Bangalore NewsKarnataka News

ತಂದೆ-ತಾಯಿ ಆರೈಕೆ ಮಾಡದ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿಲ್ಲ! ಹೊಸ ರೂಲ್ಸ್

ತಂದೆ-ತಾಯಿ ಹಾಗೂ ಹಿರಿಯರ ಆರೈಕೆಯ ಕುರಿತು ಮಹತ್ವದ ನಿಯಮ ಜಾರಿಯಲ್ಲಿದೆ. ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ ಎಂಬ ಕಾನೂನಿನ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಪರಿಷತ್ತಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

  • ತಂದೆ-ತಾಯಿ ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ
  • 2007ರ ಪೋಷಕ ಹಾಗೂ ಕಲ್ಯಾಣ ಕಾಯ್ದೆಯ ಪ್ರಕಾರ ಹಿರಿಯರಿಗೆ ಹಕ್ಕು
  • ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳು ಬಾಕಿ

ಬೆಂಗಳೂರು (Bengaluru): ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ತಂದೆ ತಾಯಿಯೂ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಮಕ್ಕಳು ತಮ್ಮ ಹೆತ್ತವರನ್ನೇ ನಿರ್ಲಕ್ಷಿಸಿ, ಅನಾಥಾಶ್ರಮಗಳಿಗೆ ಕಳಿಸುತ್ತಿರುವ ದುಃಖಕರ ಘಟನೆಗಳು ವರದಿಯಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ವಿಧಾನಪರಿಷತ್ತಿನಲ್ಲಿ (karnataka vidhana parishad) ಹಿರಿಯ ನಾಗರಿಕರ ರಕ್ಷಣೆ ಕುರಿತಂತೆ ಚರ್ಚೆ ನಡೆಯಿತು.

ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಈ ಕುರಿತಂತೆ ಮಾತನಾಡಿ, “ತಂದೆ-ತಾಯಿ ಅಥವಾ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ (Property Rights) ಪಾಲಿಲ್ಲ” ಎಂಬುದಾಗಿ ಸ್ಪಷ್ಟಪಡಿಸಿದರು.

ತಂದೆ-ತಾಯಿ ಆರೈಕೆ ಮಾಡದ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿಲ್ಲ! ಹೊಸ ರೂಲ್ಸ್ - Kannada News

ಇದನ್ನೂ ಓದಿ: ಕರ್ನಾಟಕ ರೈತರಿಗೆ ಇನ್ನೊಂದು ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ಕೇಂದ್ರ ಸರ್ಕಾರ 2007ರಲ್ಲೇ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ (Maintenance and Welfare of Parents and Senior Citizens Act, 2007) ಜಾರಿಗೆ ತಂದಿದೆ.

ಈ ನಿಯಮದ ಪ್ರಕಾರ, ಪೋಷಕರಿಗೆ ಮಕ್ಕಳಿಂದ ಸೂಕ್ತ ಆರೈಕೆ ದೊರೆಯಬೇಕು, ಅವರಿಗೆ ಅಗತ್ಯ ಹಣ ನೀಡಬೇಕು. ಇಲ್ಲವಾದರೆ, ಅವರು ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ನೀಡಬಹುದು.

ಇದನ್ನೂ ಓದಿ: ಕರ್ನಾಟಕದ ಈ ಸ್ಥಳಗಳಲ್ಲಿ ಇನ್ಮುಂದೆ ಸೋಪು, ಶ್ಯಾಂಪೂ ಮಾರಾಟ ನಿಷೇಧ!

ಹಿರಿಯರು ನೀಡಿದ ವಿಲ್ (Will) ಅಥವಾ ದಾನಪತ್ರ (Gift Deed) ಮಾನ್ಯವಲ್ಲ!

Property Documents

ಹಿರಿಯ ನಾಗರಿಕರು ತಮ್ಮ ಮಕ್ಕಳ ಹೆಸರಿನಲ್ಲಿ ಮಾಡಿರುವ ವಿಲ್ (Will) ಅಥವಾ ದಾನಪತ್ರ (Gift Deed) ಮೊದಲು ನೀಡಿದರೂ, ಅವರು ಸರಿಯಾಗಿ ಆರೈಕೆ ಮಾಡದಿದ್ದರೆ, ಅದನ್ನು ರದ್ದು ಮಾಡಬಹುದು. ಸೆಕ್ಷನ್ 23 (Section 23) ಪ್ರಕಾರ, ತಂದೆ-ತಾಯಿ ಆರೈಕೆಯ ಜವಾಬ್ದಾರಿ ನಿರ್ಲಕ್ಷ್ಯ ಮಾಡಿದರೆ, ಆಸ್ತಿಯನ್ನು ಮರಳಿ ಅವರ ಹೆಸರಿಗೆ ವರ್ಗಾಯಿಸಲು ಅವಕಾಶ ಇದೆ.

ಇದನ್ನೂ ಓದಿ: ನಿಮ್ಮ ಬಿಪಿಎಲ್ ಕಾರ್ಡ್ ಆಕ್ಟಿವ್ ಇದ್ಯಾ? 20 ಲಕ್ಷ ರೇಷನ್ ಕಾರ್ಡ್ ಕ್ಯಾನ್ಸಲ್

ಈ ಮೊದಲು, ಅವರ ವಿರುದ್ಧ ದೂರು ದಾಖಲಿಸಬಹುದಾಗಿದ್ದು, ಸೆಕ್ಷನ್ 09 (Section 09) ಪ್ರಕಾರ, ಸಂಬಂಧಪಟ್ಟ ಉಪ ವಿಭಾಗಾಧಿಕಾರಿ (Sub-Divisional Officer) ಅಥವಾ ಕೋರ್ಟ್ ಮುಂದೆ ಅರ್ಜಿ ಹಾಕಬಹುದಾಗಿದೆ. ಈಗಾಗಲೇ ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳು ಬಾಕಿಯಿವೆ, ಮತ್ತು ಈ ಸಂಬಂಧ ಪ್ರತೀ ತಿಂಗಳು ಸಭೆ ನಡೆಸಲಾಗುತ್ತಿದೆ.

ಹಿರಿಯ ನಾಗರಿಕರಿಗೆ ನ್ಯಾಯ ಸಿಗಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಆದರೆ, ಈ ಕಾನೂನಿನ (Law) ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ. ಹೀಗಾಗಿ, ಈ ಮಾಹಿತಿ ಎಲ್ಲರಿಗೂ ತಲುಪಬೇಕು ಎಂಬುದಾಗಿ ಸಚಿವರು ಹೇಳಿದರು.

Parents Care Linked to Property Rights

English Summary

Our Whatsapp Channel is Live Now 👇

Whatsapp Channel

Related Stories