ಗೃಹಲಕ್ಷ್ಮಿ ಹಣ ಬರುತ್ತೋ ಇಲ್ವೋ ಅನ್ನೋರಿಗಾಗಿ ಇಲ್ಲಿದೆ ಬಿಗ್ ಅಪ್ಡೇಟ್! ಸರ್ಕಾರದಿಂದ ಸಿಹಿ ಸುದ್ದಿ
Gruha Lakshmi Scheme : ರಾಜ್ಯ ಸರ್ಕಾರವು ನಮ್ಮ ಕರ್ನಾಟಕದ ಜನತೆ ಸಂತೋಷವಾಗಿ, ಯಾವುದೇ ಕೊರತೆ ಇಲ್ಲದೇ ಇರೆಬೇಕು ಎನ್ನುವ ಕಾರಣಕ್ಕೆ ಎಲೆಕ್ಷನ್ ಕ್ಯಾಂಪೇನ್ ಸಮಯದಲ್ಲಿ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ಅದೇ ರೀತಿ ಎಲೆಕ್ಷನ್ ಗೆದ್ದ ಬಳಿಕ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಮತ್ತು ಯುವನಿಧಿ ಯೋಜನೆ ಇದಿಷ್ಟು ಯೋಜನೆಗಳು ಜಾರಿಗೆ ಬಂದಿದೆ.
ಮಹಿಳೆಯರಿಗೆ ಬಹಳ ಉಪಯೋಗ ಆಗುವಂಥ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಒಂದು ಯೋಜನೆಯ ಮೂಲಕ ಮದುವೆಯಾಗಿ, ಮನೆಯ ಯಜಮಾನಿ ಆಗಿರುವ ಮಹಿಳೆಗೆ ಪ್ರತಿ ತಿಂಗಳು ಕೂಡ ಮನೆಯನ್ನು ನಿಭಾಯಿಸುವ ಸಲುವಾಗಿ ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ (Money Transfer) ಮಾಡಲಾಗುತ್ತಿದೆ.
ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಆಯ್ತು ಈಗ ₹800 ರೂಪಾಯಿ ಸಿಗುವ ಹೊಸ ಯೋಜನೆ ಬಂತು!
ಈವರೆಗೂ 11 ಕಂತುಗಳ ಹಣ ಬಿಡುಗಡೆ ಆಗಿದ್ದು, 12ನೇ ಕಂತಿನ ಹಣ ಖಾತೆಗೆ (Bank Account) ಯಾವಾಗ ಬಿಡುಗಡೆ ಆಗುತ್ತದೆ ಎಂದು ಮಹಿಳೆಯರು ಕಾಯುತ್ತಿದ್ದಾರೆ.
ಆದರೆ ಇನ್ನೂ ಕೂಡ 11ನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೆ ಇನ್ನು ಸಿಕ್ಕಿಲ್ಲ. ಹಲವು ಮಹಿಳೆಯರು 11ನೇ ಮತ್ತು 12ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಆದರೆ ಇದೀಗ ಈ ಎರಡು ಕಂತುಗಳ ಬಗ್ಗೆ ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸರ್ಕಾರದ ಕಡೆಯಿಂದಲೇ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಬಗ್ಗೆ, ಉತ್ತಮವಾದ ಮಾಹಿತಿ ಸಿಕ್ಕಿದ್ದು, ಈ ಎರಡು ಕಂತುಗಳ ಹಣ ಬಿಡುಗಡೆ ಯಾವಾಗ ಎಂದು ಡೇಟ್ ಫಿಕ್ಸ್ ಆಗಿದೆ. ಅಷ್ಟಕ್ಕೂ ಹಣ ಬಿಡುಗಡೆ ಆಗೋದು ಯಾವಾಗ?
ಸಧ್ಯಕ್ಕೆ ರಾಜ್ಯದ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಆಗಿರುವ ಪುಷ್ಪ ಅಮರನಾಥ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅವರ ಮಾತಿನ ಅನುಸಾರ ಇವತ್ತಿನಿಂದಲೇ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೆ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಹೌದು, ಎಲ್ಲಾ ಮಹಿಳೆಯರು ಕೂಡ ಈ ಮಾತಿನ ಭರವಸೆಯನ್ನು ನಂಬಬಹುದು. ಪುಷ್ಪಾ ಅವರ ಮಾತಿನ ಅನುಸಾರ ಜಿಲ್ಲಾವಾರು ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಲಿದೆ.
ಗ್ರಾಮ ಒನ್ ಕಚೇರಿ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ! ಒಳ್ಳೆಯ ಆದಾಯ ಗಳಿಸೋಕೇ ಒಳ್ಳೆಯ ಚಾನ್ಸ್
ಹಂತಹಂತವಾಗಿ ಒಂದೊಂದು ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಿಕೊಂಡು ಬರಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಸರ್ಕಾರದಿಂದ ಇಷ್ಟರ ಮಟ್ಟಿಗೆ ಭರವಸೆ ಸಿಕ್ಕಿರುವ ಕಾರಣ, ಯಾವುದೇ ಮಹಿಳೆ ಕೂಡ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ನಿಮಗೆ ಖಂಡಿತವಾಗಿಯೂ ಹಣ ಸಿಕ್ಕೇ ಸಿಗುತ್ತದೆ. ಮಹಿಳೆಯರು ನಿಷ್ಚಿಂತೆಯಿಂದ ಇರಬಹುದು.
Here’s a big update for Gruha Lakshmi Yojana Money Deposit