ಕೊನೆಗೂ ಮೇ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ
ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಚೆಕ್ ಮಾಡಲು ನೀವು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಕೂತು ಸುಲಭವಾಗಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು.
ರಾಜ್ಯ ಸರ್ಕಾರವು ಜನರ ಹಸಿವನ್ನು ನೀಗಿಸಲು ಜಾರಿಗೆ ತಂದಿರುವ ಯೋಜನೆ ಅನ್ನಭಾಗ್ಯ ಯೋಜನೆ (Annabhagya Yojana) ಆಗಿದೆ. ಕಳೆದ 10 ತಿಂಗಳ ಹಿಂದೆಯೇ ಈ ಯೋಜನೆ ಜಾರಿಗೆ ಬಂದಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ರೇಷನ್ ಕಾರ್ಡ್ (Ration Card) ಇರುವವರಿಗೆ ಹಾಗೂ ಅಂತ್ಯೋದಯ ಕಾರ್ಡ್ ಇರುವವರಿಗೆ ಪ್ರತಿ ತಿಂಗಳು ಮನೆಯ ಪ್ರತಿ ಸದಸ್ಯರಿಗೆ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿ ಹಣವನ್ನು ಮನೆಯ ಮುಖ್ಯಸ್ಥರ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ಯೋ ಇಲ್ವೋ? ಈ ರೀತಿ ಸುಲಭವಾಗಿ DBT ಚೆಕ್ ಮಾಡಿಕೊಳ್ಳಿ
ಮೇ ತಿಂಗಳ ಹಣ ಬಿಡುಗಡೆ
10 ತಿಂಗಳುಗಳಿಂದ ಸಮಯಕ್ಕೆ ಸರಿಯಾಗಿ ಹಣ ವರ್ಗಾವಣೆ ಆಗುತ್ತಿತ್ತು, ಆದರೆ ಚುನಾವಣೆ ಹಾಗೂ ಅದರ ಫಲಿತಾಂಶ ಇದ್ದ ಕಾರಣ ಮೇ ತಿಂಗಳ ಹಣ ಜನರ ಖಾತೆಗೆ ಜಮಾ ಆಗುವುದಕ್ಕೆ ತಡವಾಗಿತ್ತು. ಆದರೆ ಈಗ ಮೇ ತಿಂಗಳ ಹಣ ಕೂಡ ಜಮೆ ಆಗಿದೆ ಎಂದು ಮಾಹಿತಿ ಸಿಕ್ಕಿದ್ದು, ಜನರು ತಮಗೆ ಹಣ ಬಂದಿದ್ಯಾ ಎಂದು ಚೆಕ್ ಮಾಡಿಕೊಳ್ಳಬಹುದು.
ಅನ್ನಭಾಗ್ಯ ಯೋಜನೆಯ ಹಣ ಅಕೌಂಟ್ ಗೆ ಇನ್ನೂ ಬರ್ತಿಲ್ವಾ? ಈ ಒಂದು ಕೆಲಸ ತಪ್ಪದೇ ಮಾಡಿ
ಡಿಬಿಟಿ ಸ್ಟೇಟಸ್ ಚೆಕ್ ಮಾಡಿ
ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಚೆಕ್ ಮಾಡಲು ನೀವು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಕೂತು ಸುಲಭವಾಗಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು. ನಿಮ್ಮ ಬಳಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ಮತ್ತೇನು ಬೇಡ. ಹಾಗಿದ್ದಲ್ಲಿ ಮನೆಯಲ್ಲೇ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ಡಿಬಿಟಿ ಸ್ಟೇಟಸ್ ಚೆಕ್ (Check Status) ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಅವಕಾಶ! ಆದ್ರೆ ಈ ದಾಖಲೆ ಇರಬೇಕಷ್ಟೆ
ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಪ್ರಕ್ರಿಯೆ
*ಮೊದಲಿಗೆ ahara.kar.nic.in/lpg/ ಈ ಲಿಂಕ್ ಓಪನ್ ಮಾಡಿ. ಇದು ಆಹಾರ ಇಲಾಖೆಯ ಅಧಿಕೃತ ಲಿಂಕ್ ಆಗಿದೆ
*ಹೋಮ್ ಪೇಜ್ ನಲ್ಲಿ ನಿಮ್ಮ ಜಿಲ್ಲೆಯ ಯಾವುದು ಎಂದು ಸೆಲೆಕ್ಟ್ ಮಾಡಿ
*ಈಗ ನೇರ ನಗದು ವರ್ಗಾವಣೆ ಸ್ಥಿತಿ ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ, ಈಗ ಓಪನ್ ಆಗುವ ಹೊಸ ಪೇಜ್ ನಲ್ಲಿ ವರ್ಷವನ್ನು 2024 ಎಂದು ಸೆಲೆಕ್ಟ್ ಮಾಡಿ
*ತಿಂಗಳು ಮೇ ಎಂದು ಆಯ್ಕೆ ಮಾಡಿ
*ಬಳಿಕ ಕ್ಯಾಪ್ಚ ಕೋಡ್ ಎಂಟರ್ ಮಾಡಿ
*ಬಳಿಕ Go ಎಂದು ಇರುವ ಆಪ್ಶನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಹೆಸರುಗಳು ಮತ್ತು ಅವರ ಆಧಾರ್ ನಂಬರ್ ಎರಡನ್ನು ಕಾಣುತ್ತೀರಿ.
*ಇಲ್ಲಿ ನೀವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಂದಿರುವ ಹಣದ ಸಂಪೂರ್ಣ ವಿವರವನ್ನು ನೋಡಬಹುದು. ಈ ರೀತಿ ಅನ್ನಭಾಗ್ಯ ಯೋಜನೆಯ ಪೇಮೆಂಟ್ ಸ್ಟೇಟಸ್ ನೋಡಬಹುದು.
Money of Annabhagya Yojana for the month of May is released, Check status