ಕರ್ನಾಟಕ ರೈತರ ಹಸು, ಕುರಿ, ಮೇಕೆ ಸಾಕಾಣಿಕೆಗೆ ಸಿಗುವ ಸಬ್ಸಿಡಿ ಯೋಜನೆಗಳ ಪಟ್ಟಿ
ಕೃಷಿ ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಕುರಿ, ಮೇಕೆ, ಹಸು ಸಾಕಾಣಿಕೆದಾರರಿಗೆ ಸಹಾಯಧನ, ಸಬ್ಸಿಡಿ, ಪರಿಹಾರ ಯೋಜನೆಗಳು ಲಭ್ಯವಿವೆ.
Publisher: Kannada News Today (Digital Media)
- ಹಸು, ಕುರಿ ಸಾವಿಗೆ 1 ಲಕ್ಷದವರೆಗೆ ಪರಿಹಾರ
- ನಾಟಿ ಕೋಳಿಗೆ ಉಚಿತ ವಿತರಣಾ ಯೋಜನೆ
- ಮೇವು ಯಂತ್ರ, ಲಸಿಕೆ ಸೇವೆ ಉಚಿತ
ಬೆಂಗಳೂರು (Bengaluru): ಕೃಷಿಕರು, ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆದಾರರಿಗೆ ಹಲವು ಸೌಲಭ್ಯಗಳೊಂದಿಗೆ ಹೊಸ ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಕಟಿಸಿವೆ. ಈ ಯೋಜನೆಗಳ ಉದ್ದೇಶವೇ ಗ್ರಾಮೀಣ ಬದುಕಿಗೆ ಆರ್ಥಿಕ ಬೆಳವಣಿಗೆ ನೀಡುವುದು.
ಇತ್ತೀಚೆಗೆ ಕೃಷಿ ಕ್ಷೇತ್ರದ ಜೊತೆಗೆ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿರುವ ಕರ್ನಾಟಕ ಸರ್ಕಾರ (Karnataka Government), ವಿವಿಧ ಯೋಜನೆಗಳ (animal husbandry schemes) ಮೂಲಕ ಗ್ರಾಮೀಣ ಬದುಕಿಗೆ ಆರ್ಥಿಕ ಬಲ ನೀಡುವ ಕಾರ್ಯ ನಡೆಸುತ್ತಿದೆ.
ಹಸು, ಕುರಿ, ಕೋಳಿ ಸಾಕುವ ರೈತರಿಗೆ ಸಾಕಾಣಿಕೆಯಲ್ಲಿನ ಅನೇಕ ಅಡಚಣೆಗಳನ್ನು ನಿವಾರಣೆಯೊಂದಿಗೆ, ಪೂರಕ ಆದಾಯ ಒದಗಿಸಲು ಈ ಯೋಜನೆಗಳನ್ನು ರೂಪಿಸಲಾಗಿದೆ.
ಇದನ್ನೂ ಓದಿ: ನಿಮ್ಮ ಮನೆ, ತೋಟ, ಜಮೀನಿಗೆ ದಾರಿ ಇದಿಯೋ ಇಲ್ವೋ! ಇಲ್ಲಿದೆ ಅಧಿಕೃತ ನಕ್ಷೆ
ನಾಟಿ ಕೋಳಿ ವಿತರಣೆಯಿಂದ ಹಿಡಿದು, ಜಾನುವಾರುಗಳ ಸಾವಿಗೆ ಪರಿಹಾರ, ಮೇವು ಕತ್ತರಿಸುವ ಯಂತ್ರಗಳಿಗಾಗಿ ಸಹಾಯಧನ, ಉಚಿತ ಲಸಿಕೆ ಸೇವೆ, ಹಾಗೂ ಕುರಿಗಾಹಿ ಘಟಕ ಸ್ಥಾಪನೆಗೆ ₹1.75 ಲಕ್ಷ ಸಬ್ಸಿಡಿಯವರೆಗೆ ನೀಡಲಾಗುತ್ತಿದೆ. ಇವುಗಳ ಸದುಪಯೋಗ ಪಡೆದು ರೈತರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ನಾಟಿ ಕೋಳಿ ಮರಿಗಳ ವಿತರಣೆ ಯೋಜನೆ
ಗ್ರಾಮೀಣ ಮಹಿಳೆಯರ ಸ್ವಸಹಾಯ ಸಂಘಗಳ ಸದಸ್ಯರಿಗೆ ಸರ್ಕಾರ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ. ಇದರಿಂದ ಮಹಿಳೆಯರಿಗೆ ತಮ್ಮ ಆದಾಯವನ್ನು ಸೃಷ್ಟಿ ಮಾಡುವ ಅವಕಾಶ ಸಿಗಲಿದೆ.
ಕುರಿ, ಮೇಕೆ ಸಾವಿಗೆ ಪರಿಹಾರ ಯೋಜನೆ
(Livestock Insurance Scheme) ಈ ಯೋಜನೆ ಅಡಿಯಲ್ಲಿ, ಕುರಿ ಅಥವಾ ಮೇಕೆ ಆಕಸ್ಮಿಕವಾಗಿ ಮರಣ ಹೊಂದಿದರೆ, ರೈತರಿಗೆ ₹5,000 ರಿಂದ ₹3,500ವರೆಗೆ ಪರಿಹಾರ ನೀಡಲಾಗುತ್ತದೆ. ಸರ್ಕಾರದ ಈ ಪರಿಹಾರ ಯೋಜನೆಯಿಂದ ಪಶುಪಾಲಕರಿಗೆ ದೊಡ್ಡ ಉಪಕಾರವಾಗುತ್ತದೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಮೊಬೈಲ್‌ನಲ್ಲೇ ಪಹಣಿ ಡೌನ್‌ಲೋಡ್ ಮಾಡುವ ಸೌಲಭ್ಯ
ಹಸು, ಎಮ್ಮೆ ಮರಣಕ್ಕೆ ₹1 ಲಕ್ಷ ಪರಿಹಾರ
ಹಸು, ಎಮ್ಮೆ ಅಥವಾ ಕೋಣ ಹೋರಿ ಆಕಸ್ಮಿಕವಾಗಿ ಸಾವಿಗೀಡಾದರೆ, ರೈತರಿಗೆ ₹1 ಲಕ್ಷದವರೆಗೆ ಪರಿಹಾರ ದೊರೆಯುತ್ತದೆ. ಇದು ರೈತರ ಹಿತದೃಷ್ಟಿಯಿಂದ ಜಾರಿಗೆ ತಂದ ಕಾರ್ಯಕ್ರಮ.
