ನಿಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ! ಫೋನ್ ನಲ್ಲೇ ಮಾಡುವ ಸುಲಭ ಪ್ರಕ್ರಿಯೆ

Story Highlights

RTC Aadhar Link : ಬರ ಪರಿಹಾರದ ಹಣವನ್ನು ಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಆದರೆ ಈ ಸೌಲಭ್ಯ ಪಡೆಯಲು ರೈತರು ಪ್ರಮುಖವಾಗಿ ನಿಮ್ಮ ಆಧಾರ್ ಕಾರ್ಡ್ ಗೆ RTC ಲಿಂಕ್ ಆಗಿರಬೇಕು.

RTC Aadhar Link : ರೈತರಿಗೆ ಸಹಾಯ ಆಗುವುದಕ್ಕೆ ಸರ್ಕಾರವು ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತದೆ, ಅದನ್ನು ಎಲ್ಲಾ ರೈತರು (Farmer) ಸುಲಭವಾಗಿ ಪಡೆದುಕೊಳ್ಳಬಹುದು. ಹಾಗೆಯೇ ರೈತರು ಕೃಷಿ ಕೆಲಸ ಸರಿಯಾಗಿ ನಡೆಯದೇ, ನಷ್ಟ ಅನುಭವಿಸುತ್ತಿದ್ದರೆ, ಅವರಿಗೆ ಬರ ಪರಿಹಾರದ ಹಣವನ್ನು ಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಆದರೆ ಈ ಎರಡು ಸೌಲಭ್ಯ ಪಡೆಯಲು ರೈತರು ಪ್ರಮುಖವಾಗಿ ಒಂದು ಕೆಲಸ ಆಗಬೇಕು. ಅದು ನಿಮ್ಮ ಆಧಾರ್ ಕಾರ್ಡ್ ಗೆ RTC ಲಿಂಕ್ ಆಗಿರಬೇಕು.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ದಿನ ಬಿಡುಗಡೆ! ಮಹಿಳೆಯರೇ ಖಾತೆ ಚೆಕ್ ಮಾಡಿಕೊಳ್ಳಿ

ನಮ್ಮ ರಾಜ್ಯದ ಕಂದಾಯ ಇಲಾಖೆಯ ಸಚಿವರಾಗಿರುವ ಕೃಷ್ಣ ಭೈರೇಗೌಡ ಅವರು ಅಧಿಕೃತವಾಗಿ ನೀಡಿರುವ ಮಾಹಿತಿಯ ಅನುಸಾರ ಸರ್ಕಾರದಿಂದ ರೈತರಿಗೆ ಸಿಗುವ ಬರ ಪರಿಹಾರ ಹಣ ಪಡೆಯಲು ಆಧಾರ್ ಕಾರ್ಡ್ ಗೆ RTC ಅಥವಾ ಪಹಣಿಯನ್ನು ಲಿಂಕ್ ಮಾಡಿರಲೇಬೇಕು ಎಂದು ತಿಳಿಸಿದ್ದಾರೆ.

Aadhaar Cardಹಾಗೆಯೇ ಬಿತ್ತನೆ ಬೀಜಗಳನ್ನು ಕಡಿಮೆ ದರದಲ್ಲಿ ಪಡೆಯುವುದಕ್ಕೆ ಆಧಾರ್ ಕಾರ್ಡ್ ಗೆ RTC ಲಿಂಕ್ ಮಾಡುವುದು ಕಡ್ಡಾಯ. ಹಾಗಾಗಿ ರೈತರು ಈ ಒಂದು ಕೆಲಸವನ್ನು ಆದಷ್ಟು ಬೇಗ ಮಾಡಬೇಕು.

ಇನ್ಮುಂದೆ ಇವರಿಗೆ ಮಾತ್ರ ಸಿಗೋದು ಹೊಸ ರೇಷನ್ ಕಾರ್ಡ್! ಸರ್ಕಾರದಿಂದ ಹೊಸ ರೂಲ್ಸ್

ಈ ಎರಡು ವಿಚಾರ ಮಾತ್ರವಲ್ಲದೇ, ಸರ್ಕಾರಕ್ಕೆ ಸಂಬಂಧಿಸಿದ ಬೇರೆ ಕೆಲಸಗಳನ್ನು ರೈತರು ಮಾಡಿಸಿಕೊಳ್ಳಬೇಕು ಎಂದರೆ ಕೂಡ ಆಧಾರ್ ಜೊತೆಗೆ RTC ಲಿಂಕ್ ಆಗಿರಬೇಕು. ಒಂದು ವೇಳೆ ನೀವಿನ್ನು ಕೂಡ ಲಿಂಕ್ ಮಾಡಿಲ್ಲ ಎಂದರೆ, ಸುಲಭವಾಗಿ ಮೊಬೈಲ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ಗೆ RTC ಲಿಂಕ್ ಮಾಡಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

RTC Aadhar Link in Mobile

Pahani link with aadhaar*ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ https://landrecords.karnataka.gov.in/service4 ಈ ಲಿಂಕ್ ಓಪನ್ ಮಾಡಿ

*ಇದು ಅಧಿಕೃತ ವೆಬ್ಸೈಟ್ ಆಗಿದ್ದು, ಲಿಂಕ್ ಓಪನ್ ಮಾಡಿ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಎಂಟರ್ ಮಾಡಿ

*ಬಳಿಕ ನಿಮ್ಮ ಫೋನ್ ಗೆ OTP ಬರುತ್ತದೆ, ಅದನ್ನು ಹಾಕಿದ ಬಳಿಕ ಹೊಸ ಪೇಜ್ ಓಪನ್ ಆಗುತ್ತದೆ.

*ಹೊಸ ಪೇಜ್ ನಲ್ಲಿ 12 ಡಿಜಿಟ್ ನ ಆಧಾರ್ ಕಾರ್ಡ್ ನಂಬರ್ ನಮೂದಿಸಿ

*ಆಧಾರ್ ಕಾರ್ಡ್ ನಲ್ಲಿ (Aadhaar Card) ಇರುವ ನಿಮ್ಮ ಹೆಸರನ್ನು ಸಹ ನಮೂದಿಸಿ

*ಬಳಿಕ ಅಲ್ಲಿಯೇ ಇರುವ ಸಬ್ಮಿಟ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಇಷ್ಟು ಸ್ಟೆಪ್ಸ್ ಮುಗಿದ ನಂತರ RTC ಗೆ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ

ರೈತರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಲು ಇದು ಬಹಳ ಮುಖ್ಯವಾಗಿ ಮಾಡಬೇಕಾದ ಕೆಲಸ ಆಗಿದ್ದು, ತಪ್ಪದೇ ಮಾಡಿ.

Link Aadhaar Card to your Land RTC, Easy process

Related Stories