ರದ್ದಾಗುತ್ತ 10 ವರ್ಷದ ಹಳೆಯ ಆಧಾರ್ ಕಾರ್ಡ್! ರಾತ್ರೋ-ರಾತ್ರಿ ಏನಿದು ಹೊಸ ಆದೇಶ
Aadhaar Card update : ನೀವು 10 ವರ್ಷದ ಹಳೆಯದಾದ ಆಧಾರ್ ಕಾರ್ಡ್ ಹೊಂದಿದ್ರೆ ತಕ್ಷಣವೇ ಈ ಕೆಲಸ ಮಾಡಿ ಇಲ್ಲವಾದರೆ ಇನ್ನು ಮುಂದೆ ಆಧಾರ್ ಕಾರ್ಡ್ ಬಳಕೆ ಸಾಧ್ಯವಾಗುವುದಿಲ್ಲ. ಯು ಐ ಡಿ ಎ ಐ ತಿಳಿಸಿರುವ ಹೊಸ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ಆಧಾರ್ ಕಾರ್ಡ್ ಎನ್ನುವುದು ಪ್ರಮುಖ ಗುರುತಿನ ಚೀಟಿ ಆಗಿದ್ದು ಇದು ಭಾರತೀಯ ಪ್ರತಿಯೊಬ್ಬ ಪ್ರಜೆಯೂ ಹೊಂದಿರಲೇಬೇಕು, ನಾವು ಯಾವುದೇ ರೀತಿಯ ಸರ್ಕಾರಿ ಅಥವಾ ಸರ್ಕಾರೇತರ ಕೆಲಸ ಮಾಡಿಕೊಳ್ಳಲು ಆಧಾರ್ ಕಾರ್ಡನ್ನು ಮುಖ್ಯ ಆಧಾರವಾಗಿ ನೀಡಲಾಗುತ್ತದೆ
ಶಾಲಾ-ಕಾಲೇಜುಗಳಿಗೆ ಮಕ್ಕಳ ಹೆಸರು ಸೇರಿಸುವುದು, ಡ್ರೈವಿಂಗ್ ಲೈಸೆನ್ಸ್ (Driving Licence), ಆಸ್ತಿ ನೋಂದಣಿ (Property Registration) ಹೀಗೆ ಮೊದಲಾದ ಎಲ್ಲಾ ಪ್ರಮುಖ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕೇ ಬೇಕು. ಈಗ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಹೊಸ ಅಪ್ಡೇಟ್ ಒಂದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಬಿಡುಗಡೆ ಮಾಡಿದೆ.
2 ದಿನ ಕೊಂಚ ರಿಲೀಫ್ ನೀಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ ಆಗೋಯ್ತು! ಇಲ್ಲಿದೆ ಫುಲ್ ಡೀಟೇಲ್ಸ್
ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ!
ಹತ್ತು ವರ್ಷ ಹಳೆಯದಾಗಿರುವ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳುವುದು ಅಥವಾ ಆಧಾರ್ ನವೀಕರಣ ಕಡ್ಡಾಯವೇ ಎನ್ನುವ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ, ಇದರ ಬಗ್ಗೆ ಆಧಾರ್ ಕಾರ್ಡ್ ಹೊಂದಿದ್ದರೆ ಆ ಆಧಾರ್ ನವೀಕರಣ ಮಾಡಿಸಿಕೊಳ್ಳುವಂತೆ ಜನರಿಗೆ ತಿಳಿಸಲಾಗಿದೆ.
ಆಧಾರ್ ನವೀಕರಣದ ಬಗ್ಗೆ UIDAI ಅಧಿಕೃತ ಮಾಹಿತಿ!
