ಇಂತಹ ಮಹಿಳೆಯರಿಗಿಲ್ಲ ಗೃಹಲಕ್ಷ್ಮಿ ಭಾಗ್ಯ! ಗೃಹಲಕ್ಷ್ಮಿ ಯೋಜನೆ ಹಣ ಕ್ಯಾನ್ಸಲ್
ಸರ್ಕಾರ ಪಡಿತರ ಚೀಟಿಗಳನ್ನು ಪರಿಶೀಲಿಸುತ್ತಿದ್ದು ಒಂದು ವೇಳೆ ನಿಮ್ಮ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆ ಸೇರಿ ಎಲ್ಲಾ ಸೌಲಭ್ಯಗಳಿಗೆ ಪ್ರಭಾವ ಬೀರುವ ಸಾಧ್ಯತೆ.
- ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಪಾವತಿ ನಾಳೆಯಿಂದ ಆರಂಭ.
- ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆ ಹಣ ಕೂಡ ಕ್ಯಾನ್ಸಲ್
- ತಪ್ಪಾಗಿ ರದ್ದಾದ ಪಡಿತರ ಚೀಟಿ ಪುನರ್ಪಡೆಯಲು ಅವಕಾಶ
ಬೆಂಗಳೂರು (Bengaluru): ಸರ್ಕಾರದ ನಿಯಮಗಳನ್ನು ಮೀರಿ ರೇಷನ್ ಕಾರ್ಡ್ (Ration Card) ಪಡೆದವರ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಅಂತವರ ಪಡಿತರ ಚೀಟಿ ರದ್ದುಪಡಿ ಮಾಡಲಾಗುತ್ತದೆ. ಒಂದು ವೇಳೆ ಆ ರೀತಿ ಬಿಪಿಎಲ್ ಕಾರ್ಡ್ ರದ್ದಾದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಸೇರಿದಂತೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಕೂಡ ಸಿಗುವುದಿಲ್ಲ.
ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಸರ್ಕಾರದ ಯೋಜನೆಗಳಿಗೆ ಬಹು ಮುಖ್ಯ ಪಾತ್ರವಹಿಸುತ್ತದೆ, ಒಂದು ವೇಳೆ ಕಾರ್ಡ್ ರದ್ದಾದರೆ ನಿಮಗೆ ಯಾವುದೇ ಸೌಲಭ್ಯ ಸಿಗದೇ ಇರಬಹುದು. ಒಂದು ವೇಳೆ ತಪ್ಪಾಗಿ ನಿಮ್ಮ ಕಾರ್ಡ್ ರದ್ದಾದರೆ ನೀವು ಆಹಾರ ಇಲಾಖೆಗೆ ತೆರಳಿ ಸೂಕ್ತ ದಾಖಲೆ ನೀಡಿ ಮರು ಪಡೆಯಬಹುದು.
ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಂತಾ? 170 ರೂಪಾಯಿ ಒಂದೆರಡು ದಿನಗಳಲ್ಲಿ ಜಮಾ!
ಅನರ್ಹರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ ?
ಅನರ್ಹರ ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://ahara.karnataka.gov.in/Home/EServices
ಹಂತ 1 : ಮೇಲೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.
ಹಂತ 2 : ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. e-Ration Card ಎಂಬ ಆಯ್ಕೆಯಲ್ಲಿನ Show Cancelled/suspend list ಎಂಬ ಆಯ್ಕೆ ಕ್ಲಿಕ್ ಮಾಡಿ.
ಹಂತ 3 : ನಂತರ ನಿಮ್ಮ ಜಿಲ್ಲೆ , ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
ಹಂತ 4 : ನಂತರ ನೀವು ಅನರ್ಹರ ಪಟ್ಟಿಯನ್ನು ಇಲ್ಲಿ ನೋಡಬಹುದು. ಇದರಲ್ಲಿ ರದ್ದಾಗಿರುದಕ್ಕೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಬಾಕಿ ಹಣ ರಿಲೀಸ್! ದಿನಾಂಕ ನಿಗದಿ
ಪೆಂಡಿಂಗ್ ಹಣ ಜಮೆ ಯಾವಾಗ
ನಾಳೆಯಿಂದಲೇ (15-02-2025) ಬಾಕಿ ಇರುವ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಾವತಿ ಕಾರ್ಯ ಶುರುವಾಗಲಿದೆ, ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ಮೂರು ತಿಂಗಳ ಹಣ ಬಾಕಿ ಇದ್ದು, ಎಲ್ಲಾ ಬಾಕಿ ಪಾವತಿಗಳನ್ನು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇನ್ನು ಮುಂದೆ ಈ ರೀತಿಯ ವಿಳಂಬ ತಪ್ಪಿಸಲು ಸರ್ಕಾರ ಪ್ಲಾನ್ ಮಾಡಿದ್ದು ತಾಲೂಕು ಪಂಚಾಯತ್ ಮೂಲಕ ಮಹಿಳೆಯರಿಗೆ ಹಣ ತಲುಪಿಸುವ ಕಾರ್ಯಕ್ಕೆ ಮುಂದಾಗಲು ಚಿಂತನೆ ನಡೆಸಿದೆ.
ಖಾತೆಗೆ ಹಣ ಜಮೆ ಆಗುವುದರ ಬಗ್ಗೆ ತಿಳಿಯುವುದು ಹೇಗೆ?
ಇನ್ನು ಮೊದಲಿಗೆ ಹಣ ಬಂದಿದ್ಯ ಇಲ್ವಾ ಅಂತ ತಿಳಿದುಕೊಳ್ಳುವುದು ಹೇಗೆ ಅಂತ ನೋಡೋದಾದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀವು ನಿಮ್ಮ ಬ್ಯಾಂಕ್ ಖಾತೆಗೆ (Bank Account) ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನೀಡಿರುತ್ತೀರಿ, ಆದ್ದರಿಂದ ನಿಮ್ಮ ಫೋನಿಗೆ ಎಸ್ಎಂಎಸ್ ಬರುತ್ತದೆ. ಅದನ್ನು ನೀವು ಚೆಕ್ ಮಾಡಬಹುದು.
ಒಂದು ವೇಳೆ ಎಸ್ಎಂಎಸ್ ಬರದಿದ್ದಲ್ಲಿ, ಆನ್ಲೈನ್ ಬ್ಯಾಂಕಿಂಗ್ (Online Banking) ಮೂಲಕ ನೀವು ಚೆಕ್ ಮಾಡಬಹುದು. ಆನ್ಲೈನ್ ಲಿ ಮೊಬೈಲ್ ಮೂಲಕ ನೋಡಬಹುದು ಇಲ್ಲವೇ ನೇರವಾಗಿ ಬ್ಯಾಂಕ್ ಲಿ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿದರೆ ತಿಳಿಯುತ್ತದೆ.
No Gruha Lakshmi Scheme Benefits if Ration Card Canceled
Our Whatsapp Channel is Live Now 👇