ಕರ್ನಾಟಕ ರೈತರಿಗೆ ಮಿನಿ ಟ್ರ್ಯಾಕ್ಟರ್ ಸೇರಿದಂತೆ ಬಂಪರ್ ಸಬ್ಸಿಡಿ ಯೋಜನೆಗಳು
2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮತ್ತು ಹನಿ ನೀರಾವರಿ ಯೋಜನೆಯಡಿ ರೈತರಿಗೆ ಮಿನಿ ಟ್ರ್ಯಾಕ್ಟರ್ ಸೇರಿದಂತೆ ಹಲವಾರು ಘಟಕಗಳಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

- ಮಿನಿ ಟ್ರ್ಯಾಕ್ಟರ್, ಪಾಲಿಹೌಸ್, ಹನಿ ನೀರಾವರಿ ಸಹಾಯಧನ ಲಭ್ಯ
- ಉತ್ತರ ಕನ್ನಡ ಮತ್ತು ಹುಬ್ಬಳ್ಳಿ ಜಿಲ್ಲೆಗಳಲ್ಲಿ ಅರ್ಜಿ ಪ್ರಕ್ರಿಯೆ ಆರಂಭ
- ಶೇ. 50% ರಿಂದ 90%ವರೆಗೆ ಸಬ್ಸಿಡಿ ಒದಗಿಸಲಾಗುವುದು
ಬೆಂಗಳೂರು (Bengaluru): ಉತ್ತರ ಕನ್ನಡ ಹಾಗೂ ಹುಬ್ಬಳ್ಳಿ ಜಿಲ್ಲೆಗಳ ರೈತರಿಗೆ ಮಹತ್ವದ ಅವಕಾಶ ಒದಗಿದ್ದು, ತೋಟಗಾರಿಕೆ ಇಲಾಖೆ (Karnataka Horticulture Department) 2025-26ನೇ ಸಾಲಿನ ಕೇಂದ್ರ ಹಾಗೂ ರಾಜ್ಯ ಯೋಜನೆಗಳಡಿ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.
ವಿಶೇಷವಾಗಿ, ಮಿನಿ ಟ್ರ್ಯಾಕ್ಟರ್ (Mini Tractor), ಪಾಲಿಹೌಸ್ (Poly house), ಹೂವಿನ ಬೆಳೆಯ ವಿಸ್ತರಣೆ (Floriculture), ಜೇನುಪೆಟ್ಟಿಗೆ (Apiculture), ಪವರ್ ಟಿಲ್ಲರ್ (Power tiller), ಈರುಳ್ಳಿ ಶೇಖರಣಾ ಘಟಕ (Onion storage) ಇತ್ಯಾದಿ ಘಟಕಗಳಿಗೆ ರೈತರು ಅನುದಾನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಅನುದಾನಕ್ಕಾಗಿ ರೈತರು ಪ್ರಸ್ತುತ ತನ್ನ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕಾ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು ಸಲ್ಲಿಸಬಹುದು.
ಇದನ್ನೂ ಓದಿ: ಇಂತಹವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್! ಗೃಹಲಕ್ಷ್ಮಿ ಹಣಕ್ಕೂ ಕಂಟಕ
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಜಮೀನಿನ ದಾಖಲೆ (RTC), ಫೋಟೋ, ನೀರಾವರಿ ಮೂಲದ ಪ್ರಮಾಣ ಪತ್ರ ಮುಂತಾದ ದಾಖಲೆಗಳನ್ನು ಹೊಂದಿರುವುದು ಅಗತ್ಯ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ (NHM Scheme) ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (Drip Irrigation Subsidy) ಅಡಿಯಲ್ಲಿ ರೈತರಿಗೆ ಶೇ. 50% ರಿಂದ ಶೇ. 90%ವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಇದು ಸಣ್ಣ ರೈತರಿಗೆ ದೊಡ್ಡ ಆರ್ಥಿಕ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅರ್ಹತೆಯುಳ್ಳವರು ತಮ್ಮ ಹೆಸರಿನಲ್ಲಿ ಜಮೀನಿರುವವರು, ನೀರಾವರಿ ಸೌಲಭ್ಯವಿರುವವರು ಮತ್ತು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ವಿಶೇಷವಾಗಿ ಪರಿಶಿಷ್ಟ ಜಾತಿ (SC)-17%, ಪರಿಶಿಷ್ಟ ಪಂಗಡ (ST)-7%, ಮಹಿಳೆಯರಿಗೆ-33%, ಅಲ್ಪಸಂಖ್ಯಾತರು-5% ಹಾಗೂ ಅಂಗವಿಕಲರಿಗೆ-3% ರಷ್ಟು ಮೀಸಲಾತಿಯೂ ಇದೆ.
ಇದನ್ನೂ ಓದಿ: 2 ಸಾವಿರದ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಪ್ಲಾನ್! ಸರ್ಫ್ರೈಸ್ ತಯಾರಿ
ಇವು ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ಅಥವಾ ಬೆಳೆಯಲು ಆಸಕ್ತರಾಗಿರುವ ರೈತರಿಗೆ ಉತ್ತಮ ಅವಕಾಶವಾಗಿದೆ. ಹನಿ ನೀರಾವರಿ ಘಟಕದ (drip irrigation system) ಅಡಿಯಲ್ಲಿ ಹಣ್ಣು ಹಾಗೂ ತರಕಾರಿ ಬೆಳೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಸಹಾಯಧನ ಲಭ್ಯವಿದೆ.
ಅಧಿಕೃತ ಮಾಹಿತಿಗಾಗಿ ಕೃಷಿಕರು ತೋಟಗಾರಿಕೆ ಇಲಾಖೆಯ ವೆಬ್‌ಸೈಟ್ https://horticulturedir.karnataka.gov.in/36/central-sector-schemes/kn ಅಥವಾ 1902 ಸಹಾಯವಾಣಿಗೆ ಸಂಪರ್ಕಿಸಬಹುದು.
Mini Tractor Subsidy under Horticulture Mission




