Bengaluru News

ಆರ್‌ಸಿಬಿ ಗೆಲುವಿಗೆ ಬೆಂಗಳೂರು ಸೇರಿ ಕರ್ನಾಟಕ ರಾಜ್ಯಾದ್ಯಂತ ಸಂಭ್ರಮಾಚರಣೆ

ಪಂಜಾಬ್ ವಿರುದ್ಧ ಭರ್ಜರಿ ಗೆಲುವಿನ ಬಳಿಕ ಆರ್‌ಸಿಬಿ ಅಭಿಮಾನಿಗಳು ರಾಜ್ಯಾದ್ಯಂತ ಬೀದಿಗಿಳಿದು ಸಂಭ್ರಮಾಚರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Publisher: Kannada News Today (Digital Media)

  • RCB ಗೆಲುವಿಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮ
  • ಚರ್ಚ್‌ಸ್ಟ್ರೀಟ್‌ನಲ್ಲಿ ಪಟಾಕಿ, ಪಬ್‌ಗಳಲ್ಲಿ ಡಿಜೆ ಡಾನ್ಸ್
  • ರಸ್ತೆಗಳಲ್ಲಿ ಟ್ರಾಫಿಕ್ ಜಾಮ್, ಪೊಲೀಸರಿಗೂ ತೀವ್ರ ಕಷ್ಟ

ಬೆಂಗಳೂರು (Bengaluru): ಪಂಜಾಬ್ ವಿರುದ್ಧದ ಐಪಿಎಲ್‌ (IPL Cricket Match) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಬೆಂಗಳೂರು ನಗರ ಅಭಿಮಾನಿಗಳ ಸಂಭ್ರಮದಲ್ಲಿ ಮುಳುಗಿತ್ತು. MG ರಸ್ತೆ, ಚರ್ಚ್ ಸ್ಟ್ರೀಟ್, ವಿಜಯನಗರದ ರಸ್ತೆಗಳೆಲ್ಲಾ ಪಟಾಕಿಗಳ ಹೊಳಪಿನಿಂದ ಝಗಮಗಿಸಿತು.

ಮಧ್ಯರಾತ್ರಿ ಆದರೂ ರಸ್ತೆಗಳಲ್ಲಿ ಜನ ಸಾಗರ ಉಂಟಾಗಿ, “ಈ ಸಲ ಕಪ್ ನಮ್ದೆ!” ಎಂಬ ಘೋಷಣೆಗಳನ್ನು ಕೂಗಿದ ದೃಶ್ಯಗಳು ಹಲವೆಡೆ ಕಂಡುಬಂದವು. ಚರ್ಚ್‌ಸ್ಟ್ರೀಟ್‌ನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಸಿದರು, ಪಬ್‌ಗಳಲ್ಲಿ ಡಿಜೆ ಸಾಂಗ್‌ಗೆ ಯುವಕರು ಸ್ಟೆಪ್‌ ಹಾಕಿದರು. ಈ ರೀತಿ ರಾಜ್ಯದ ತಮಕೂರು, ಹಾಸನ, ಮೈಸೂರು ಸೇರಿದಂತೆ ಅನೇಕ ಜಿಲ್ಲೆಯಲ್ಲೂ ಸಂಭ್ರಮಾಚರಣೆ ಮುಂದುವರೆದಿತ್ತು.

ಆರ್‌ಸಿಬಿ ಗೆಲುವಿಗೆ ಬೆಂಗಳೂರು ಸೇರಿ ಕರ್ನಾಟಕ ರಾಜ್ಯಾದ್ಯಂತ ಸಂಭ್ರಮಾಚರಣೆ

ಇದನ್ನೂ ಓದಿ: ಕ್ಷಮೆ ಕೇಳಿ, ಆಟಿಟ್ಯೂಡ್ ಏಕೆ? ಹೈಕೋರ್ಟ್‌ ತರಾಟೆ, ಕಮಲ್ ಹಾಸನ್‌ ಸಿನಿಮಾ ಬ್ಯಾನ್

ಆರ್‌ಸಿಬಿ ತನ್ನ ಮೊದಲ ಐಪಿಎಲ್ ಕಪ್ (IPL trophy) ಗೆದ್ದ ಬೆನ್ನಲ್ಲೇ ನಗರದಾದ್ಯಂತ ಅಭಿಮಾನಿಗಳ ಸಂತೋಷ ಅಬ್ಬರದ ಹಬ್ಬವಾಯಿತು. ಆನೇಕಲ್, ಮಾರತ್ತಹಳ್ಳಿ ಸೇರಿ ಹಲವೆಡೆ ಯುವಕರು ನಡುರಸ್ತೆಗಳಲ್ಲಿ ಕುಣಿದಾಡಿದ ದೃಶ್ಯಗಳು ವೈರಲ್‌ ಆಗಿವೆ. ಕೆಲವರು ತಮ್ಮ ಟೀಶರ್ಟ್ ತೆಗೆದು ಪಟಾಕಿ ಸಿಡಿಸಿ ನೃತ್ಯ ಮಾಡಿದ್ದು ಟ್ರೆಂಡಿಂಗ್ ಆಗಿದೆ.

Royal Challengers Bangalore

ಈ ಸಂಭ್ರಮದ ಮಧ್ಯೆ ಟ್ರಾಫಿಕ್ ಜಾಮ್ ಕೂಡ ಭಾರೀ ಪ್ರಮಾಣದಲ್ಲಿ ಉಂಟಾಯಿತು. ರಸ್ತೆಗಳ ತುಂಬೆಲ್ಲಾ ವಾಹನಗಳು ನಿಂತುಕೊಂಡಿದ್ದರೂ ಜನರ ಉತ್ಸಾಹ ಮಾತ್ರ ಜಾಸ್ತಿಯಾಗಿತ್ತೇ ಹೊರತು ಕಡಿಮೆಯಾಗಲಿಲ್ಲ. ಪೊಲೀಸ್ ಇಲಾಖೆ ಸಂಭ್ರಮವನ್ನು ನಿಯಂತ್ರಿಸಲು ಪರದಾಡಿದುದಂತೂ ನಿಜ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ಕರ್ನಾಟಕ ರೈತರಿಗೆ ಭರ್ಜರಿ ಸಬ್ಸಿಡಿ ಯೋಜನೆಗಳು! ಸಂಪೂರ್ಣ ಮಾಹಿತಿ

ಬೀದಿಗಳಲ್ಲಿ ಸಿಡಿಮದ್ದುಗಳ ಬೆಳಕು, ಹರ್ಷೋದ್ಗಾರದ ಧ್ವನಿ, ಡಿಜೆ ನೃತ್ಯ – ಎಲ್ಲವೂ ರಾಜ್ಯದಲ್ಲಿ ಹಬ್ಬದ ವಾತಾವರಣ ಹುಟ್ಟುಹಾಕಿತ್ತು. RCB ಅಭಿಮಾನಿಗಳ ಈ ಭಾವನೆ, ಗೆಲುವಿನ ಹರ್ಷ, ಕ್ರೀಡೆಗೆ ಇರುವ ಪ್ರೀತಿ ಎಲ್ಲವೂ ಸ್ಪಷ್ಟವಾಗಿ ತೋರುತ್ತಿತ್ತು.

RCB Victory Over Punjab Sets Bengaluru Streets in Celebration

English Summary

Our Whatsapp Channel is Live Now 👇

Whatsapp Channel

Related Stories