ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ? ಚಿಂತೆಬೇಡ, 4 ಸಾವಿರ ಒಟ್ಟಿಗೆ ಜಮಾ ಆಗುತ್ತೆ

ರಾಜ್ಯದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳ ಪೆಂಡಿಂಗ್ ಹಣ ಬಿಡುಗಡೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ ನೀಡಿದ್ದಾರೆ.

  • ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಹಂತ ಹಂತವಾಗಿ ಜಮಾ
  • ಜಿಲ್ಲಾಧಿಕಾರಿಗಳ ಮೂಲಕ ಹಣ ಬಿಡುಗಡೆಗೆ ಸರ್ಕಾರದ ಕ್ರಮ
  • ಶೀಘ್ರವೇ ಜನಸೇವೆಗೆ ಮರಳುವೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Gruha Lakshmi Scheme : ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ ಸಂಬಂಧ ರಾಜ್ಯದ ಮಹಿಳೆಯರಲ್ಲಿ ಆತಂಕ ಹೆಚ್ಚಾಗಿದ್ದು, ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಿದೆ. ಕಳೆದ ಎರಡು ತಿಂಗಳಿನಿಂದ ಹಣ ಜಮಾ ಆಗದ ಹಿನ್ನೆಲೆ, 15ನೇ ತಿಂಗಳ ಹಣ ಇನ್ನೂ ಕೆಲ ಜಿಲ್ಲೆಗಳಲ್ಲಿ ಉಳಿದುಕೊಂಡಿದೆ.

16 ಮತ್ತು 17ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ ಎಂಬ ಪ್ರಶ್ನೆ ಎದುರಾಗಿದೆ. ಈ ಸಂಬಂಧ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar), ಮುಂದಿನ ಹಂತಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಪೆಂಡಿಂಗ್ ಹಣ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇಂತಹ ಮಹಿಳೆಯರಿಗಿಲ್ಲ ಗೃಹಲಕ್ಷ್ಮಿ ಭಾಗ್ಯ! ಗೃಹಲಕ್ಷ್ಮಿ ಯೋಜನೆ ಹಣ ಕ್ಯಾನ್ಸಲ್

ಈಗಾಗಲೇ ಸರ್ಕಾರದಿಂದ ಹಣ ಮಂಜೂರಾಗಿದ್ದು, ಜಿಲ್ಲಾ ಉಪ ನಿರ್ದೇಶಕರ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ಪ್ರಕ್ರಿಯೆ ಮುಂದುವರಿಯುತ್ತಿದೆ. ತಾಲ್ಲೂಕು ಪಂಚಾಯಿತಿಗಳ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇರುವುದರಿಂದ, ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಹಣ ಅವರ ಖಾತೆಗೆ (Bank Account) ಜಮೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೆಳಗಾವಿಯ ಅಪಘಾತದ ನಂತರ ಚೇತರಿಸಿಕೊಂಡು ಮತ್ತೆ ಸೇವೆಗೆ ಮರಳುತ್ತಿರುವ ಹೆಬ್ಬಾಳಕರ್, ಜನರ ಸೇವೆಗೆ ಸಿದ್ಧರಾಗಿದ್ದಾರೆ. ‘ಇನ್ನೆರಡು ವಾರಗಳಲ್ಲಿ ನಾನು ಪ್ರಯಾಣ ಪ್ರಾರಂಭಿಸುತ್ತೇನೆ, ಜನರ ನಡುವೆ ತೆರಳುತ್ತೇನೆ. ಒಂದು ತಿಂಗಳ ಕಾಲ ಜನರ ಸಂಪರ್ಕದಿಂದ ದೂರವಿದ್ದನ್ನು ಬಹಳ ಮಿಸ್ ಮಾಡಿದ್ದೇನೆ’ ಎಂದು ಸಚಿವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ

ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಂತಾ? 170 ರೂಪಾಯಿ ಒಂದೆರಡು ದಿನಗಳಲ್ಲಿ ಜಮಾ!

ಮೈಕ್ರೋ ಫೈನಾನ್ಸ್ ಸಮಸ್ಯೆ ಮತ್ತು ಗೃಹಲಕ್ಷ್ಮಿ ಯೋಜನೆ (Gruha Lakshmi Yojane) ಸಂಬಂಧ ಕೂಡ ಅವರು ಮಾತಾಡಿದ್ದು, ಈ ಬಗ್ಗೆ ಸರ್ಕಾರ ಕ್ರಮಗೊಳ್ಳುತ್ತಿದೆ ಎಂದು ಹೇಳಿದರು. ‘ನಾನು ಈಗಲೂ ಜನರ ಸಂಪರ್ಕದಲ್ಲಿರುವೆ, ದೂರವಾಣಿ ಮೂಲಕ ಎಲ್ಲರನ್ನೂ ಸಂಪರ್ಕಿಸುತ್ತಿರುವೆ. ಸರ್ಕಾರದ ಅನುಕೂಲಕ್ಕೆ ತಕ್ಕಂತೆ ಮಹಿಳೆಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

Lakshmi Hebbalkar Clarifies Gruha Lakshmi Scheme Pending Release

English Summary

Related Stories