ಗೋಲ್ಡ್ ಲೋನ್ ಪಡೆಯುವ ಮುನ್ನ ಈ 4 ವಿಷಯ ತಿಳಿದುಕೊಳ್ಳಿ! ಇಲ್ಲದಿದ್ದರೆ ನಷ್ಟ ಖಚಿತ!

Gold Loan: ತುರ್ತು ಹಣಕಾಸು ಅಗತ್ಯಕ್ಕೆ ಹಲವರು ಗೋಲ್ಡ್ ಲೋನ್ ಆಯ್ಕೆ ಮಾಡುತ್ತಾರೆ. ಆದರೆ ಬಂಗಾರ ಅಡ ಇಟ್ಟು ಸಾಲ ಪಡೆಯುವ ಮುನ್ನ ಬಡ್ಡಿದರ, LTV ರೇಷಿಯೋ, ಮರುಪಾವತಿ ವಿಧಾನ ಮತ್ತು ಹೆಚ್ಚುವರಿ ಶುಲ್ಕಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

Gold Loan: ಅಕಸ್ಮಿಕವಾಗಿ ಹಣದ ಅವಶ್ಯಕತೆ ಎದುರಾದಾಗ ಹಲವರಿಗೆ ಮೊದಲು ನೆನಪಿಗೆ ತರುವ ಆಯ್ಕೆ ಗೋಲ್ಡ್ ಲೋನ್ (Gold Loan). ಮನೆಯಲ್ಲಿರುವ ಬಂಗಾರವನ್ನು ಅಡವಿಟ್ಟು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ತ್ವರಿತವಾಗಿ ಹಣ ಪಡೆಯಲು ಸಾಧ್ಯವಾಗುತ್ತದೆ.

ವೈಯಕ್ತಿಕ ಸಾಲಕ್ಕಿಂತ (Personal Loan) ಈ ವಿಧಾನ ಸರಳವಾಗಿದ್ದು, ಕಡಿಮೆ ದಾಖಲೆಗಳೊಂದಿಗೆ ಸಾಲ ಮಂಜೂರು ಆಗುವುದು ಇದರ ಪ್ರಮುಖ ಕಾರಣ.

ಆದರೆ ಬಂಗಾರ ಅಡವಿಟ್ಟು ಸಾಲ ಪಡೆಯುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳದಿದ್ದರೆ ಮುಂದೆ ಹಣಕಾಸಿನ ಒತ್ತಡ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಗೋಲ್ಡ್ ಲೋನ್ ಪಡೆಯುವ ಮುನ್ನ ಗಮನಿಸಬೇಕಾದ ಮುಖ್ಯ ವಿಷಯಗಳು ಇಲ್ಲಿವೆ.

1. ಬಡ್ಡಿದರದಲ್ಲಿ ಬ್ಯಾಂಕ್‌ಗಳಿಗೆ ವ್ಯತ್ಯಾಸ

ಗೋಲ್ಡ್ ಲೋನ್ ಮೇಲೆ ವಿಧಿಸುವ ಬಡ್ಡಿದರ (Interest Rate) ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಪ್ರಕಾರ ಬದಲಾಗುತ್ತದೆ. ಕೆಲ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೂ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಇನ್ನೊಂದೆಡೆ ಕೆಲವು ಖಾಸಗಿ ಫೈನಾನ್ಸ್ ಕಂಪನಿಗಳು ತಕ್ಷಣ ಸಾಲ ನೀಡುತ್ತವೆ. ಆದರೆ ಅವುಗಳಲ್ಲಿ ಬಡ್ಡಿದರ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ವಿವಿಧ ಬ್ಯಾಂಕ್ ಮತ್ತು ಸಂಸ್ಥೆಗಳ ಬಡ್ಡಿದರಗಳನ್ನು ಹೋಲಿಸಿ ನೋಡಿದ ನಂತರ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

2. LTV ರೇಷಿಯೋ ಎಂದರೇನು?

Loan To Value Ratio (LTV) ಎಂದರೆ ನೀವು ಅಡ ಇಡುವ ಬಂಗಾರದ ಮೌಲ್ಯದ ಎಷ್ಟು ಶೇಕಡಾ ಮೊತ್ತವನ್ನು ಸಾಲವಾಗಿ ನೀಡುತ್ತಾರೆ ಎಂಬುದು.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳ ಪ್ರಕಾರ ಸಾಮಾನ್ಯವಾಗಿ ಬಂಗಾರದ ಮಾರುಕಟ್ಟೆ ಮೌಲ್ಯದ ಗರಿಷ್ಠ 75% ವರೆಗೆ ಮಾತ್ರ ಗೋಲ್ಡ್ ಲೋನ್ ನೀಡಲಾಗುತ್ತದೆ.

