ಬೆಂಗಳೂರು ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು

ಪ್ರಯಾಣಿಕರ ಹೆಚ್ಚುತ್ತಿರುವ ದಟ್ಟಣೆ ಹಿನ್ನೆಲೆಯಲ್ಲಿ, ಬೆಂಗಳೂರು–ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಈ ತಿಂಗಳು 22ರಿಂದ 27ರವರೆಗೆ ನಿರ್ದಿಷ್ಟ ದಿನಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಘೋಷಿಸಿದೆ.

  • 22, 24, 26ರಂದು ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ರೈಲು
  • 23, 25, 27ರಂದು ಬೀದರ್‌ನಿಂದ ಬೆಂಗಳೂರಿಗೆ ಸಂಚಾರ
  • ರೈಲಿನಲ್ಲಿ 3AC, ಸ್ಲೀಪರ್‌, ಜನರಲ್ ಕೋಚುಗಳು ಲಭ್ಯ

ಬೆಂಗಳೂರು (Bengaluru): ಪ್ರಯಾಣಿಕರ ಹೆಚ್ಚಿದ ಸಂಖ್ಯೆ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಬೀದರ್‌–ಬೆಂಗಳೂರು ಮಾರ್ಗದಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಪ್ರಾರಂಭಿಸುತ್ತಿದೆ.

ಈ ವಿಶೇಷ ರೈಲುಗಳು ಬೀದರ್ ಜಂಕ್ಷನ್, ಬೆಂಗಳೂರು ಜಂಕ್ಷನ್ ನಡುವಿನ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ. ಈ ನಡುವೆ (train number) 06590 ರೈಲು ಬೀದರ್‌ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು, ಮುಂದಿನ ದಿನ ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ಈ ಸೇವೆ 23, 25, 27ರಂದು ಮಾತ್ರ ಲಭ್ಯವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ, 22, 24 ಮತ್ತು 26 ರಂದು (train no) 06589 ರೈಲು ರಾತ್ರಿ 9:15ಕ್ಕೆ ಬೆಂಗಳೂರು ಜಂಕ್ಷನ್ ನಿಂದ ಹೊರಟು, ಮುಂದಿನ ದಿನ ಬೆಳಗ್ಗೆ 10:15ಕ್ಕೆ ಬೀದರ್‌ ಜಂಕ್ಷನ್ ತಲುಪುತ್ತದೆ.

ಈ ರೈಲುಗಳು ಯಲಹಂಕ, ಹಿಂದುಪುರ, ಧರ್ಮವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ, ರಾಯಚೂರು, ಕೃಷ್ಣಾ, ಯಾದಗಿರಿ, ಶಾಹಬಾದ್, ಕಲಬುರ್ಗಿ ಮತ್ತು ಹುಮನಾಬಾದ್ ನಂತಹ ಪ್ರಮುಖ ನಿಲ್ದಾಣಗಳ ಮೂಲಕ ಸಾಗಲಿದೆ.

ಪ್ರತ್ಯೇಕವಾಗಿ 3AC, ಸ್ಲೀಪರ್ ಹಾಗೂ ಜನರಲ್ ಬೋಗಿಗಳ ವ್ಯವಸ್ಥೆಯು ಇರುತ್ತದೆ. ವಿಶೇಷ ಸೇವೆಗಳು ಬರಲಿರುವ ರಜೆ ದಿನಗಳ ವೇಳೆಯಲ್ಲಿ ಅನುಕೂಲವಾಗಲಿದ್ದು, ಹೆಚ್ಚು ಪ್ರಯಾಣ ಮಾಡುವವರಿಗೆ ಇದು ಸೌಲಭ್ಯವಂತಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು South Central Railway website ಅಥವಾ IRCTC app ಮೂಲಕ ಪರಿಶೀಲನೆ ಮಾಡಬಹುದು.

Special Express Trains Between Bengaluru and Bidar

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories