Bangalore NewsCrime News

ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ! ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಶವದ ಹಿನ್ನೆಲೆಯನ್ನು ಹುಡುಕಿದಾಗ, ಅದು ಕೇರಳದ ಕಳ್ಳನ ಮೃತದೇಹ ಎಂಬುದಾಗಿ ತಿಳಿದು ಬಂದಿದೆ. ಹತ್ಯೆ ಪ್ರಕರಣದ ತನಿಖೆ ಇನ್ನೂ ಮುಂದುವರಿಯುತ್ತಿದೆ.

  • ಬೆಂಗಳೂರು ದಿನಸಿ ಮಳಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
  • ಮೃತ ವ್ಯಕ್ತಿ ಕೇರಳದ ಖದೀಮ ಕಳ್ಳ ಎನ್ನಲಾಗಿದೆ
  • ಕುಟುಂಬ ಶವ ಸ್ವೀಕಾರಕ್ಕೆ ನಿರಾಕರಣೆ

ಬೆಂಗಳೂರು (Bengaluru): ಕೋಣನಕುಂಟೆ ಕ್ರಾಸ್ ಬಳಿಯ ಒಂದು ಪ್ರಸಿದ್ಧ ದಿನಸಿ ಮಳಿಗೆಯ ನೆಲಮಹಡಿಯಲ್ಲಿ ಡಿಸೆಂಬರ್ 24ರಂದು ಶವ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಶವ ಕೇರಳ ಮೂಲದ ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಎಂಬಾತನದ್ದಾಗಿ ಗುರುತಿಸಲಾಗಿದೆ.

ವಿಷ್ಣು ಪ್ರಶಾಂತ್ ಕೇರಳ ಹಾಗೂ ತಮಿಳುನಾಡಿನಲ್ಲಿ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬಂಧನದ ಭೀತಿಯಿಂದ ಈತ ಬೆಂಗಳೂರು ಸೇರಿದ್ದ. ಸ್ಥಳದಲ್ಲಿ ಪತ್ತೆಯಾದ ಟ್ಯಾಟು ಮತ್ತು ಮರಣೋತ್ತರ ಪರೀಕ್ಷಾ ವರದಿ ಆಧರಿಸಿ ಆತನ ಗುರುತನ್ನು ಪತ್ತೆ ಹಚ್ಚಲಾಯಿತು.

ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ! ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರು: ಎಟಿಎಂಗೆ ನಗದು ತುಂಬುವ ಸಿಬ್ಬಂದಿಯೇ ಕಳ್ಳತನ, ಸಿಕ್ಕಿಬಿದ್ದಿದ್ದೇ ರೋಚಕ

ಪೋಲೀಸರ ತನಿಖೆಯ ಪ್ರಕಾರ, ಮೃತದೇಹ ಪತ್ತೆಯಾದ ಪ್ರದೇಶಕ್ಕೆ ಈತ ಹೇಗೆ ತಲುಪಿದ? ಹತ್ಯೆ ಮಾಡಲಾಗಿದೆಯೇ ಅಥವಾ ಬೇರೆ ಕಾರಣವಿದೆಯೇ? ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಕುಟುಂಬ ಸದಸ್ಯರು ಶವವನ್ನು ಸ್ವೀಕರಿಸಲು ನಿರಾಕರಿಸಿರುವ ಕಾರಣ, ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದಾರೆ.

Notorious Kerala Thief Found Dead in Bengaluru

English Summary

Our Whatsapp Channel is Live Now 👇

Whatsapp Channel

Related Stories