ಅತೀ ಸಣ್ಣ ರೈತರಿಗೆ ಜೀವನೋಪಾಯ ಪರಿಹಾರ ₹3000 ರೂಪಾಯಿ ಜಮೆ! ನಿಮಗೂ ಬಂತಾ ಹಣ?
ಅರ್ಹ ರೈತರಿಗೆ ರೂ. 2000 ವರೆಗೆ ಬೆಳೆಹಾನಿ ಪರಿಹಾರ ಮೊತ್ತ ಕೆಲವು ರೈತರ ಖಾತೆಗೆ (Bank Account) ಜಮೆಯಾಗಿದ್ದು ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ಸರಕಾರ ಬಿಡುಗಡೆ ಮಾಡಲಿದೆ.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಯಿಂದಾಗಿ ಈ ಭಾರಿ ರೈತರು ಬಹಳಷ್ಟು ನೊಂದಿದ್ದರು, ಕುಡಿಯಲು ಸಹ ನೀರಿಲ್ಲದಂತಹ ಸಂದರ್ಭ ಈ ಭಾರಿ ಉಂಟಾಗಿತ್ತು. ಹಾಗಾಗಿ ರೈತರಿಗೆ ಬೆಳೆ ಪರಿಹಾರ ನೀಡ ಬೇಕೆಂದು ಸರಕಾರ ನಿರ್ಧಾರ ಮಾಡಿತ್ತು.
ಈ ಮೂಲಕ 236 ತಾಲೂಕುಗಳ ಪೈಕಿ 223 ತಾಲೂಕು ಗಳನ್ನು ಬರಗಾಲ ಪ್ರದೇಶ ಎಂದು ಪೋಷಣೆ ಮಾಡಿ ನಷ್ಟ ಉಂಟಾದ ಪ್ರದೇಶಕ್ಕೆ ಪರಿಹಾರ ನೀಡಲು ಮುಂದಾಗಿದೆ.
ಈಗಾಗಲೇ ಅರ್ಹ ರೈತರಿಗೆ ರೂ. 2000 ವರೆಗೆ ಬೆಳೆಹಾನಿ ಪರಿಹಾರ ಮೊತ್ತ ಕೆಲವು ರೈತರ ಖಾತೆಗೆ (Bank Account) ಜಮೆಯಾಗಿದ್ದು ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ಸರಕಾರ ಬಿಡುಗಡೆ ಮಾಡಲಿದೆ.
ಗೃಹಲಕ್ಷ್ಮಿ ಹಣಕ್ಕೆ ಪೋಸ್ಟ್ ಆಫೀಸ್ ಅಕೌಂಟ್ ತೆರೆಯಿರಿ! ಹಣ ಬಾರದವರಿಗೆ ಒಟ್ಟಿಗೆ ಸಿಗಲಿದೆ ₹22,000
ಹೌದು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡ ಅನುದಾನದಲ್ಲಿ ರಾಜ್ಯ ಸರ್ಕಾರವು ರಾಜ್ಯದ ಸುಮಾರು ರೈತರ ಖಾತೆಗೆ ನೇರವಾಗಿ ಹಣ ವನ್ನು ಜಮಾ ಮಾಡಿದೆ (Money Deposit). ಇದೀಗ ಎನ್‌ಡಿಆರ್‌ಎಫ್‌ನ ಉಳಿದ ಹಣ ಮತ್ತು ರಾಜ್ಯ ಸರಕಾರದಿಂದ 272 ಕೋಟಿ ರೂ. ಸೇರಿಸಿ ಸಣ್ಣ, ಅತಿ ಸಣ್ಣ ರೈತರಿಗೆ ಜೀವನೋಪಾಯಕ್ಕೆ ನಷ್ಟ ಪರಿಹಾರ ನೀಡಲು ಮುಂದಾಗಿದೆ.
ಬಾಕಿ ಇರುವಂತಹ ಹಣವನ್ನೂ ಅತೀ ಸಣ್ಣ ರೈತರಿಗೆ (Farmers) ನೆರವು ನೀಡಲಿದೆ. ಇದರ ಅನ್ವಯ ಮುಂದಿನ ಒಂದು ವಾರದೊಳಗೆ ಅತೀ ಸಣ್ಣ ರೈತರ ಖಾತೆಗೆ ಹಣ ಪಾವತಿ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಹಾಗಾಗಿ ಇದರಿಂದ ರಾಜ್ಯದ 7 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.
