ಬಿಪಿಎಲ್ ಕಾರ್ಡ್ ಹೊಂದಿರುವ ಕರ್ನಾಟಕ ಮಹಿಳೆಯರಿಗೆ ₹6,000 ಸಹಾಯಧನ
ಗರ್ಭಿಣಿ ಮಹಿಳೆಯರಿಗೆ ರಾಜ್ಯ ಸರ್ಕಾರದ ಮಾತೃಶ್ರೀ ಯೋಜನೆ ಅಡಿ ಆರ್ಥಿಕ ಸಹಾಯ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಿ.

- ಮಾತೃಶ್ರೀ ಯೋಜನೆ ಅಡಿ ಗರ್ಭಿಣಿಯರಿಗೆ ₹6,000 ಸಹಾಯ
- BPL Card ಹೊಂದಿರುವ ಮಹಿಳೆಯರಿಗೆ ಮಾತ್ರ ಲಭ್ಯ
- ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ, ನೇರ ಬ್ಯಾಂಕ್ ಖಾತೆಗೆ ಹಣ
ಮಾತೃಶ್ರೀ ಯೋಜನೆ – ಗರ್ಭಿಣಿಯರಿಗೆ ಆರ್ಥಿಕ ನೆರವು
ಬೆಂಗಳೂರು (Bengaluru): ಕರ್ನಾಟಕದ ಗರ್ಭಿಣಿ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮಾತೃಶ್ರೀ ಯೋಜನೆ (Mathrushree Yojana) ಅಡಿ ₹6,000 ಆರ್ಥಿಕ ಸಹಾಯ ನೀಡಲಾಗುತ್ತಿದೆ.
ಈ ಯೋಜನೆಯು ತಾಯಂದಿರ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ಒದಗಿಸಲು 2018ರಲ್ಲಿ ಪ್ರಾರಂಭಿಸಲಾಯಿತು. ಬಿಪಿಎಲ್ ಕುಟಿಂಬದ (Below Poverty Line) ಮಹಿಳೆಯರಿಗೆ ಈ ಸೌಲಭ್ಯ ಲಭ್ಯವಿದೆ.
ಇದನ್ನೂ ಓದಿ: ಬೆಂಗಳೂರು ಬಡಾವಣೆಯಲ್ಲಿ ಸರ್ಕಾರದಿಂದ ಕಡಿಮೆ ಬೆಲೆಗೆ ಸೈಟುಗಳ ಹರಾಜು
ಯೋಜನೆಯ ಉದ್ದೇಶ ಏನು?
ಈ ಯೋಜನೆಯ ಮುಖ್ಯ ಉದ್ದೇಶ ಗರ್ಭಿಣಿಯರ ಆರೋಗ್ಯ ಸುಧಾರಣೆ ಹಾಗೂ ಮಾತೃ-ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು. ಈ ಯೋಜನೆ ಮೊದಲ ಎರಡು ಗರ್ಭಧಾರಣೆಗಳಿಗೆ ಮಾತ್ರ ಲಭ್ಯ. ಗರ್ಭಿಣಿ ಮಹಿಳೆಗೆ ಒಟ್ಟು ₹6,000 ಹಣ ಕಂತುಗಳ ರೂಪದಲ್ಲಿ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಜಮೆಯಾಗುತ್ತದೆ.
ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
- ₹6,000 ಆರ್ಥಿಕ ನೆರವು – ಪ್ರತಿ ತಿಂಗಳು ₹1,000 ಎಂಬಂತೆ 6 ತಿಂಗಳು ಹಣ ಲಭ್ಯ.
- 15 ತಿಂಗಳ ಪೌಷ್ಠಿಕ ಆಹಾರ – ಗರ್ಭಾವಸ್ಥೆ ಹಾಗೂ ಹೆರಿಗೆಯ ನಂತರ ಅಂಗನವಾಡಿಯಲ್ಲಿ ಉಚಿತ ಊಟ.
- ನೇರ ಬ್ಯಾಂಕ್ ಖಾತೆಗೆ ಹಣ – ಯಾವುದೇ ಮಧ್ಯವರ್ತಿಗಳಿಲ್ಲ, ಸಂಪೂರ್ಣ ಪಾರದರ್ಶಕ ವಿಧಾನ.
- BPL Card ಕುಟುಂಬಗಳಿಗೆ ಮಾತ್ರ ಲಭ್ಯ – ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಮಹಿಳೆಯರಿಗೆ ಈ ಯೋಜನೆ.
ಇದನ್ನೂ ಓದಿ: ಕರ್ನಾಟಕ ಕಾರ್ಮಿಕರಿಗೆ ಭರ್ಜರಿ ಸುದ್ದಿ, 60,000 ಸಹಾಯಧನ! ಅರ್ಜಿ ಸಲ್ಲಿಸಿ
ಅರ್ಹತಾ ಮಾನದಂಡಗಳು
- ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
- BPL Ration Card ಹೊಂದಿರಬೇಕು
- ಮೊದಲ ಎರಡು ಗರ್ಭಧಾರಣೆಗಳಿಗಷ್ಟೇ ಯೋಜನೆ ಲಭ್ಯ
- ಆಧಾರ್-ಲಿಂಕ್ ಬ್ಯಾಂಕ್ ಖಾತೆ ಅಗತ್ಯ
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್
BPL ಪಡಿತರ ಚೀಟಿ
ಗರ್ಭಧಾರಣೆಯ ವೈದ್ಯಕೀಯ ಪ್ರಮಾಣಪತ್ರ
ನಿವಾಸ ಪ್ರಮಾಣಪತ್ರ
ತಾಯಿ ಕಾರ್ಡ್ (Mother Card)
ಬ್ಯಾಂಕ್ ಖಾತೆ ವಿವರ
ಇದನ್ನೂ ಓದಿ: ನಿಮ್ಮ ಮಗಳ ಭಾಗ್ಯಲಕ್ಷ್ಮಿ ಬಾಂಡ್ ಹಣ ಬಂದಿದೆ! ಅಂಗನವಾಡಿಯಲ್ಲಿ ವಿಚಾರಿಸಿ
ಅರ್ಜಿ ಹೇಗೆ ಸಲ್ಲಿಸಬೇಕು?
ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅರ್ಜಿಯ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಂತರ ಅಂಗನವಾಡಿ ಮೇಲ್ವಿಚಾರಕರಿಗೆ ಅರ್ಜಿ ಸಲ್ಲಿಸಿ. ಅನುಮೋದನೆಯಾದ ಬಳಿಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
ಮಾತೃಶ್ರೀ ಯೋಜನೆಯು (Karnataka Schemes) ಕರ್ನಾಟಕ ಗರ್ಭಿಣಿ ಮಹಿಳೆಯರ ಆರೋಗ್ಯವನ್ನು ಸುಧಾರಿಸಲು ಸರ್ಕಾರದ ಮಹತ್ವದ ಯೋಜನೆ. ನೀವು ಅಥವಾ ನಿಮ್ಮ ಪರಿಚಯದ ಯಾರಾದರೂ ಅರ್ಹರಾಗಿದ್ದರೆ, ತಕ್ಷಣವೇ ಅರ್ಜಿ ಸಲ್ಲಿಸಿ!
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ.
Karnataka Mathrushree Yojana, 6,000 for Pregnant Women





