ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಬಾಕಿ ಇರೋದು ಗೊತ್ತಿಲ್ಲ ಎಂದ ಸಿಎಂ ಹೇಳಿಕೆಗೆ ಟೀಕೆ
ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ, ಬಾಕಿ ಇರುವುದು ನನ್ನ ಗಮನಕ್ಕೆ ಬಂದಿಲ್ಲ ಎಂಬ ಹೇಳಿಕೆ ಟೀಕೆಗೆ ಗುರಿಯಾಗಿದೆ
- ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಹಣ ಬಾಕಿ ಇರೋದು ಗೊತ್ತಿಲ್ಲ
- ಸಿಎಂ ಸಿದ್ದರಾಮಯ್ಯ ಅವರ ಹೇಳಿಕಗೆ ತೀವ್ರ ಟೀಕೆ
- ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿತರಣೆ ಬಾಕಿ
ಬೆಂಗಳೂರು (Bengaluru): ಈಗಾಗಲೇ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ದೇಶಾದ್ಯಾಂತ ತಮ್ಮ ಪ್ರಚಾರದಲ್ಲಿ ಬಳಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಈ ಯೋಜನೆಗಳು ಬಹುಶಃ ಪಕ್ಷದ ವಿಜಯಕ್ಕೆ ಕಾರಣವಾಗಿವೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗಳ ಬಗ್ಗೆ ಕೊಟ್ಟ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. “ಅನಭಾಗ್ಯ” ಮತ್ತು “ಗೃಹಲಕ್ಷ್ಮಿ” ಯೋಜನೆಗಳಿಗೆ ಸಂಬಂಧಿಸಿದ ಹಣ ಜನರ ಖಾತೆಗೆ ಹಸ್ತಾಂತರವಾಗಿಲ್ಲ ಎಂದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಈಗ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಬಗ್ಗೆ ಡಿಕೆ ಶಿವಕುಮಾರ್ ಕೊಟ್ರು ಸಿಹಿ ಸುದ್ದಿ
ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕಠಿಣವಾಗಿ ಟೀಕೆ ಮಾಡಿವೆ, ಹೌದು, “ಅನಭಾಗ್ಯ ಯೋಜನೆ” ಮತ್ತು “ಗೃಹಲಕ್ಷ್ಮಿ ಯೋಜನೆ” ಬಗ್ಗೆ ಮುಖ್ಯಮಂತ್ರಿಗಳು ನೀಡಿದ ಹೇಳಿಕೆಗಳು ಇದೀಗ ವಿರೋಧ ಪಕ್ಷಗಳಿಂದ ಅಸ್ತ್ರವಾಗಿದೆ.
“ಬಾಕಿ ಇರುವುದು ನನಗೆ ಗೊತ್ತಿಲ್ಲ” ಎಂಬ ಹೇಳಿಕೆಯನ್ನು ನೀಡಿದ ಸಿದ್ದರಾಮಯ್ಯ, ಯೋಜನೆಗಳಿಗೆ ಸಂಬಂಧಿಸಿದ ಹಣ ಮೂರು ತಿಂಗಳುಗಳ ಕಾಲ ಪಾವತಿಯಾಗದೇ ಇದ್ದುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದರಿಂದ ವಿರೋಧ ಪಕ್ಷಗಳು ಈ ಹೇಳಿಕೆಗೆ ಪ್ರತಿಕ್ರಿಯಿಸಿ, “ನೀವು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ, ಜನರ ಹಣದ ವ್ಯವಹಾರಗಳ ಬಗ್ಗೆ ನೀವು ಎಂತಹ ನಿಷ್ಕ್ರಿಯತೆ ಪ್ರದರ್ಶಿಸಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಹಣ ಇನ್ಮೇಲೆ ತಪ್ಪದೆ ಖಾತೆಗೆ ಜಮಾ ಆಗುತ್ತೆ: ಕೆ.ಹೆಚ್.ಮುನಿಯಪ್ಪ
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಈ ಸಂಬಂಧ ಮಾತನಾಡಿ “ನೀವು ಅಧಿಕಾರ ಹಂಚಿಕೊಳ್ಳುವ ಕೌಶಲ್ಯಗಳಲ್ಲಿ ಮಾತ್ರ ತೊಡಗಿರುವಿರಿ” ಎಂದು ವ್ಯಂಗ್ಯವಾಡಿದ್ದಾರೆ. ಹಾಗೆಯೇ, “ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ರಾಜೀನಾಮೆ ನೀಡಿ, ಗೌರವದಿಂದ ಹೊರ ಹೋಗುವುದೇ ಉತ್ತಮ” ಎಂದು ಟೀಕೆ ಮಾಡಿದ್ದಾರೆ.
What Did CM Siddaramaiah Says About guarantee schemes