“ಎರಡು ತಿಂಗಳು ಬಂತು ಆಮೇಲೆ ಬಂದೇ ಇಲ್ಲ”, ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹಿಳೆಯರು ಫುಲ್ ಗರಂ
ಬಹಳಷ್ಟು ಮಹಿಳೆಯರಿಗೆ 11ನೇ ಕಂತಿನ ಹಣ ಬಂದಿಲ್ಲ, ಇನ್ನು ಒಂದಷ್ಟು ಮಹಿಳೆಯರಿಗೆ ಬೇರೆ ಕಂತುಗಳ ಹಣ ಕೂಡ ಅಕೌಂಟ್ ಗೆ (Bank Account) ಡಿಬಿಟಿ ಮೂಲಕ ವರ್ಗಾವಣೆ ಆಗಿಲ್ಲ, ಹಾಗಾಗಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಕಳೆದ ವರ್ಷ ವಿಧಾನಸಭಾ ಚುನಾವಣೆ ನಡೆದು, ಅದರಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ರಾಜ್ಯದಲ್ಲಿ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಈ ಯೋಜನೆಗಳ ಮೂಲಕ ಸಾಮಾನ್ಯ ಜನರಿಗೆ ಅನುಕೂಲ, ಸಹಾಯ ಆಗುತ್ತದೆ ಎಂದು ಸರ್ಕಾರ ತಿಳಿಸಿತ್ತು.
ಅದೇ ರೀತಿ ಜನರು ಕೂಡ ಸರ್ಕಾರದಿಂದ ತಮಗೆ ಸಹಾಯ ಆಗುತ್ತದೆ ಎಂದು ಭಾವಿಸಿದ್ದರು, ಆದರೆ ಎಲ್ಲವೂ ಈಗ ಉಲ್ಟಾ ಹೊಡೆಯುವ ಹಾಗೆ ತೋರುತ್ತಿದೆ. ಹಲವು ಜನರಿಗೆ ಇನ್ನು ಕೂಡ ಯೋಜನೆಯ ಸೌಲಭ್ಯ ಲಭಿಸುತ್ತಿಲ್ಲ ಎನ್ನುವುದು ಅಸಲಿ ಸತ್ಯ.
ಅದರಲ್ಲೂ ಮಹಿಳೆಯರಿಗಾಗಿ ಜಾರಿಗೆ ಬಂದ ಗೃಹಲಕ್ಷ್ಮಿ ಯೋಜನೆಯಲ್ಲಿ (Gruha Lakshmi Yojana) ಈ ಒಂದು ಸಮಸ್ಯೆ ಎದ್ದು ಕಾಣುತ್ತಿದೆ. ಸುಮಾರು 1.18 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿರುವುದು ಪ್ರತಿ ತಿಂಗಳು ಅವರಿಗೆ ಸರ್ಕಾರದ ಕಡೆಯಿಂದ ₹2000 ರೂಪಾಯಿ ಸಹಾಯ ಸಿಗುತ್ತದೆ ಎನ್ನುವ ಕಾರಣಕ್ಕೆ, ಆದರೆ ಎಲ್ಲಾ ಮಹಿಳೆಯರಿಗೂ ಈ ಸೌಲಭ್ಯ ಸಿಕ್ಕಿಲ್ಲ.
ರೇಷನ್ ಕಾರ್ಡ್‌ಗೆ ಮಕ್ಕಳ ಹೆಸರು ಸೇರಿಸಲು ಅವಕಾಶ! ಬಿಟ್ಟುಹೋದ ಹೆಸರನ್ನು ಸೇರಿಸಿಕೊಳ್ಳಲು ಡೈರೆಕ್ಟ್ ಲಿಂಕ್
ಈಗಾಗಲೇ ಸರ್ಕಾರ 11 ಕಂತುಗಳ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದರು ಸಹ, ಎಲ್ಲಾ ಮಹಿಳೆಯರಿಗೆ 11 ಕಂತುಗಳ ಹಣ ಸಿಕ್ಕಿಲ್ಲ.