ಅಮೃತ್ ಸ್ವಾಭಿಮಾನಿ ಕುರಿಗಾಹಿ ಯೋಜನೆ
ಈ ಅಮೃತ್ ಸ್ವಾಭಿಮಾನಿ (Amrit Swabhimani]) ಯೋಜನೆಯಡಿಯಲ್ಲಿ ಕುರಿ ಸಾಕಾಣಿಕೆಯ ಘಟಕ ಸ್ಥಾಪನೆಗೆ ₹1.75 ಲಕ್ಷ ಸಹಾಯಧನ ನೀಡಲಾಗುತ್ತದೆ. ರೈತರು ಈ ಯೋಜನೆಯಿಂದ ಪೂರಕ ಆದಾಯ ಪಡೆಯಬಹುದಾಗಿದೆ.
ಇದನ್ನೂ ಓದಿ: ರೈತರ ಗೇರು ಕೃಷಿಗೆ ₹1.20 ಲಕ್ಷ ಹಣಕಾಸು ನೆರವು! ನೀವು ಅರ್ಜಿ ಹಾಕಿದ್ದೀರಾ?
ಮೇವು ಕತ್ತರಿಸುವ ಯಂತ್ರ ಯೋಜನೆ
ಜಾನುವಾರುಗಳಿಗೆ ಮೇವು ಕತ್ತರಿಸಲು ಶೇಕಡಾ 50 ರಷ್ಟು ಸಬ್ಸಿಡಿಯೊಂದಿಗೆ ಯಂತ್ರ ಖರೀದಿಗೆ ನೆರವು ನೀಡಲಾಗುತ್ತಿದೆ. ಈ (Chaff Cutter Machine Scheme) ಯೋಜನೆಯಿಂದ ಹೆಚ್ಚು ರೈತರು ಲಾಭ ಪಡೆಯಬಹುದಾಗಿದೆ.
ಲಸಿಕೆ, ಪಶು ಚಿಕಿತ್ಸಾ ಯೋಜನೆಗಳು
ಜಾನುವಾರುಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ ಹಾಗೂ ತುರ್ತು ಸಂದರ್ಭಗಳಲ್ಲಿ ಪಶು ವೈದ್ಯಕೀಯ ಸೇವೆಗಾಗಿ 1962 ಸಹಾಯವಾಣಿ ಮೂಲಕ ಸಂಚಾರಿ ಚಿಕಿತ್ಸಾ ವಾಹನ ಮನೆಗೆ ಬರಲಿದೆ. ಇದು ಸಂಪೂರ್ಣ ಉಚಿತ ಸೇವೆ.
ಹಾಲು ಪ್ರೋತ್ಸಾಹಧನ, ಬಡ್ಡಿ ಸಹಾಯ
ಕೆಎಂಎಫ್‌ಗೆ ಹಾಲು ನೀಡುವ ರೈತರಿಗೆ ಪ್ರತಿ ಲೀಟರಿಗೆ ₹5 ಪ್ರೋತ್ಸಾಹಧನ ಸಿಗಲಿದೆ. ಜೊತೆಗೆ ಹಸು, ಹೆಮ್ಮೆ ಖರೀದಿಗೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ (Loan) ಲಭ್ಯವಿದೆ. ಮಹಿಳೆಯರಿಗೆ ಶೇಕಡಾ 4 ಬಡ್ಡಿದರದಲ್ಲಿ [Cattle Purchase Loan] ನೀಡಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡೋದು ಹೇಗೆ? ಸಂಪೂರ್ಣ ಮಾಹಿತಿ
ಮೇವಿನ ಬೀಜ ವಿತರಣಾ ಯೋಜನೆ
ಹಾಲು ಉತ್ಪಾದಕರಿಗೆ ಉಚಿತವಾಗಿ ಮೇವು ಬಿತ್ತನೆ ಬೀಜಗಳ ವಿತರಣೆಯೂ ಪ್ರಾರಂಭವಾಗಿದೆ. ಇದು ಪಶುಪಾಲಕರಿಗೆ ಹೆಚ್ಚು ಉತ್ಪಾದನೆ ಸಾಧಿಸಲು ಸಹಾಯ ಮಾಡಲಿದೆ.
ಎಲ್ಲ ಯೋಜನೆಗಳ ಲಾಭ ಪಡೆಯುವುದು ಹೇಗೆ?
ಹೈನುಗಾರರು ಮತ್ತು ಕುರಿ ಸಾಕಾಣಿಕೆದಾರರು ಹತ್ತಿರದ ಪಶುಪಾಲನಾ ಇಲಾಖೆ ಕಚೇರಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಈ [Animal Husbandry Subsidy Schemes] ಲಾಭ ಪಡೆಯುವುದು ಬಹುಮುಖ್ಯ.
Subsidy Schemes for Animal Husbandry and Sheep Farming in Karnataka