ಬೆಂಗಳೂರು ಬನ್ನೇರುಘಟ್ಟಕ್ಕೆ ಸಾಗಿಸುತ್ತಿದ್ದ ಕಾಡುಪ್ರಾಣಿಗಳ ಟ್ರಕ್ ಪಲ್ಟಿ
ಬೆಂಗಳೂರಿನ (Bengaluru) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹುಲಿ, ಆನೆಗಳಂತಹ ಕಾಡುಪ್ರಾಣಿಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ.
ಬೆಂಗಳೂರಿನ (Bengaluru) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹುಲಿ, ಆನೆಗಳಂತಹ ಕಾಡುಪ್ರಾಣಿಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ. ಅವಘಡದಲ್ಲಿದ್ದ ಎಲ್ಲಾ ಪ್ರಾಣಿಗಳು ಸುರಕ್ಷಿತವಾಗಿ ಪಾರಾಗಿವೆ. ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಬಿಹಾರದ ರಾಜಧಾನಿ ಪಾಟ್ನಾದ (Patna) ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ (Bengaluru Bannerghatta Biological Park) ಎರಡು ವಾಹನಗಳಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ಸಾಗಿಸಲಾಗುತ್ತಿತ್ತು.
ಇವುಗಳಲ್ಲಿ ಎಂಟು ಮೊಸಳೆಗಳು, ಎರಡು ಆನೆಗಳು, ಎರಡು ಬಿಳಿ ಹುಲಿಗಳು ಮತ್ತು ಇತರ ಪ್ರಾಣಿಗಳು ಸೇರಿವೆ. ಆದರೆ, ನಿರ್ಮಲ್ ಜಿಲ್ಲೆಯ ಮಮಡ ಮಂಡಲದ ಮೊಂಡಿಗುಟ್ಟ ಗ್ರಾಮಕ್ಕೆ ಬರುವಾಗ ಟ್ರಕ್ ಅಪಘಾತಕ್ಕೀಡಾಗಿದೆ.
ಬೆಂಗಳೂರು ಮಳೆ: ಸರ್ಕಾರ ಪರಿಸ್ಥಿತಿ ನಿಭಾಯಿಸಲಿದೆ ಎಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಚಾಲಕನ ನಿಯಂತ್ರಣ ತಪ್ಪಿದ ವಾಹನ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆ ಬದಿಗೆ ವಾಹನ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಎಂಟು ಮೊಸಳೆಗಳ ಪೈಕಿ ಎರಡನ್ನು ರಕ್ಷಿಸಲಾಗಿದೆ, ಉಳಿದವು ರಸ್ತೆ ಬದಿಯ ಪೊದೆಗಳಲ್ಲಿ ಸೇರಿಕೊಂಡವು.
ಮಾಹಿತಿ ಪಡೆದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದ ಮೊಸಳೆಗಳನ್ನು ಮತ್ತೆ ಹಿಡಿಯಲಾಯಿತು. ಬಳಿಕ ಮತ್ತೊಂದು ವಾಹನದ ವ್ಯವಸ್ಥೆ ಮಾಡಿ ಎಲ್ಲವನ್ನೂ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.
Truck Carrying Wild Animals to Bengaluru Bannerghatta Biological Park Overturns In Telangana