ಹೊಸ ಬಜಾಜ್ ಪಲ್ಸರ್ 220F ಬಿಡುಗಡೆ.. ಹೊಸ ಫೀಚರ್‌ಗಳ ಅಬ್ಬರ! ಬುಕ್ಕಿಂಗ್ ಆರಂಭ
2026ರ ಹೊಸ ಬಜಾಜ್ ಪಲ್ಸರ್ 220F ಎಲ್‌ಇಡಿ ಹೆಡ್‌ಲೈಟ್, ಬ್ಲೂಟೂತ್ ಕನ್ಸೋಲ್, ಹೊಸ ಗ್ರಾಫಿಕ್ಸ್ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ. ಬೆಲೆಯಲ್ಲೂ ಏರಿಕೆಯಾಗಿದ್ದು ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.

ಬಜಾಜ್ (Bajaj) ತನ್ನ ಜನಪ್ರಿಯ ಪಲ್ಸರ್ 220F (Pulsar 220F) ಬೈಕ್‌ನ 2026 ಆವೃತ್ತಿಯನ್ನು ಹೊಸ ಬದಲಾವಣೆಗಳೊಂದಿಗೆ ಪರಿಚಯಿಸಿದೆ. ವಿನ್ಯಾಸದಲ್ಲಿ ದೊಡ್ಡ ಬದಲಾವಣೆ ಮಾಡದೇ, ಆಧುನಿಕ ಫೀಚರ್‌ಗಳನ್ನು ಸೇರಿಸಿರುವುದರಿಂದ ಈ ಬೈಕ್ ಮತ್ತಷ್ಟು ಆಕರ್ಷಕವಾಗಿದೆ. ದೇಶಾದ್ಯಂತ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್ ಕೂಡ ಆರಂಭವಾಗಿದೆ.
ಈ ಹೊಸ ಆವೃತ್ತಿಯ ಪ್ರಮುಖ ಆಕರ್ಷಣೆ ಎಂದರೆ ಫುಲ್-ಎಲ್‌ಇಡಿ ಹೆಡ್‌ಲೈಟ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು. ಹಿಂದಿನ ಹ್ಯಾಲೋಜನ್ ಲೈಟಿಂಗ್‌ಗೆ ಬದಲಾಗಿ ಈಗ LED ವ್ಯವಸ್ಥೆ ನೀಡಲಾಗಿದ್ದು, ರಾತ್ರಿ ಸಮಯದ ದೃಶ್ಯ ಸ್ಪಷ್ಟತೆ ಹೆಚ್ಚುವುದರ ಜೊತೆಗೆ ಕಡಿಮೆ ವಿದ್ಯುತ್ ಬಳಕೆ ಹಾಗೂ ಹೆಚ್ಚಿನ ಬಾಳಿಕೆ ಸಿಗಲಿದೆ.
ಇದರ ಜೊತೆಗೆ ಬೈಕ್‌ಗೆ ಹೊಸ ಗ್ರಾಫಿಕ್ಸ್ ಹಾಗೂ ನವೀಕರಿಸಿದ ಬಣ್ಣಗಳ ಆಯ್ಕೆಯನ್ನೂ ನೀಡಲಾಗಿದೆ. ಆದರೂ ಪಲ್ಸರ್ 220Fನ ಗುರುತಾದ ಸೆಮಿ-ಫೇರಿಂಗ್ ವಿನ್ಯಾಸ, ಪ್ರೊಜೆಕ್ಟರ್ ಶೈಲಿಯ ಮುಂಭಾಗ ಹಾಗೂ ಸ್ಪೋರ್ಟಿ ಲುಕ್ ಅನ್ನು ಕಂಪನಿ ಹಾಗೆಯೇ ಉಳಿಸಿಕೊಂಡಿದೆ.
ಎಂಜಿನ್ ವಿಭಾಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬೈಕ್‌ನಲ್ಲಿ ಈಗಲೂ 220 ಸಿಸಿ ಸಿಂಗಲ್ ಸಿಲಿಂಡರ್, ಫ್ಯುಯೆಲ್ ಇಂಜೆಕ್ಟೆಡ್, ಆಯಿಲ್ ಕೂಲ್ಡ್ DTS-i ಎಂಜಿನ್ ನೀಡಲಾಗಿದೆ. ಇದು ಗರಿಷ್ಠ 20.6 hp ಶಕ್ತಿ ಹಾಗೂ 18.55 Nm ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.
ಸಸ್ಪೆನ್ಷನ್ ವಿಭಾಗದಲ್ಲೂ ಹಳೆಯ ಸೆಟಪ್ ಮುಂದುವರಿದಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಹಾಗೂ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ABS ವ್ಯವಸ್ಥೆಯೂ ಲಭ್ಯವಿದೆ.
ಫೀಚರ್‌ಗಳ ಪಟ್ಟಿಯಲ್ಲಿ ಬ್ಲೂಟೂತ್ ಸೌಲಭ್ಯ ಹೊಂದಿರುವ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಪ್ರಮುಖವಾಗಿದೆ. ಇದು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಕಾಲ್ ಹಾಗೂ ಮೆಸೇಜ್ ಅಲರ್ಟ್‌ಗಳ ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನೂ ಒದಗಿಸುತ್ತದೆ.
ಹೊಸ ಅಪ್‌ಡೇಟ್‌ನೊಂದಿಗೆ ಬೈಕ್‌ನ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಹಿಂದೆ ₹1.28 ಲಕ್ಷ (ಎಕ್ಸ್ ಶೋರೂಂ) ಇದ್ದ ಬೆಲೆ ಈಗ ₹1.36 ಲಕ್ಷ (ಎಕ್ಸ್ ಶೋರೂಂ) ಆಗಿದೆ. ಹೊಸ ವಿನ್ಯಾಸ ಮತ್ತು ಆಧುನಿಕ ಫೀಚರ್‌ಗಳಿಂದಾಗಿ ಈ ಬೈಕ್ ಯುವಕರ ಗಮನ ಸೆಳೆಯುವ ಸಾಧ್ಯತೆ ಇದೆ.



