Bangalore NewsKarnataka News

10ನೇ ತರಗತಿ ಪಾಸ್ ಆಗಿದ್ರೆ ಸಾಕು ಮೆಟ್ರೋದಲ್ಲಿ ಸಿಗಲಿದೆ ಕೆಲಸ! ಇಂದೇ ಈ ರೀತಿ ಅಪ್ಲೈ ಮಾಡಿ

10ನೇ ತರಗತಿ ಪಾಸ್ ಆಗಿ ಮುಂದಕ್ಕೆ ಓದಲು ಸಾಧ್ಯ ಆಗದೆ ಇರುವಂಥ ಸಾಕಷ್ಟು ಜನರು ಇರುತ್ತಾರೆ. ಅಂಥಾ ಹಲವು ಜನರಿಗೆ ಒಳ್ಳೆಯ ಕೆಲಸ ಪಡೆಯಲು ಸಾಧ್ಯವೇ ಆಗುವುದಿಲ್ಲವೇನೋ ಅನ್ನಿಸುವುದು ಸಹಜ.

ಇದೀಗ ಆ ರೀತಿ 10ನೇ ತರಗತಿ ಮಾತ್ರ ಪಾಸ್ ಆಗಿರುವವರಿಗೆ ಒಂದು ಒಳ್ಳೆಯ ಉದ್ಯೋಗಾವಕಾಶ (Vacancy) ಕಾದಿದೆ. ಹೌದು, 10ನೇ ತರಗತಿ ಪಾಸ್ ಆಗಿರುವವರಿಗಾಗಿ ಮೆಟ್ರೋ ನಲ್ಲಿ (Metro Job) ಕೆಲಸ ಖಾಲಿ ಇದೆ.

Passing class 10 is enough to get a job in Metro

ಅತೀ ಸಣ್ಣ ರೈತರಿಗೆ ಜೀವನೋಪಾಯ ಪರಿಹಾರ ₹3000 ರೂಪಾಯಿ ಜಮೆ! ನಿಮಗೂ ಬಂತಾ ಹಣ?

ಬೆಂಗಳೂರು ಮೆಟ್ರೋ ನಲ್ಲಿ ಸ್ಟೇಶನ್ ಕಂಟ್ರೋಲರ್ ಹುದ್ದೆಗಳು (Jobs) ಖಾಲಿ ಇದ್ದು, ಒಟ್ಟು 69 ಹುದ್ದೆಗಳು ಖಾಲಿ ಇದೆ. ಅವುಗಳನ್ನು ಭರ್ತಿ ಮಾಡಲು ಮೆಟ್ರೋ ಕಡೆಯಿಂದ ಅಧಿಕೃತ ಅಧಿಸೂಚನೆ ಬಂದಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

10ನೇ ತರಗತಿ ಪಾಸ್ ಆಗಿರುವ ಯಾರೇ ಆದರೂ ಸ್ಟೇಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗಿದ್ದಲ್ಲಿ ಈ ಹುದ್ದೆಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ…

ಶೈಕ್ಷಣಿಕ ಅರ್ಹತೆ:

ಬೆಂಗಳೂರು ಮೆಟ್ರೋ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಸ್ಟೇಶನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಸರ್ಕಾರದ ಮಾನ್ಯತೆ ಹೊಂದಿರುವ ಯಾವುದೇ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು ಅಥವಾ ಡಿಪ್ಲೊಮಾ ಪಾಸ್ ಆಗಿರಬೇಕು. ಇಷ್ಟು ಓದಿರುವ ಯಾರೇ ಆದರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಸ್ಟೇಶನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಯೋಮಿತಿ ಬಗ್ಗೆ ಹೇಳುವುದಾದರೆ, 18 ರಿಂದ 30 ವರ್ಷಗಳ ಒಳಗಿನ ಯಾರೇ ಆದರೂ ಅರ್ಜಿ ಸಲ್ಲಿಸಬಹುದು. ಕೆಲವು ವರ್ಗದವರಿಗೆ ಮೀಸಲಾತಿಯ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಕೂಡ ಇರುತ್ತದೆ.

ಗೃಹಲಕ್ಷ್ಮಿ ಹಣಕ್ಕೆ ಪೋಸ್ಟ್ ಆಫೀಸ್ ಅಕೌಂಟ್ ತೆರೆಯಿರಿ! ಹಣ ಬಾರದವರಿಗೆ ಒಟ್ಟಿಗೆ ಸಿಗಲಿದೆ ₹22,000

ತಿಂಗಳ ಸಂಬಳ:

ಬೆಂಗಳೂರು ಮೆಟ್ರೋ ಇಲಾಖೆಯಲ್ಲಿ ಖಾಲಿ ಇರುವ ಸ್ಟೇಶನ್ ಕಂಟ್ರೋಲರ್ ಹುದ್ದೆಗೆ ಸಿಗುವ ಸಂಬಳ ಎಷ್ಟು ಎಂದು ನೋಡುವುದಾದರೆ.. ಈ ಹುದ್ದೆಗೆ 36 ಸಾವಿರ ಇಂದ 86 ಸಾವಿರ ವರೆಗು ವೇತನವನ್ನು ನಿಗದಿ ಮಾಡಲಾಗಿದೆ. ಇದು ಉತ್ತಮವಾದ ಸಂಬಳ ಆಗಿದ್ದು, ಜನರು ಅರ್ಜಿ ಸಲ್ಲಿಸಬಹುದು..

ಅರ್ಜಿ ಶುಲ್ಕ:

ಒಂದು ವೇಳೆ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದು ಅಂದುಕೊಂಡಿದ್ದು, ಅರ್ಜಿ ಶುಲ್ಕ ಜಾಸ್ತಿ ಇರಬಹುದೇನೋ ಎಂದುಕೊಂಡರೆ, ಆ ರೀತಿ ಏನು ಇಲ್ಲ. ಸ್ಟೇಶನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಕೂಡ ಇಲ್ಲ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024ರ ಜುಲೈ 18 ಆಗಿರುತ್ತದೆ. ಈ ದಿನಾಂಕದ ಒಳಗೆ ಯಾರೇ ಆದರೂ ಅರ್ಜಿ ಸಲ್ಲಿಸಬಹುದು.
*ಈ ಹುದ್ದೆಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಬೆಂಗಳೂರು ಮೆಟ್ರೋ (Bengaluru Metro) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಫಾರ್ಮ್ ಓಪನ್ ಮಾಡಿ, ಅಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ಕೊಟ್ಟು, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಬಹುದು.

Passing class 10 is enough to get a job in Metro

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories