ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ, ಕೊರಿಯರ್ ಮೂಲಕ ಕೇರಳದಲ್ಲಿ ಮಾರಾಟ
ಬೆಂಗಳೂರು ನಗರದಲ್ಲಿ ಕದ್ದ ಮೊಬೈಲ್ ಗಳನ್ನು ಕೊರಿಯರ್ ಮೂಲಕ ಬೇರೆ ರಾಜ್ಯಗಳಿಗೆ ಮಾರಾಟ ಮಾಡಲು ಪಾರ್ಸೆಲ್ ಮಾಡಲಾಗುತ್ತಿದ್ದು, ಕೇರಳದಲ್ಲಿ ಮೊಬೈಲ್ ಸ್ವೀಕರಿಸುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ
ಬೆಂಗಳೂರಿನಲ್ಲಿ (Bengaluru) ಮೊಬೈಲ್ ಕದ್ದು ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ತಂಡವನ್ನು ಚಂದ್ರಾಲೇಔಟ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 10.50 ಲಕ್ಷ ಮೌಲ್ಯದ 52 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಸಿಪಿ ದಯಾನಂದ್ ತಿಳಿಸಿದ್ದಾರೆ.
ಪೊಲೀಸರು ವಶಪಡಿಸಿಕೊಂಡ ಮೊಬೈಲ್ ಫೋನ್ ಗಳನ್ನು (Mobile Phones) ಪರಿಶೀಲಿಸಿ ವಿವರಗಳನ್ನು ಬಹಿರಂಗಪಡಿಸಿದರು. ಇನ್ನು ಘಟನೆ ಹೇಗೆ ಬೆಳಕಿಗೆ ಬಂತು ಎಂದು ನೋಡುವುದಾದರೆ..
ಚಂದ್ರಾಲೇಔಟ್ ಗುಡ್ ವಿಲ್ ಅಪಾರ್ಟ್ ಮೆಂಟ್ ನಿವಾಸಿ ಹಾಗೂ ಡಿಟಿಡಿಸಿ ಕೊರಿಯರ್ ಮ್ಯಾನೇಜರ್ ಕೇರಳಕ್ಕೆ ಕೆಲ ದಿನಗಳಿಂದ ಕಳುಹಿಸಿದ್ದ ಬಾಕ್ಸ್ ತೆರೆದು ನೋಡಿದಾಗ 12 ಮೊಬೈಲ್ ಫೋನ್ ಗಳು ಪತ್ತೆಯಾಗಿವೆ.
ಬೆಂಗಳೂರು: ಬೈಕ್ ಕಳ್ಳತನ ಮಾಡುತ್ತಿದ್ದ 12 ಅಂತರಾಜ್ಯ ಕಳ್ಳರ ಬಂಧನ: 61 ಬೈಕ್ಗಳು ವಶ
ಯಾವಾಗಲೂ ಕೊರಿಯರ್ ಮಾಡುತ್ತಿದ್ದ ಬಾಕ್ಸ್ ಮೇಲೆ ಅನುಮಾನ ಮೂಡಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ, ಆತ ಕೂಡಲೇ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ನಡೆಸಿ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಡಿಟಿಡಿಸಿ ಕೊರಿಯರ್ ಮೂಲಕ ಕೇರಳ ರಾಜ್ಯಕ್ಕೆ ಪಾರ್ಸೆಲ್ ಮಾಡಿ ಮೊಬೈಲ್ ಕಳುಹಿಸಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ವಿದ್ಯಾರ್ಥಿನಿಯರ ಅಂಗಾಂಗಗಳನ್ನು ಮುಟ್ಟಿ ವಿಕೃತಿ, ಶಾಲಾ ಮಾಲೀಕ ಅರೆಸ್ಟ್
ಕದ್ದ ಮೊಬೈಲ್ ಗಳನ್ನು ಕೊರಿಯರ್ ಮೂಲಕ ಬೇರೆ ರಾಜ್ಯಗಳಿಗೆ ಮಾರಾಟ ಮಾಡಲು ಪಾರ್ಸೆಲ್ ಮಾಡಲಾಗುತ್ತಿದ್ದು, ಕೇರಳದ (Kerala) ಕೊಂಡುಪರಂಬಿಲ್‌ನಲ್ಲಿ ಮೊಬೈಲ್ ಸ್ವೀಕರಿಸುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಆತನ ಮೊಬೈಲ್ ಅಂಗಡಿಯಲ್ಲಿ ಬಂಧಿಸಿ 30 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮತ್ತು ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಚಂದ್ರಾಲೇಔಟ್ ಸಿಐ ಭರತ್ ಪೊಲೀಸ್ ಸಿಬ್ಬಂದಿ ಮೊಬೈಲ್ ಕಳ್ಳತನದ ತಂಡವನ್ನು ಬೇಧಿಸಿದ್ದಾರೆ.
Mobile Theft in Bengaluru, Sold in Kerala, Two Arrested