ರೇಷನ್ ಪಡೆಯೋಕೆ ಹೊಸ ರೂಲ್ಸ್, ಇನ್ಮುಂದೆ ಕಣ್ಣಿನ ಐರಿಸ್ ಸ್ಕ್ಯಾನ್ ಮಾಡಿ ನೀಡಲಾಗುತ್ತೆ ರೇಷನ್!
ಆದರೆ ಹಲವು ರೈತರ ಖಾತೆಗೆ ಬರ ಪರಿಹಾರ ಮೊದಲ ಕಂತಿನ ಹಣವೇ ಜಮಾ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ನಿಮಗೂ ಹಣ ಬಾರದೇ ಇದ್ದಲ್ಲಿ ಇದಕ್ಕೆ ಕಾರಣ ನಿಮ್ಮ ಹೆಸರು ಆಧಾರ್ ಮತ್ತು FRUITS ಐಡಿಗೆ ಹೊಂದಿಕೆ ಆಗದೇ ಇರುವುದು ಆಗಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೇ ಇರುವುದು. ನಿಮ್ಮ ಬ್ಯಾಂಕ್‌ನ ಐ.ಎಫ್.ಎಸ್.ಸಿ ಕೋಡ್ ಸರಿಯಿರದೇ ಇರುವುದು. ಎಫ್ ಐ ಡಿ ಮಾಡಿಸದೇ ಇರುವುದು, ಬ್ಯಾಂಕ್ ಖಾತೆ ನಿಷ್ಕ್ರಿಯ ಇತ್ಯಾದಿ ಸಮಸ್ಯೆ ಆಗಿದೆ. ಹಾಗಾಗಿ ಇದನ್ನು ಮೊದಲು ರೈತರು ಸರಿಪಡಿಸಬೇಕಿದೆ.
ಕೃಷಿ ನೆಲದಲ್ಲಿ ಉಚಿತ ಬೋರ್ ವೆಲ್ ಸೌಲಭ್ಯ! ರೈತರ ನೀರಿನ ಸಮಸ್ಯೆ ನೀಗಿಸಲು ಹೊಸ ಯೋಜನೆ
ಇದೀಗ ಬರಗಾಲದಿಂದಾಗಿ ಅತೀ ಸಣ್ಣ ಕೃಷಿಕರಿಗೆ ಅಂದರೆ ಕಡಿಮೆ ಕೃಷಿ ಭೂಮಿ (Agriculture Land) ಇರುವ ರೈತರಿಗೂ ಸಮಸ್ಯೆ ಯಾಗಿದೆ. ಅದರಲ್ಲೂ ಕೃಷಿಯಿಂದಲೇ ಬದುಕು ನಿರ್ಮಿಸಿ ಕೊಂಡ ರೈತರಿಗೆ ಭಾರಿ ದೊಡ್ಡ ಹೊಡೆತ ಬಿದ್ದಿದ್ದು ದಿನ ಸಾಗಿಸಲು ಕಷ್ಟ ವಾಗಿದೆ.
ಹಾಗಾಗಿ ಅತೀ ಸಣ್ಣ ರೈತರಿಗೂ ಪರಿಹಾರ ನೀಡಲು ಮುಂದಾಗಿದ್ದು ಒಂದು ವಾರದೊಳಗೆ ರೈತರಿಗೆ ಪರಿಹಾರ ಧನ ಸಿಗಲಿದ್ದು 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವ ನೋಪಾಯ ಪರಿಹಾರ ಸಿಗಲಿದೆ. ಹಾಗಾಗಿ ರಾಜ್ಯದ ಅತಿ ಸಣ್ಣ ರೈತರ ಜೀವನೋಪಾಯ ನಷ್ಟ ಪರಿಹಾರ ರೂ 3,000 ಖಾತೆಗೆ ಅತೀ ಶೀಘ್ರದಲ್ಲೇ ಜಮೆ ಯಾಗಲಿದ್ದು ಈ ವಿಚಾರ ರೈತರಿಗೆ ಬಹಳಷ್ಟು ಖುಷಿ ನೀಡಿದೆ.
crop compensation amount deposited to Farmers