ಕರ್ನಾಟಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಹಳೆ ಪಿಂಚಣಿ ಯೋಜನೆ ಅಪ್ಡೇಟ್
ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (Old Pension Scheme - OPS) ಮರು ಜಾರಿಗೆ ಭರವಸೆ ದೊರಕಿದೆ.
- ಹಳೆಯ ಪಿಂಚಣಿ ಮರು ಜಾರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಚಿಂತನೆ
- ಸರ್ಕಾರಿ ಸಮಿತಿ ಅಧ್ಯಯನ, ವರದಿ ಬಳಿಕ OPS ಜಾರಿಗೆ ಸರ್ಕಾರದ ಯೋಜನೆ
- ಹಳೆಯ ಪಿಂಚಣಿ ಯೋಜನೆಯೇ ಉತ್ತಮ – ನೌಕರರ ವಾದ
ಬೆಂಗಳೂರು (Bengaluru): ಹಳೆಯ ಪಿಂಚಣಿ (OPS) ವಿಚಾರದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನಿರೀಕ್ಷೆ, ಹೌದು, ರಾಜ್ಯದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (Old Pension Scheme – OPS) ಮರು ಜಾರಿಗೆ ಭರವಸೆ ದೊರಕಿದೆ.
ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದು, ಅಂಜುಮ್ ಪರ್ವೇಜ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ನೀಡಿದ ನಂತರ ಸರ್ಕಾರ ಹಳೆಯ ಪಿಂಚಣಿ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬರುತ್ತೋ ಇಲ್ವೋ? ಅನುಮಾನ ಇದ್ರೆ ಇಲ್ಲಿದೆ ಬಿಗ್ ಅಪ್ಡೇಟ್
ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಮರು ಜಾರಿಗೆ (Re-Implementation) ಒತ್ತಾಯಿಸುತ್ತಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS – National Pension System) ಹಲವು ಆರ್ಥಿಕ ಪ್ರಯೋಜನಗಳನ್ನು (Financial Benefits) ಒದಗಿಸಿದರೂ, ಹಳೆಯ ಯೋಜನೆಯು ನಿರಂತರ ಮಾಸಿಕ ಪಿಂಚಣಿ (Lifetime Pension) ಮಾದರಿ ಉದ್ಯೋಗಿಗಳಿಗೆ ಹೆಚ್ಚು ಲಾಭಕರ ಎಂದು ವಾದಿಸಲಾಗಿದೆ.
ಹಳೆಯ ಪಿಂಚಣಿ vs ಹೊಸ ಪಿಂಚಣಿ – ಏನು ವ್ಯತ್ಯಾಸ?
ಹಳೆಯ ಪಿಂಚಣಿ (OPS) ಅಡಿಯಲ್ಲಿ ನೌಕರರ ವೇತನದಿಂದ ಹಣ ಕಡಿತಗೊಳ್ಳುವುದಿಲ್ಲ ಹಾಗೂ ನಿವೃತ್ತಿ ಆದಾಯ (Retirement Income) ನಿರ್ವಹಣೆಗೆ ಇದು ಹೆಚ್ಚು ಲಾಭದಾಯಕ. ಹೀಗಾಗಿ, ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಹಳೆಯ ಪಿಂಚಣಿ ಮರು ಜಾರಿಗೆ ತೀರ್ಮಾನ ತೆಗೆದುಕೊಂಡಿವೆ.
ಇದನ್ನೂ ಓದಿ: ಬೆಂಗಳೂರು ಬಡಾವಣೆಯಲ್ಲಿ ಸರ್ಕಾರದಿಂದ ಕಡಿಮೆ ಬೆಲೆಗೆ ಸೈಟುಗಳ ಹರಾಜು
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿರುವ ಕರ್ನಾಟಕ ಮಹಿಳೆಯರಿಗೆ ₹6,000 ಸಹಾಯಧನ
OPS ಜಾರಿಯಾದರೆ ಏನಾಗಬಹುದು?
- ನೌಕರರಿಗೆ ನಿವೃತ್ತಿ ಆದಾಯ ಖಚಿತ
- ಆರ್ಥಿಕ ಭದ್ರತೆ ಹೆಚ್ಚಳ
- ಪಿಂಚಣಿ ತೆರಿಗೆ ಮುಕ್ತ
- ವೇತನದಿಂದ ಯಾವುದೇ ಕಡಿತವಿಲ್ಲ
ರಾಜ್ಯ ಸರ್ಕಾರ (Karnataka Government) ಈ ಕುರಿತು ಸಮಿತಿ ವರದಿ ಅಧ್ಯಯನ ನಡೆಸಿದ ಬಳಿಕ ಅಂತಿಮ ನಿರ್ಧಾರ (Final Decision) ಪ್ರಕಟಿಸಲಿದೆ. ನೌಕರರ ಭವಿಷ್ಯದ ದೃಷ್ಟಿಯಿಂದ OPS ಮರು ಜಾರಿಯಾಗಬೇಕೆಂದು ಒತ್ತಾಯ ಮುಂದುವರಿದಿದೆ.
Karnataka Govt Plans to Reinstate Old Pension Scheme
Our Whatsapp Channel is Live Now 👇