ಆಧಾರ್ ನವೀಕರಣಕ್ಕೆ ಸಂಬಂಧಪಟ್ಟ ಹಾಗೆ ನಿಜವಾಗಿಯೂ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳದೆ ಇದ್ದರೆ ಆಧಾರ್ ಕಾರ್ಡ್ ರದ್ದಾಗುತ್ತ ಎನ್ನುವ ಡೌಟ್ ಎಲ್ಲರಲ್ಲಿಯೂ ಇತ್ತು, ಇದಕ್ಕೆ ಭಾರತೀಯ ಗುರುತಿನ ವಿಶಿಷ್ಟ ಪ್ರಾಧಿಕಾರ ನೀಡಿದೆ. ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಮೂರು ವರ್ಷಕ್ಕಿಂತ ಹಳೆಯದಾಗಿರುವ ಅಡ್ರೆಸ್ ಇದ್ದರೆ ನಿಮ್ಮ ಅಡ್ರೆಸ್ (address) ಈಗ ಬದಲಾಗಿದ್ದರೆ ನವೀಕರಣ ಮಾಡಿಕೊಳ್ಳುವುದು ಕಡ್ಡಾಯವೇನಲ್ಲ.
ಯಾಕೆಂದರೆ ನಿಮ್ಮ ಬಳಿ ಇರುವ ಇತರ ಬ್ಯಾಂಕ್ ಪಾಸ್ ಬುಕ್ (bank passbook) ಕರೆಂಟ್ ಬಿಲ್ (electricity bill) ಮೊದಲಾದ ಹಾಲಿ ಅಡ್ರೆಸ್ ಪ್ರೂಫ್ ಇರುವ ಗುರುತಿನ ದಾಖಲೆಗಳನ್ನು ಬೇರೆ ಯಾವುದೇ ಕೆಲಸಕ್ಕೆ ಬಳಸಿಕೊಳ್ಳಬಹುದು. ಇದಕ್ಕಾಗಿ ಆಧಾರ್ ನಲ್ಲಿ ವಿಳಾಸ ನವೀಕರಣ ಕಡ್ಡಾಯವೇನಲ್ಲ ಎಂದು ಯುಐಡಿಎಐ ಸ್ಪಷ್ಟನೆ ನೀಡಿದೆ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರು ತಕ್ಷಣ ಬ್ಯಾಂಕ್ ಗೆ ಹೋಗಿ ಸಹಿ ಮಾಡಿ! ಹೊಸ ನಿಯಮ
ಅದೇ ರೀತಿಯಾಗಿ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ದರೆ ಅದರಲ್ಲಿ ಫೋಟೋ ನವೀಕರಣಕ್ಕೂ (photo update in Aadhaar card) ಕೂಡ ಅವಕಾಶ ಮಾಡಿಕೊಡಲಾಗಿದೆ
ಈ ಬದಲಾವಣೆಯು ಕಡ್ಡಾಯವಲ್ಲ, ಆದರೆ ನೀವು ಇತರ ಸರ್ಕಾರದ ಪ್ರಯೋಜನ ಪಡೆದುಕೊಳ್ಳಲು ತುಂಬಾ ಹಳೆಯದಾಗಿರುವ ಫೋಟೋ ಗಿಂತಲೂ ಅದನ್ನ ಅಪ್ಡೇಟ್ ಮಾಡಿಕೊಂಡರೆ ಹೆಚ್ಚು ಉತ್ತಮ ಎಂದು ಸೂಚಿಸಲಾಗಿದೆ.
ಆಧಾರ್ ಕಾರ್ಡ್ ನಲ್ಲಿ ಫೋಟೋ ಅಪ್ಡೇಟ್ ಗೂ ಕೂಡ ಡಿಸೆಂಬರ್ 31 ಕೊನೆಯ ದಿನಾಂಕ ಎನ್ನುವ ಬಗ್ಗೆ ಯುಐಡಿಎಐ ಯಾವುದೇ ಮಾಹಿತಿ ನೀಡಿಲ್ಲ ಅಂದರೆ ಆಧಾರ್ ನವೀಕರಣಕ್ಕೆ ಗಡುವು ನೀಡಲಾಗಿಲ್ಲ. ನಿಮಗೆ ಅಗತ್ಯ ಇದೆ ಎನಿಸಿದರೆ ಆಧಾರ್ ನವೀಕರಣ ಮಾಡಿಕೊಳ್ಳಬಹುದು. ಇದು ಕಡ್ಡಾಯವಲ್ಲ ಎಂದು ಯುಐಡಿಎಐ ಸ್ಪಷ್ಟನೆ ನೀಡಿದೆ.
10 year old Aadhaar card will cancelled, What is the new order