Bengaluru NewsKarnataka News

ತೀರದ ಗೃಹಲಕ್ಷ್ಮಿ ಯೋಜನೆ ಬಿಕ್ಕಟ್ಟು; ಶಾಸಕ, ಸಚಿವರ ತರಾವರಿ ಹೇಳಿಕೆಗಳು

ಸತೀಶ್ ಜಾರಕಿಹೊಳಿ ಗೃಹಲಕ್ಷ್ಮಿ ಯೋಜನೆ ಪಾವತಿಯಲ್ಲಿ ವಿಳಂಬವಾದರೆ ಸಮಸ್ಯೆ ಇಲ್ಲ ಎಂದಿದ್ದು "ಆಕಾಶ ಕಳಚಿ ಬೀಳಲ್ಲ", ಎಂದಿದ್ದಾರೆ. ಅವರ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಡಿಕೆ ಶಿವಕುಮಾರ್ ಸಹ ಇದೇ ಮಾತು ಹೇಳಿದ್ದಾರೆ.

Publisher: Kannada News Today (Digital Media)

  • ಗೃಹಲಕ್ಷ್ಮಿ ಯೋಜನೆ ಪಾವತಿ ವಿಳಂಬಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
  • “ಹಣ ತಡವಾದರೆ ಆಕಾಶ ಕಳಚಿ ಬೀಳಲ್ಲ” ಎಂಬ ವಿವಾದಾತ್ಮಕ ಹೇಳಿಕೆ

ದಾವಣಗೆರೆಯಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ವಿಳಂಬ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), “ಪ್ರತಿ ತಿಂಗಳು ಹಣ ಕೊಡದಿದ್ರೆ ಏನು ಆಗುತ್ತೆ? ಆಕಾಶ ಕಳಚಿಬೀಳುತ್ತಾ?” ಎಂದು ಪ್ರಶ್ನಿಸುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.

ಸರ್ಕಾರಿ ಯೋಜನೆಗಳ ಪಾವತಿಯಲ್ಲಿ ಕೆಲವೊಮ್ಮೆ ತಡವಾಗುವುದು ಸಾಮಾನ್ಯ ಎನ್ನುವ ಅವರು, “ಒಮ್ಮೆ ತಡವಾದರೂ ಎಲ್ಲಾ ಹಣ ಒಟ್ಟಿಗೆ ಬಂತು ಅಂದರೆ ಸಾಕು. ಜನರು ಇದರ ಬಗ್ಗೆ ಆತಂಕ ಪಡಬೇಕಾಗಿಲ್ಲ,” ಎಂದು ತಿಳಿಸಿದರು. ಹಣದ ಪಾವತಿ ಬಗ್ಗೆ ಜನರಲ್ಲಿ ಮೂಡುತ್ತಿರುವ ಭಯವನ್ನು ತಣ್ಣಗೆ ಮಾಡುವ ಪ್ರಯತ್ನವಿದು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣಕ್ಕೆ ಕಾದಿರುವ ಮಹಿಳೆಯರಿಗೆ ಸಿಹಿ ಸುದ್ದಿ! ಸಿಎಂ ಹೊಸ ಸೂಚನೆ

ಈ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಇದೇ ವಿಷಯದ ಬಗ್ಗೆ ಮಾತನಾಡಿದ್ದು, “ಪ್ರತಿ ತಿಂಗಳು ಹಣ ಖಾತೆಗೆ ಹಾಕಲು ಸಾಧ್ಯವಿಲ್ಲ. ಸರ್ಕಾರಕ್ಕೆ ಬಂದ ಹಣವನ್ನು ಯೋಜನೆಗಳ ಪ್ರಕಾರ ಹಂಚಿಕೊಳ್ಳಲಾಗುತ್ತದೆ,” ಎಂದು ಸ್ಪಷ್ಟಪಡಿಸಿದ್ದರು.

ಇತ್ತೀಚೆಗೆ ಗೃಹಲಕ್ಷ್ಮಿ ಹಣ ಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತ್ತು. ಕೆಲವರು ಬ್ಯಾಂಕ್‌ಗಳಿಗೆ ಹೋಗಿ ಖಾತೆ ಪರಿಶೀಲನೆಗೂ ಮುಂದಾಗಿದ್ದರು. (Payment delay) ಕುರಿತು ಕೇಳಿದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿಯ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಟೀಕೆಗೆ ಗುರಿಯಾಗಿದೆ.

Gruha Lakshmi Scheme

“ಎಷ್ಟು ತಡವಾದರೂ ಸರಿದೂಗಿಸಬಹುದು. ಇದು ರಾಜಕೀಯ ಅಜಾಗರೂಕತೆ ಅಲ್ಲ, ಆಡಳಿತಾತ್ಮಕ ಸಾಮಾನ್ಯತೆ,” ಎಂದು ಸ್ಪಷ್ಟಪಡಿಸಿದ ಜಾರಕಿಹೊಳಿ, ಹೇಳಿಕೆಗಳಿಗೆ ಟೀಕೆಗಳು ಕೂಡ ಕೇಳಿಬರುತ್ತಿವೆ.

2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು, ಚುನಾವಣೆ ಪೂರ್ವದ ಮಾತಿನಂತೆ ಗೃಹಲಕ್ಷ್ಮಿ ಯೋಜನೆ ಆರಂಭಿಸಿತ್ತು. ಇದರಡಿ, ಅರ್ಹ ಮಹಿಳಾ ಫಲಾನುಭವಿಗಳಿಗೆ ಪ್ರತೀ ತಿಂಗಳು ₹2000 ರಂತೆ (monthly transfer) ಹಣ ನೀಡಲು ಯೋಜನೆ ರೂಪಿಸಲಾಯಿತು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆ! ಏಪ್ರಿಲ್, ಮೇ ತಿಂಗಳ ಹಣ ಖಾತೆಗೆ: ಲಕ್ಷ್ಮೀ ಹೆಬ್ಬಾಳ್ಕರ್

ಆದರೆ ಇದೀಗ ಕೆಲ ತಿಂಗಳುಗಳು ಮಾತ್ರ ಪಾವತಿ ಮಾಡಿ, ಪ್ರತಿ ಶಾಸಕರು, ಸಚಿವರುಗಳು ತರಾವರಿ ಹೇಳಿಕೆಗಳನ್ನು ನೀಡುತ್ತಿರುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇವಲ ಅಧಿಕಾರ ಹಿಡಿಯುವುದಕ್ಕೆ ಮಾಡಿದ ಯೋಜನೆಗಳು ಎಂಬ ಆರೋಪಗಳು ಕೇಳಿಬರುತ್ತಿವೆ.

Satish Jarkiholi Reacts to Gruha Lakshmi Scheme Delay

English Summary

Our Whatsapp Channel is Live Now 👇

Whatsapp Channel

Related Stories