ಹೌದು, ಬಹಳಷ್ಟು ಮಹಿಳೆಯರಿಗೆ 11ನೇ ಕಂತಿನ ಹಣ ಬಂದಿಲ್ಲ, ಇನ್ನು ಒಂದಷ್ಟು ಮಹಿಳೆಯರಿಗೆ ಬೇರೆ ಕಂತುಗಳ ಹಣ ಕೂಡ ಅಕೌಂಟ್ ಗೆ (Bank Account) ಡಿಬಿಟಿ ಮೂಲಕ ವರ್ಗಾವಣೆ ಆಗಿಲ್ಲ, ಹಾಗಾಗಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಪ್ರತಿ ತಿಂಗಳು ಹಣ ಬರುತ್ತದೆ ಎಂದು ಭರವಸೆ ನೀಡಿದ ಸರ್ಕಾರ, ಇತ್ತ ಟ್ಯಾಕ್ಸ್ ಜಾಸ್ತಿ ಮಾಡುವುದರ ಜೊತೆಗೆ, ತಮಗೆ ಸೌಲಭ್ಯವನ್ನು ಸಿಗದ ಹಾಗೆ ಮಾಡಿದೆ, ಇದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಡಬೇಕು ಎಂದು ಮಹಿಳೆಯರು ಪಟ್ಟು ಹಿಡಿದಿದ್ದಾರೆ.
ಲೋಕಸಭಾ ಚುನಾವಣೆ ನಡೆದ ನಂತರ ಗ್ಯಾರೆಂಟಿ ಯೋಜನೆಗಳು ನಿಂತು ಹೋಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು, ಆದರೆ ಸರ್ಕಾರ ಅಧಿಕಾರದಲ್ಲಿ ಇರುವಷ್ಟು ಸಮಯ ಕೂಡ ಅಂತ ಯಾವುದೇ ಸಮಸ್ಯೆ ಆಗುವುದಿಲ್ಲ, ಎಲ್ಲರಿಗೂ ಯೋಜನೆಯ ಫಲ ಸಿಗುತ್ತದೆ ಎಂದು ಖುದ್ದು ಸಿಎಂ ಅವರೇ ತಿಳಿಸಿದ್ದರು.
ಆದರೆ ಈಗ ಮಹಿಳೆಯರಿಗೆ ಹಣ ಬರದ ಹಾಗೆ ಆಗಿದೆ. ಕಛೇರಿಗಳಿಗೆ ಹೋಗಿ ಪ್ರಶ್ನೆ ಮಾಡಿದರೆ, ತಾಂತ್ರಿಕ ದೋಷದ ಕಾರಣ, ಮಹಿಳೆಯರ ಡಾಕ್ಯುಮೆಂಟ್ ಗಳೇ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ.
ಗೃಹಲಕ್ಷ್ಮಿ ಹಣ ಬರುತ್ತೋ ಇಲ್ವೋ ಅನ್ನೋರಿಗಾಗಿ ಇಲ್ಲಿದೆ ಬಿಗ್ ಅಪ್ಡೇಟ್! ಸರ್ಕಾರದಿಂದ ಸಿಹಿ ಸುದ್ದಿ
ಇರುವ ತಪ್ಪನ್ನು ಸರಿಮಾಡಿಸಿ, ಎಲ್ಲಾ ಡಾಕ್ಯುಮೆಂಟ್ ಗಳು ಸರಿಹೋದ ಮೇಲೆ ಕೂಡ ಒಂದಷ್ಟು ಮಹಿಳೆಯರಿಗೆ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ. ಅಂಥ ಮಹಿಳೆಯರು ಆಕ್ರೋಶಕ್ಕೆ ಒಳಗಾಗಿದ್ದಾರೆ.
ತಮಗೆ ಸರ್ಕಾರ ಮೋಸ ಮಾಡುತ್ತಿದೆ, ಇವತ್ತು ಹಣ ಬರುತ್ತದೆ, ನಾಳೆ ಬರುತ್ತದೆ ಎನ್ನುತ್ತಿದ್ದಾರೆ, ಆದರೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ, ಸಿಎಂ ಸಿದ್ದರಾಮಯ್ಯ ಅವರು ಇದರ ಬಗ್ಗೆ ಮುಖ್ಯವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.
ಇನ್ನುಮುಂದೆ ಆದರೂ ಸರ್ಕಾರವು ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಂಡು, ಮಹಿಳೆಯರಿಗೆ ಗೃಹಕ್ಷ್ಮಿ ಯೋಜನೆಯ ಹಣ ಬರುವ ಹಾಗೆ ಮಾಡಬೇಕು ಎಂದಿದ್ದಾರೆ ಮಹಿಳೆಯರು.
Women’s are Angry about the Gruha Lakshmi Yojana