ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಬಾಕಿ ಹಣ ರಿಲೀಸ್! ದಿನಾಂಕ ನಿಗದಿ

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಕಂತುಗಳ ಬಗ್ಗೆ ಸರ್ಕಾರದ ಸ್ಪಷ್ಟನೆ, ಹಂತ ಹಂತವಾಗಿ ಹಣ ಬಿಡುಗಡೆ! ಈ ತಿಂಗಳ ಕೊನೆಯೊಳಗೆ ಬಾಕಿಯಿರುವ ಗೃಹಲಕ್ಷ್ಮಿ ಕಂತುಗಳ ಹಣ ಮಹಿಳೆಯರ ಖಾತೆಗೆ ಜಮಾ

  • ರಾಜ್ಯದ ಕೆಲವು ಜಿಲ್ಲೆಗಳಲ್ಲಿ 15ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆಗಿಲ್ಲ
  • ಹಂತ ಹಂತವಾಗಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಗತಿ
  • ಈ ತಿಂಗಳ ಕೊನೆಯೊಳಗೆ ಬಾಕಿಯಿರುವ ಗೃಹಲಕ್ಷ್ಮಿ ಕಂತುಗಳ ಹಣ ಜಮಾ

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ ಪ್ರಕ್ರಿಯೆ

Gruha Lakshmi Scheme : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಹಲವಾರು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡಿದರೂ, ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಹಣ ಲಭ್ಯತೆ ಕುರಿತು ಸಮಸ್ಯೆಗಳು ಎದುರಾಗಿವೆ. ಕೆಲವು ಫಲಾನುಭವಿಗಳಿಗೆ 15ನೇ, 16ನೇ ಮತ್ತು 17ನೇ ಕಂತಿನ ಹಣ ಇನ್ನೂ ಜಮಾ ಆಗಿಲ್ಲ, ಇದರಿಂದಾಗಿ ಮಹಿಳೆಯರು ತೀವ್ರ ನಿರೀಕ್ಷೆಯಲ್ಲಿದ್ದಾರೆ.

ಹಣದ ಪಾವತಿ ಮೂರ್ನಾಲ್ಕು ತಿಂಗಳಿನಿಂದ ವಿಳಂಬವಾಗಿದ್ದು, ಇದಕ್ಕೆ ಅನೇಕ ಕಾರಣಗಳಿವೆ. ಸರ್ಕಾರ ಈಗಾಗಲೇ ಪೆಂಡಿಂಗ್ ಇರುವ ಹಣ ಬಿಡುಗಡೆ ಪ್ರಕ್ರಿಯೆ ಆರಂಭಿಸಿದ್ದು, ಹಂತ ಹಂತವಾಗಿ ಎಲ್ಲಾ ಖಾತೆಗೆ (Bank Account) ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ: ಆದ್ರೆ ಎಲ್ಲರಿಗೂ ಅವಕಾಶವಿಲ್ಲ

15ನೇ, 16ನೇ ಮತ್ತು 17ನೇ ಕಂತಿನ ಪಾವತಿ ಯಾವಾಗ?

ಕೆಲವು ಜಿಲ್ಲೆಗಳಲ್ಲಿ 15ನೇ ಕಂತಿನ ಹಣ ಇನ್ನೂ ಲಭ್ಯವಾಗಿಲ್ಲ. ನಿಗದಿತ ದಿನಾಂಕದಲ್ಲಿ ಹಣ ಖಾತೆಗೆ ಜಮಾ ಆಗದ ಕಾರಣ, ಹಲವಾರು ಮಹಿಳೆಯರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಈ ತಿಂಗಳ 15ರವರೆಗೆ ಹಣ ಖಾತೆಗೆ ಬರುವ ನಿರೀಕ್ಷೆಯಿದೆ.

16 ಮತ್ತು 17ನೇ ಕಂತುಗಳ ಪಾವತಿ ಹಂತ ಹಂತವಾಗಿ ಮಾಡಲಾಗುತ್ತಿದ್ದು, ಫೆಬ್ರವರಿ ಕೊನೆಯೊಳಗೆ ಎಲ್ಲಾ ಬಾಕಿಯಿರುವ ಕಂತುಗಳು ಹಂಚಿಕೆಯಾಗಲಿವೆ. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಮಹಿಳೆಯರು ನಿರೀಕ್ಷಿತ ಸಹಾಯ ಪಡೆಯಲಿದ್ದಾರೆ.

Gruha Lakshmi Scheme Pending Fund

ಬಿಪಿಎಲ್ ರೇಷನ್ ಕಾರ್ಡ್ ಇದ್ದೋರಿಗೆ ಕೊನೆಯ ಅವಕಾಶ! ಫೆಬ್ರವರಿ 28, 2025 ಡೆಡ್‍ಲೈನ್

ಯೋಜನೆಯ ಪಾವತಿ ವಿಧಾನದಲ್ಲಿ ಬದಲಾವಣೆ ಸಾಧ್ಯತೆ?

ಮೂಲಗಳ ಪ್ರಕಾರ, ಸರ್ಕಾರ ಹಣ ಪಾವತಿ ವಿಧಾನದಲ್ಲಿ ಬದಲಾವಣೆ ಮಾಡಲು ಯೋಚನೆ ನಡೆಸುತ್ತಿದೆ. ಈ ಮೊದಲು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದ್ದರೆ, ಈಗ ತಾಲೂಕು ಪಂಚಾಯತ್ ಮೂಲಕ ಹಣ ವಿತರಿಸುವ ಸಾಧ್ಯತೆ ಇದೆ. ಇದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ.

ಇನ್ನುಳಿದಂತೆ, ಎಲ್ಲಾ ಜಿಲ್ಲೆಗಳಲ್ಲಿ ಒಟ್ಟಾರೆ ಹಣ ಬಿಡುಗಡೆ ಮಾಡುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಹೀಗಾಗಿ, ಹಂತ ಹಂತವಾಗಿ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಿದ್ದ ನಂತರ, ಫಲಾನುಭವಿಗಳು ಸೂಕ್ತ ಮಾಹಿತಿ ಪಡೆಯಬಹುದು.

Big Update on Pending Gruha Lakshmi Scheme Fund

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories