Bangalore NewsKarnataka News

ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಮೂಲಕ ಸುಲಭ ಅರ್ಜಿ ಪ್ರಕ್ರಿಯೆ ಅವಕಾಶ

ಸಾರ್ವಜನಿಕರು ತಮ್ಮ ಪಡಿತರ ಚೀಟಿಯಲ್ಲಿನ ತಪ್ಪು ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಸರ್ಕಾರದಿಂದ ಅವಕಾಶ. ಆನ್ಲೈನ್ ಮೂಲಕ ವಿಳಾಸ, ಸದಸ್ಯರ ಮಾಹಿತಿ ಹಾಗೂ ಇತರ ತಿದ್ದುಪಡಿಗಳನ್ನು ಹೇಗೆ ಮಾಡಬಹುದು ಎಂಬ ವಿವರ ಇಲ್ಲಿದೆ.

  • ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಗ್ರಾಮ ಒನ್ ಕೇಂದ್ರದಲ್ಲಿ ಲಭ್ಯ
  • ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ ಸೇರಿದಂತೆ ಅನೇಕ ತಿದ್ದುಪಡಿ ಅವಕಾಶ
  • ಅರ್ಜಿ ಸ್ಥಿತಿ ಆನ್ಲೈನ್ ಮೂಲಕ ಪರಿಶೀಲನೆಗೆ ಅವಕಾಶ

ಬೆಂಗಳೂರು (Bengaluru): ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಾರ್ವಜನಿಕರಿಗೆ ಪಡಿತರ ಚೀಟಿಯಲ್ಲಿನ (Ration Card) ತಪ್ಪು ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ.

ಪಡಿತರ ಚೀಟಿಯಲ್ಲಿನ ವಿಳಾಸ, ಸದಸ್ಯರ ಹೆಸರು, ವಯಸ್ಸು, ನ್ಯಾಯಬೆಲೆ ಅಂಗಡಿ ಬದಲಾವಣೆ ಸೇರಿದಂತೆ ಹಲವು ತಿದ್ದುಪಡಿಗಳನ್ನು ಈಗ ಆನ್ಲೈನ್ ಮೂಲಕ ಮಾಡಿಕೊಳ್ಳಬಹುದು. ಗ್ರಾಮ ಒನ್ ಕೇಂದ್ರಗಳಲ್ಲಿ ಈ ಸೇವೆಯನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಮೂಲಕ ಸುಲಭ ಅರ್ಜಿ ಪ್ರಕ್ರಿಯೆ ಅವಕಾಶ

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ? ಚಿಂತೆಬೇಡ, 4 ಸಾವಿರ ಒಟ್ಟಿಗೆ ಜಮಾ ಆಗುತ್ತೆ

ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಧಾನ್ಯ ಪಡೆಯಲು, ಕಾರ್ಡ್‌ನಲ್ಲಿರುವ ಮಾಹಿತಿ ಸರಿಯಾಗಿರಬೇಕು. ತಿದ್ದುಪಡಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಮುನ್ನ, ಗ್ರಾಹಕರು ತಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿಯ ಪ್ರತಿ, ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಒಟ್ಟುಗೂಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ನಂತರ, ಅರ್ಜಿಯ ಸ್ಥಿತಿಯನ್ನು ಆನ್ಲೈನ್ ಮೂಲಕ ತಪಾಸಣೆ ಮಾಡಲು ಅವಕಾಶವಿದೆ.

ಆನ್ಲೈನ್ ಮೂಲಕ ತಿದ್ದುಪಡಿ ಪ್ರಕ್ರಿಯೆ

ಅರ್ಹ ಗ್ರಾಹಕರು ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ, ಬೆಳಿಗ್ಗೆ 10:00 ರಿಂದ ಸಂಜೆ 5:00ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ, ಫುಡ್ ಅಂಡ್ ಸಿವಿಲ್ ಸಪ್ಲೈಸ್ ಇಲಾಖೆ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಟೇಟಸ್ ಚೆಕ್ (Ration Card Status Check) ಮಾಡಬಹುದಾಗಿದೆ.

ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಂತಾ? 170 ರೂಪಾಯಿ ಒಂದೆರಡು ದಿನಗಳಲ್ಲಿ ಜಮಾ!

ರೇಷನ್ ಕಾರ್ಡ್ ತಿದ್ದುಪಡಿ

ಯಾವ ತಿದ್ದುಪಡಿ ಮಾಡಬಹುದು?

✔ ಹೊಸ ಸದಸ್ಯರ ಸೇರ್ಪಡೆ
✔ ಸದಸ್ಯರ ಹೆಸರು ಅಥವಾ ವಿಳಾಸ ಬದಲಾವಣೆ
✔ ಪಡಿತರ ಚೀಟಿ ಕಾನ್ವರ್ಷನ್ (APL, BPL, ಅಂತರ್ಯೋದಯ)
✔ ನ್ಯಾಯಬೆಲೆ ಅಂಗಡಿ ಬದಲಾವಣೆ
✔ ಇ-ಕೆವೈಸಿ ತಪಾಸಣೆ

ಸೂಚನೆ: ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಈ ತಿಂಗಳ ಅಂತ್ಯದವರೆಗೆ ಮಾತ್ರ ಅವಕಾಶವಿದ್ದು, ಅದರೊಳಗೆ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಸರ್ಕಾರ ಈ ಗಡುವು ಅನೇಕ ಬಾರಿ ವಿಸ್ತರಿಸಿದ್ದು ಈ ಬಾರಿ ಆ ಅವಕಾಶ ಮತ್ತೆ ಇರಲಿದೆಯೋ ಇಲ್ಲವೋ ಗೊತ್ತಿಲ್ಲ, ಆದ್ದರಿಂದ ತಪ್ಪದೆ ತಿದ್ದಿಪಡಿ ಮಾಡಿಸಿಕೊಳ್ಳಿ

Online Process Simplified for Ration Card Correction

English Summary

Our Whatsapp Channel is Live Now 👇

Whatsapp Channel

Related Stories