ಅನ್ನಭಾಗ್ಯ ಅಕ್ಕಿ ವಿತರಣೆಗೆ ಹೊಸ ಕ್ರಮ; ಸಿದ್ದರಾಮಯ್ಯ ಖಡಕ್ ಸೂಚನೆ

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಈಗ ಹಣದ ಬದಲು 5 ಕೆ.ಜಿ ಅಕ್ಕಿ ವಿತರಿಸುವ ತೀರ್ಮಾನ ಕೈಗೊಂಡಿದೆ. ಗೋದಾಮುಗಳಲ್ಲಿ ಕಳ್ಳಸಾಗಣೆ ತಡೆಗಟ್ಟಲು ಹೊಸ ತಂತ್ರಜ್ಞಾನ ಬಳಸಲಾಗುತ್ತಿದೆ.

  • ಅನ್ನಭಾಗ್ಯ ಯೋಜನೆಯಡಿ (Annabhagya Scheme) ಈಗ 5 ಕೆ.ಜಿ ಅಕ್ಕಿ ವಿತರಣೆ.
  • ಗೋದಾಮು ಮತ್ತು ವಾಹನಗಳಿಗೆ ಸಿಸಿಟಿವಿ, ಜಿಪಿಎಸ್ ಟ್ರ್ಯಾಕಿಂಗ್.
  • ಹಿರಿಯ ನಾಗರಿಕರಿಗೆ ಆಹಾರ ಧಾನ್ಯ ವಿತರಣಾ ವಿಸ್ತರಣೆ.

ಬೆಂಗಳೂರು (Bengaluru): ಅಕ್ಕಿಯ ಕೊರತೆಯಿಂದಾಗಿ ಈವರೆಗೆ ಫಲಾನುಭವಿಗಳಿಗೆ (Annabhagya Scheme) ನೇರ ಹಣ ಪಾವತಿಸುತ್ತಿದ್ದ ರಾಜ್ಯ ಸರ್ಕಾರ (Karnataka Government), ಈಗ ಮತ್ತೆ 5 ಕೆ.ಜಿ ಅಕ್ಕಿ ವಿತರಿಸಲು ತೀರ್ಮಾನಿಸಿದೆ. ಈ ಹೊಸ ಕ್ರಮದಿಂದ 4.21 ಕೋಟಿ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಅಕ್ಕಿ ಸಾಗಾಟದ ವೇಳೆ ಕಳ್ಳಸಾಗಣೆ (Smuggling) ಹೆಚ್ಚಾಗುತ್ತಿರುವುದರಿಂದ ಸರ್ಕಾರ ಈಗ ತಂತ್ರಜ್ಞಾನ ಬಳಸಿ ಕಟ್ಟು ನಿಟ್ಟಿನ ನಿಯಂತ್ರಣ ತರುವ ಯೋಜನೆಯನ್ನು ಘೋಷಿಸಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಬಂಪರ್‌ ಸುದ್ದಿ! 3 ಲಕ್ಷ ಸಹಾಯಧನ ಯೋಜನೆ ಘೋಷಣೆ

₹5 ಕೋಟಿ ವೆಚ್ಚದಲ್ಲಿ ಸಗಟು ಗೋದಾಮುಗಳಿಗೆ ಸಿಸಿಟಿವಿ (CCTV) ಅಳವಡಿಸಲಾಗುವುದು. ಅಲ್ಲದೆ, ಜಿಪಿಎಸ್ (GPS) ಟ್ರ್ಯಾಕಿಂಗ್ ವ್ಯವಸ್ಥೆ ಅಕ್ಕಿ ಸಾಗಿಸುವ ವಾಹನಗಳಿಗೆ ಜಾರಿಗೊಳ್ಳಲಿದೆ. ಈವರೆಗೆ ಅನೇಕ ಕಡೆ ಅಕ್ಕಿ ದೂರುಗಳು ಬಂದಿದ್ದರಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಕುರಿತು ಕರ್ನಾಟಕ ಬಜೆಟ್​​ನಲ್ಲಿ ಮಹತ್ವದ ಘೋಷಣೆ

ಹಿರಿಯ ನಾಗರಿಕರಿಗೆ ಸೌಲಭ್ಯ ವಿಸ್ತರಣೆ:

Karnataka CM Siddaramaiah

80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯ ತಲುಪಿಸಲು ಕಳೆದ ವರ್ಷ ಅನ್ನ-ಸುವಿಧಾ ಯೋಜನೆ ಜಾರಿಗೊಂಡಿತ್ತು. ಈ ಯೋಜನೆಯ ಲಾಭ ಈಗ 75 ವರ್ಷ ಮೇಲ್ಪಟ್ಟವರಿಗೆ ವಿಸ್ತರಿಸಲಾಗುತ್ತಿದೆ, ಇದರಿಂದ 3.30 ಲಕ್ಷ ಜನರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಗಿಫ್ಟ್: ಸಾಲದ ಮೇಲೆ ಬಡ್ಡಿ ಮನ್ನಾ

ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ವೈಟಿಂಗ್ ಮಿಷನ್ (EWM) ಮತ್ತು ಪಾಯಿಂಟ್ ಆಫ್ ಸೇಲ್ ಸಿಸ್ಟಮ್ (PSS) ಅನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗುವುದು.

Karnataka Govt Update on Annabhagya Scheme

Related Stories