Bangalore NewsKarnataka News

ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡುದಾರರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ!

ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ದೊಡ್ಡ ಗುಡ್ ನ್ಯೂಸ್! ಈ ಬಾರಿ ಪಡಿತರ ವಿತರಣೆ ಪ್ಲಾನ್ ಹೇಗಿದೆ? ಎಷ್ಟು ಅಕ್ಕಿ ಸಿಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Publisher: Kannada News Today (Digital Media)

  • ಈ ಬಾರಿ ಪಡಿತರ ಚೀಟಿದಾರರಿಗೆ 15 ಕೆ.ಜಿ. ಅಕ್ಕಿ ವಿತರಣೆ
  • ಫೆಬ್ರವರಿಯ ಹೆಚ್ಚುವರಿ 5 ಕೆ.ಜಿ. ಅಕ್ಕಿ ಮಾರ್ಚ್‌ನಲ್ಲಿ ಲಭ್ಯ
  • ಎಪ್ರಿಲ್‌ ತಿಂಗಳಿಂದ ಹೊಸ ಅಕ್ಕಿ ವಿತರಣಾ ನಿಯಮಗಳು

ಬೆಂಗಳೂರು (Bengaluru): ಯುಗಾದಿ ಹಬ್ಬದ ಸಂಭ್ರಮವನ್ನು ಪಡಿತರ ಚೀಟಿದಾರರಿಗೆ ಮತ್ತಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ದೊಡ್ಡ ಘೋಷಣೆಯೊಂದನ್ನು ಮಾಡಿದೆ! ಅನ್ನಭಾಗ್ಯ ಯೋಜನೆಯಡಿ (Annabhagya Scheme) ಫಲಾನುಭವಿಗಳಿಗೆ ಮಾರ್ಚ್‌ ತಿಂಗಳಲ್ಲಿಯೇ 15 ಕೆ.ಜಿ. ಅಕ್ಕಿ ಸಿಗಲಿದೆ. ಫೆಬ್ರವರಿ ತಿಂಗಳಲ್ಲಿನ ಬಾಕಿ 5 ಕೆ.ಜಿ. ಸಹ ಈ ತಿಂಗಳು ವಿತರಣೆ ಆಗಲಿದೆ.

ರಾಜ್ಯ ಸರ್ಕಾರ ಕಳೆದ ತಿಂಗಳಲ್ಲಿಯೇ ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಣೆ ಮಾಡುವ ನಿರ್ಧಾರ ಕೈಗೊಂಡಿತ್ತು. ಆದರೆ ಅನೇಕ ತಾಂತ್ರಿಕ ಕಾರಣಗಳಿಂದಾಗಿ ವಿತರಣೆ ವಿಳಂಬವಾಗಿತ್ತು.

ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡುದಾರರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ!

ಇದನ್ನೂ ಓದಿ: 2 ತಿಂಗಳ ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆ! ಯಾರಿಗೆ ಬಂದಿಲ್ವೋ ಅವರಿಗಾಗಿ ಸುದ್ದಿ

ಈಗ, ಪಡಿತರ ಚೀಟಿದಾರರಿಗೆ (Ration Card Holders) ಒಟ್ಟಾರೆ 15 ಕೆ.ಜಿ. ಅಕ್ಕಿ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.

ಅಕ್ಕಿ ವಿತರಣೆಯ ಪ್ಲಾನ್ ಹೇಗಿದೆ?

ಈ ತಿಂಗಳ ಪಡಿತರ ವಿತರಣೆಯಲ್ಲಿ 10 ಕೆ.ಜಿ. ಅಕ್ಕಿಯ ಜೊತೆಗೆ ಫೆಬ್ರವರಿ ತಿಂಗಳ 5 ಕೆ.ಜಿ. ಅಕ್ಕಿಯನ್ನೂ ಸೇರಿಸಿ ಒಟ್ಟಾರೆ 15 ಕೆ.ಜಿ. ವಿತರಿಸಲಾಗುವುದು. ಎಲ್ಲಾ ನ್ಯಾಯಬೆಲೆ ಅಂಗಡಿಗಳು ಈ ವಿತರಣೆಗೆ ಸಜ್ಜಾಗಿವೆ.

ಇದನ್ನೂ ಓದಿ: ಆಸ್ತಿ ರಿಜಿಸ್ಟ್ರೇಷನ್‌ಗೆ ಹೊಸ ನಿಯಮ, ಇ-ಖಾತಾ ಕಡ್ಡಾಯ! ಉಲ್ಲಂಘಿಸಿದರೆ ಕಠಿಣ ಕ್ರಮ

ಅನ್ನಭಾಗ್ಯ ಯೋಜನೆ

ಅಂತ್ಯೋದಯ ಫಲಾನುಭವಿಗಳಿಗೆ ಹೆಚ್ಚು ಅಕ್ಕಿ!

ಅಂತ್ಯೋದಯ ಪಡಿತರ ಚೀಟಿದಾರರಿಗೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ದೊರಕಲಿದೆ. ಈ ಪ್ರಕಾರ,

ಇದನ್ನೂ ಓದಿ: ಮಾರ್ಚ್ ಅನ್ನಭಾಗ್ಯ ಹಣ ₹680 ರೂಪಾಯಿ ಜಮಾ, ಖಾತೆ ಚೆಕ್ ಮಾಡಿಕೊಳ್ಳಿ

1-3 ಸದಸ್ಯರಿದ್ದರೆ 35 ಕೆ.ಜಿ.
4 ಸದಸ್ಯರಿದ್ದರೆ 45 ಕೆ.ಜಿ.
5 ಸದಸ್ಯರಿದ್ದರೆ 65 ಕೆ.ಜಿ.
10 ಸದಸ್ಯರಿದ್ದರೆ 165 ಕೆ.ಜಿ. ಅಕ್ಕಿ ದೊರಕಲಿದೆ!

BPL Ration Card

ಏಪ್ರಿಲ್‌ನಿಂದ ಹೊಸ ನಿಯಮಗಳು!

ಏಪ್ರಿಲ್‌ನಿಂದ ಹೊಸ ಅಕ್ಕಿ ವಿತರಣಾ ನಿಯಮ ಜಾರಿಗೆ ಬರಲಿದೆ.

  1. ನಾಲ್ಕು ಸದಸ್ಯರ ಕಾರ್ಡ್‌ಗೆ 40 ಕೆ.ಜಿ.
  2. ಐದು ಮಂದಿ ಸದಸ್ಯರ ಕಾರ್ಡ್‌ಗೆ 60 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಬಂಪರ್ ಸಬ್ಸಿಡಿ! ಕೃಷಿ ಭಾಗ್ಯ ಯೋಜನೆ ಸಹಾಯಧನ

ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿದಾರರು ಇದ್ದಾರೆ. ಅವರ ಪೈಕಿ 4.21 ಕೋಟಿ ಜನ ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಘೋಷಣೆಯೊಂದಿಗೆ, ಬಿಪಿಎಲ್‌ (BPL Ration Card) ಮತ್ತು ಅಂತ್ಯೋದಯ ಕಾರ್ಡ್‌ದಾರರು ಮತ್ತಷ್ಟು ಲಾಭ ಪಡೆಯಲಿದ್ದಾರೆ!

Ration Card, 15 KG Rice for Beneficiaries in Karnataka

English Summary

Our Whatsapp Channel is Live Now 👇

Whatsapp Channel

Related Stories