ಬೆಂಗಳೂರು ಜೆಸಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
ಬೆಂಗಳೂರು ಜೆಸಿ ರಸ್ತೆಯ ಯೂನಿಟಿ ಬಿಲ್ಡಿಂಗ್ ಬಳಿ ಮಂಗಳವಾರ ಮಧ್ಯಾಹ್ನ ಸ್ಕೂಟರ್ ಚಾಲಕನೊಬ್ಬ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.
ಬೆಂಗಳೂರು (Bengaluru): ಜೆಸಿ ರಸ್ತೆಯ ಯೂನಿಟಿ ಬಿಲ್ಡಿಂಗ್ ಬಳಿ ಮಂಗಳವಾರ ಮಧ್ಯಾಹ್ನ ಸ್ಕೂಟರ್ ಚಾಲಕನೊಬ್ಬ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.
ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಓರ್ವ ಮೆಕ್ಯಾನಿಕ್ ಎಂದು ಗುರುತಿಸಲಾಗಿದ್ದು, ಆತನ ಹೆಸರು ಮುಜಾಹಿದ್ ಎನ್ನಲಾಗಿದೆ, ಆದರೆ ಆತ ತನ್ನ ಮೇಲೆ ಕೂಡ ಹಲ್ಲೆ ಆಗಿದೆ ಎಂದು BMTC ಚಾಲಕ ರಮೇಶ್ ಎಂಎನ್ ಮತ್ತು ಪ್ರಯಾಣಿಕರ ವಿರುದ್ಧ ಪ್ರತಿದೂರು ದಾಖಲಿಸಿದ್ದಾನೆ.
ಬೆಂಗಳೂರು: 10 ತಿಂಗಳಲ್ಲಿ 118 ಶಾಲಾ ವಾಹನ ಚಾಲಕರು ಡ್ರಂಕ್ ಅಂಡ್ ಡ್ರೈವ್
ರಮೇಶ್ ಮತ್ತು ಆತನ ಸಹೋದ್ಯೋಗಿ ಶಂಕರ್ ರೆಡ್ಡಿ ಹೊಸಕೋಟೆಯಿಂದ ಕೆ.ಆರ್.ಮಾರುಕಟ್ಟೆಗೆ ತೆರಳುತ್ತಿದ್ದ ಬಸ್ಸಿನಲ್ಲಿ ನಿಯೋಜನೆಗೊಂಡಿದ್ದರು. ಎನ್.ಆರ್.ರಸ್ತೆ ಸಿಗ್ನಲ್ ಬಳಿ ಸ್ಕೂಟರ್ ಚಾಲಕ (ಮುಜಾಹಿದ್) ಎಡಬದಿಯಿಂದ ಬಸ್ ಅನ್ನು ಹಿಂದಿಕ್ಕಲು ಯತ್ನಿಸಿದ್ದು, ಸಾಕಷ್ಟು ಸ್ಥಳಾವಕಾಶ ಸಿಗದಿದ್ದಾಗ ಕಿರುಚಿದ್ದಾನೆ ಎಂದು ರಮೇಶ್ ಪೊಲೀಸರಿಗೆ ತಿಳಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಪರಿಹಾರಕ್ಕೆ ಚರ್ಚೆ
ಈ ನಡುವೆ ರಮೇಶ್ ಚಾಲನೆ ಮಾಡುವಾಗ, ಯುನಿಟಿ ಬಿಲ್ಡಿಂಗ್ ಬಳಿ ಮುಜಾಹಿದ್ ಬಸ್ ಅನ್ನು ಅಡ್ಡಗಟ್ಟಿ ನಿಂದಿಸಿದ್ದಾನೆ. ಮುಜಾಹಿದ್ ಸುತ್ತಿಗೆಯಿಂದ ಚಾಲಕನ ಸೀಟಿನ ಕಿಟಕಿ ಗಾಜು ಒಡೆದು ಹಲ್ಲೆಗೆ ಯತ್ನಿಸಿದ್ದಾನೆ. ಕಿಟಕಿಗೆ ಹಾನಿಯಾಗದಂತೆ ತಡೆಯಲು ಮುಂದಾದಾಗ ರಮೇಶ್ ಅವರ ಎಡಗೈಗೆ ಪೆಟ್ಟಾಗಿದೆ.
Scooterist assaults BMTC bus driver in Bengaluru