ಇಂತಹವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್! ಗೃಹಲಕ್ಷ್ಮಿ ಹಣಕ್ಕೂ ಕಂಟಕ

ರಾಜ್ಯದಲ್ಲಿ ಅನರ್ಹರು ಪಡೆದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಆಹಾರ ಇಲಾಖೆ ತೀವ್ರ ಕ್ರಮಕ್ಕೆ ಮುಂದಾಗಿದೆ. ಪರಿಶೀಲನೆಯಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಯ ಲಾಭ ಸಿಗದ ಸಾಧ್ಯತೆ.

  • 1.27 ಕೋಟಿ ಕುಟುಂಬಗಳಲ್ಲಿ ಬಿಪಿಎಲ್ ಕಾರ್ಡ್ ಬಳಕೆ
  • ಅನರ್ಹರು ಪಡೆದ ಬಿಪಿಎಲ್ ಕಾರ್ಡ್‌ಗಳು ರದ್ದು
  • ಗೃಹಲಕ್ಷ್ಮಿ, ಅನ್ನಭಾಗ್ಯ ಸೌಲಭ್ಯ ಕಳೆದುಕೊಳ್ಳುವ ಭೀತಿ

ಬೆಂಗಳೂರು (Bengaluru): ರಾಜ್ಯದಲ್ಲಿ ಬಡವರಿಗಾಗಿ ನೀಡಲಾಗುವ (BPL Ration Card) ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹರು ಬಳಸುತ್ತಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಈಗ ಆಹಾರ ಇಲಾಖೆ ಭರ್ಜರಿ ಪರಿಶೀಲನೆ ಆರಂಭಿಸಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಈ ಪರಿಶೀಲನೆಯಲ್ಲೇ ಅನರ್ಹ ಫಲಾನುಭವಿಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರ ನಿರ್ಧಾರಕ್ಕೆ ಕೈ ಹಾಕಿದೆ.

ಇದನ್ನೂ ಓದಿ: 2 ಸಾವಿರದ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಪ್ಲಾನ್! ಸರ್ಫ್ರೈಸ್ ತಯಾರಿ

ರಾಜ್ಯದಲ್ಲಿ (Karnataka) 1.27 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ. ಆದರೆ ಈ ಕಾರ್ಡ್‌ಗಳನ್ನು ತಕ್ಷಣದಲ್ಲೇ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆ (Gruha Lakshmi Scheme), ಅನ್ನಭಾಗ್ಯ ಯೋಜನೆ (Anna Bhagya Scheme) ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳ ಲಾಭ ಈ ಕಾರ್ಡ್ ಮೂಲಕವೇ ದೊರೆಯುತ್ತಿದ್ದು, ಅನರ್ಹರು ಇದರ ಸದುಪಯೋಗ ಪಡೆಯುತ್ತಿದ್ದಾರೆ.

BPL Ration Card

ಬಡತನ ರೇಖೆಗಿಂತ ಮೇಲಾಗಿರುವವರು, ಸರ್ಕಾರಿ ಉದ್ಯೋಗಿಗಳು, ಆದಾಯ ತೆರಿಗೆ ಪಾವತಿದಾರರು, ವೈಟ್ ಬೋರ್ಡ್ ಕಾರು ಹೊಂದಿರುವವರು, ಟಿಲ್ಲರ್ ಅಥವಾ ಟ್ರಾಕ್ಟರ್ (agricultural equipment) ಹೊಂದಿರುವವರ ಮಾಹಿತಿ ಪರಿಶೀಲನೆಗೆ ಒಳಪಡಲಿದೆ. ಇವರಲ್ಲಿ ಯಾರು ಅರ್ಹರಲ್ಲವೋ, ಅವರ ಕಾರ್ಡ್‌ಗಳನ್ನು ರದ್ದುಪಡಿಸಲಾಗುವುದು.

ಇದನ್ನೂ ಓದಿ: ಕರ್ನಾಟಕ ಬಡಕುಟುಂಬಗಳಿಗೆ ಭೂ ಗ್ಯಾರಂಟಿ ಯೋಜನೆ! ಹಕ್ಕು ಪತ್ರ ವಿತರಣೆ

ಈ ಕ್ರಮದಿಂದ ಹಲವಾರು ಕುಟುಂಬಗಳು ಗ್ಯಾರಂಟಿ ಯೋಜನೆಗಳ ಲಾಭದಿಂದ ಕೈಬಿಡಬೇಕಾಗಬಹುದು. ಈ ಮೂಲಕ ರಾಜ್ಯದ ಬಿಪಿಎಲ್ ಪಟ್ಟಿ ಶುದ್ಧೀಕರಣವಾಗಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ದುರ್ಬಳಕೆ ತಡೆಯುವುದು ಈ ಕ್ರಮದ ಉದ್ದೇಶ.

Karnataka Targets Fake BPL Card Holders

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories