ನಟ ದರ್ಶನ್​ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್, ಮತ್ತೆ ಜೈಲು ಸೇರುವ ಸ್ಥಿತಿ - Actor Darshan bail cancelled

ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನಿಗೆ ಸುಪ್ರೀಂ ಕೋರ್ಟ್ ಸ್ಟಾಪ್. ಕಾನೂನು ಮುಂದೆ ಯಾರೂ ದೊಡ್ಡವರಲ್ಲ ಎಂಬ ಕಠಿಣ ಸಂದೇಶ. ದರ್ಶನ್ ಸೇರಿದಂತೆ ಹಲವರ ಜಾಮೀನು ರದ್ದು, ಮತ್ತೆ ಜೈಲು ಸೇರುವ ಸ್ಥಿತಿ.

  • ನಟ ದರ್ಶನ್ ಜಾಮೀನು ಸುಪ್ರೀಂ ಕೋರ್ಟ್ ರದ್ದು
  • ಕಾನೂನು ಮುಂದೆ ಎಲ್ಲರಿಗೂ ಸಮಾನತೆ, ಕಠಿಣ ಸಂದೇಶ
  • ಹಲವರ ಜಾಮೀನು ರದ್ದು, ಮತ್ತೆ ಜೈಲು ಸೇರುವ ಆದೇಶ

Actor Darshan Bail Cancel : ನಟ ದರ್ಶನ್‌ಗೆ ಮತ್ತೊಮ್ಮೆ ಕಾನೂನಿನ ಸಂಕಷ್ಟ ಎದುರಾಗಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ((Supreme Court) ತೀವ್ರ ಟೀಕೆಯೊಂದಿಗೆ ರದ್ದುಪಡಿಸಿದೆ. ಇದರಿಂದ ಅವರು ಮತ್ತು ಇನ್ನೂ ಹಲವರು ಮತ್ತೆ ಜೈಲು ಸೇರುವ ಪರಿಸ್ಥಿತಿಯಲ್ಲಿದ್ದಾರೆ.

ಸುಪ್ರೀಂ ಪೀಠದ ನ್ಯಾಯಮೂರ್ತಿಗಳು “ಯಾರೇ ಆಗಿರಲಿ, ಕಾನೂನು ಮುಂದೆ ಎಲ್ಲರೂ ಸಮಾನರು. ಜೈಲಿನಲ್ಲಿ ಆರೋಪಿ ಐಷಾರಾಮಿ ಜೀವನ ನಡೆಸಿದ್ದರೆ, ಅದು ಸ್ವೀಕಾರಾರ್ಹವಲ್ಲ. ಜೈಲು ಸೂಪರಿಂಟೆಂಡಂಟ್‌ನ್ನು ಕೂಡಾ ಅಮಾನತುಗೊಳಿಸಬೇಕಾಗಿತ್ತು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕೋರ್ಟ್ ಈ ತೀರ್ಪನ್ನು “ಲ್ಯಾಂಡ್‌ಮಾರ್ಕ್” ಎಂದು ಕರೆಯಿತು.

Actor Darshan

ಈ ಪ್ರಕರಣದಲ್ಲಿ ದರ್ಶನ್‌ ಜೊತೆಗೆ ಪವಿತ್ರಾ ಗೌಡ, ಜಗ್ಗ, ಅನುಕುಮಾರ್, ಪ್ರದೂಶ್, ನಾಗರಾಜು, ಲಕ್ಷ್ಮಣ್‌ ಅವರ ಜಾಮೀನುಗಳೂ ರದ್ದು ಆಗಿವೆ. ಸರ್ಕಾರದ ಪರ ವಕೀಲರು “ನಾವು ಕಲೆಹಾಕಿದ ಸಾಕ್ಷ್ಯಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಜೈಲಿನಲ್ಲಿದ್ದಾಗಿನ ಸುಖಸೌಕರ್ಯ ಮತ್ತು ಬಿಡುಗಡೆ ನಂತರದ ವರ್ತನೆ ಬಗ್ಗೆ ನಾವು ಮಂಡಿಸಿದ್ದೇವೆ” ಎಂದು ಹೇಳಿದ್ದಾರೆ.

ಕಳೆದ ವರ್ಷ ಜೂನ್ 11 ರಂದು ದರ್ಶನ್ ಬಂಧನಕ್ಕೊಳಗಾದರು. ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಇದ್ದ ಅವರು ಬೆನ್ನುನೋವಿನ ಕಾರಣ ನೀಡಿ ಬಿಡುಗಡೆಗೊಂಡರು. ಡಿಸೆಂಬರ್‌ನಲ್ಲಿ ಹೈಕೋರ್ಟ್ ಸಂಪೂರ್ಣ ಜಾಮೀನು ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು.

ನಟ ದರ್ಶನ್

ಹಲವಾರು ವಿಚಾರಣೆಗಳ ನಂತರ, ಕೋರ್ಟ್ ಹೈಕೋರ್ಟ್ ಆದೇಶದಲ್ಲಿ ತಾಂತ್ರಿಕ ದೋಷವಿದೆ ಎಂದು ಹೇಳಿ, ಜಾಮೀನು ರದ್ದುಪಡಿಸಿದೆ. ಇಷ್ಟು ದಿನ ಹೊರಗೆ ಹಾಯಾಗಿ ಇದ್ದ ದರ್ಶನ್, ಈಗ ಮತ್ತೆ ಜೈಲಿನ ಬಾಗಿಲು ತಟ್ಟಬೇಕಾಗಿದೆ. ಈ ಬೆಳವಣಿಗೆ ಅಭಿಮಾನಿಗಳಿಗೆ ನಿರಾಶೆ ತಂದಿದೆ.

Supreme Court Cancels Actor Darshan’s Bail

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories