆಚ್ಚಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕರ್ನಾಟಕ ಆಸ್ತಿ ನೋಂದಣಿ ನಿಯಮ, ಇನ್ಮುಂದೆ ಈ ದಾಖಲೆಗಳು ಕಡ್ಡಾಯ!
ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಹೊಸ ಯೋಜನೆಗಳು!
ಬೆಂಗಳೂರು ಹೊರವಲಯದಲ್ಲಿ ಸ್ಯಾಟಲೈಟ್ ಮಾರುಕಟ್ಟೆ (Satellite Market) ಸ್ಥಾಪನೆಗೊಳ್ಳಲಿದ್ದು, ಇದರಿಂದ ರಾಜ್ಯದ ಕೃಷಿ ವ್ಯಾಪಾರಕ್ಕೆ ಹೆಚ್ಚಿನ ವೇಗ ಸಿಗಲಿದೆ. ಮಾರುಕಟ್ಟೆಯಲ್ಲಿ ನೋಂದಾಯಿತ ಶ್ರಮಿಕರು ಅನುಕೂಲ ಪಡೆಯಲು, ಸರ್ಕಾರ ವಿಶೇಷ ವಿಮಾ ಯೋಜನೆ (Insurance) ಪ್ರಾರಂಭಿಸಿದೆ. ಪರವಾನಗಿ ಪಡೆದ ಶ್ರಮಿಕರು ದುರ್ಘಟನೆಯಲ್ಲಿ ಮೃತಪಟ್ಟರೆ, ಅವರ ಕುಟುಂಬಕ್ಕೆ ₹5 ಲಕ್ಷ ರೂ. ವಿಮಾ ಮೊತ್ತ ನೀಡಲಾಗುವುದು.
ಇದನ್ನೂ ಓದಿ: ಇಂತಹ ರೇಷನ್ ಕಾರ್ಡುಗಳು ಅಮಾನ್ಯ, ಮಾರ್ಚ್ 31 ಡೆಡ್‌ಲೈನ್! ಬಿಗ್ ಅಪ್‌ಡೇಟ್
ಗ್ರಾಮೀಣ ಆರ್ಥಿಕತೆಗೆ ಬಜೆಟ್ ಬಲ!
ಈ ಬಜೆಟ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ (Rural Development) ಒತ್ತುವರಿ ನೀಡಿದ್ದು, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಕೃಷಿ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳ ಜಾರಿಗೆ ಸರ್ಕಾರ ಬದ್ಧವಾಗಿದೆ.
ರಾಜ್ಯದ ರೈತರು ಉತ್ತಮ ಬೆಂಬಲ ಪಡೆಯುವಂತೆ ಗೋದಾಮು (Warehouse Facilities), ಶೀತಗೋದಾಮುಗಳು (Cold Storage), ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ (Horticulture Market) ಮತ್ತು ಪೂರೈಕೆ ಸರಪಳಿಗಳನ್ನು (Supply Chain) ಸುಧಾರಣೆ ಮಾಡಲಾಗುತ್ತಿದೆ.
Karnataka Budget 2025, Loan Interest Waived for Farmers