ಉದಾಹರಣೆಗೆ, ನಿಮ್ಮ ಬಂಗಾರದ ಮೌಲ್ಯ ₹1 ಲಕ್ಷ ಇದ್ದರೆ ಬ್ಯಾಂಕ್ ಗರಿಷ್ಠ ₹75,000 ವರೆಗೆ ಸಾಲ ನೀಡಬಹುದು. ಬಂಗಾರದ ಮಾರುಕಟ್ಟೆ ಬೆಲೆ ಕುಸಿದರೆ ಹೆಚ್ಚುವರಿ ಭದ್ರತೆ ಕೇಳುವ ಸಾಧ್ಯತೆಯೂ ಇರುತ್ತದೆ.

3. ಮರುಪಾವತಿ ವಿಧಾನಗಳನ್ನು ತಿಳಿದುಕೊಳ್ಳಿ

ಗೋಲ್ಡ್ ಲೋನ್ ಮರುಪಾವತಿಗೆ ವಿವಿಧ ಆಯ್ಕೆಗಳು ಲಭ್ಯವಿವೆ. ಕೆಲವು ಬ್ಯಾಂಕ್‌ಗಳು EMI ಮೂಲಕ ಪ್ರತಿ ತಿಂಗಳು ಮೂಲಧನ ಮತ್ತು ಬಡ್ಡಿಯನ್ನು ಸೇರಿಸಿ ಪಾವತಿಸುವ ಅವಕಾಶ ನೀಡುತ್ತವೆ.

ಇನ್ನೂ ಕೆಲವು ಯೋಜನೆಗಳಲ್ಲಿ ತಿಂಗಳಿಗೆ ಕೇವಲ ಬಡ್ಡಿ ಪಾವತಿಸಿ, ಸಾಲ ಅವಧಿ ಕೊನೆಯಲ್ಲಿ ಮೂಲಧನವನ್ನು ಒಟ್ಟಾಗಿ ಪಾವತಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಯಾವ ವಿಧಾನ ಸೂಕ್ತವೋ ಅದನ್ನು ಆಯ್ಕೆ ಮಾಡುವುದು ಮುಖ್ಯ.

4. ಹೆಚ್ಚುವರಿ ಶುಲ್ಕಗಳು ಮತ್ತು ಭದ್ರತೆ

ಬಡ್ಡಿದರ ಮಾತ್ರವಲ್ಲದೆ ಪ್ರಾಸೆಸಿಂಗ್ ಫೀ, ಮೌಲ್ಯಮಾಪನ ಶುಲ್ಕ (valuation fee) ಸೇರಿದಂತೆ ಇತರ ವೆಚ್ಚಗಳನ್ನೂ ಗಮನಿಸಬೇಕು. ಕೆಲವೊಮ್ಮೆ ಈ ಶುಲ್ಕಗಳು ಒಟ್ಟು ಸಾಲದ ವೆಚ್ಚವನ್ನು ಹೆಚ್ಚಿಸಬಹುದು.

ಹಾಗೆಯೇ ನೀವು ಅಡ ಇಡುವ ಬಂಗಾರ ಸುರಕ್ಷಿತವಾಗಿ ಸಂರಕ್ಷಿಸಲ್ಪಡುತ್ತಿದೆಯೇ ಎಂಬುದೂ ಮುಖ್ಯ. ವಿಶ್ವಾಸಾರ್ಹ ಬ್ಯಾಂಕ್ ಅಥವಾ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳನ್ನು ಆಯ್ಕೆ ಮಾಡುವುದು ಉತ್ತಮ.

ಗೋಲ್ಡ್ ಲೋನ್‌ನ ಪ್ರಮುಖ ಲಾಭ

ಗೋಲ್ಡ್ ಲೋನ್‌ನ ಪ್ರಮುಖ ಲಾಭವೆಂದರೆ, ಸಾಮಾನ್ಯವಾಗಿ ಸಿಬಿಲ್ ಸ್ಕೋರ್ (CIBIL Score) ಮೇಲೆ ಹೆಚ್ಚಿನ ಪ್ರಭಾವ ಇರದು. ಬಂಗಾರದ ತೂಕ ಮತ್ತು ಶುದ್ಧತೆಯ ಆಧಾರದ ಮೇಲೆ ಸಾಲ ನೀಡಲಾಗುತ್ತದೆ.

ಆದರೆ ಸಾಲದ ಅವಧಿಯೊಳಗೆ ಹಣ ಮರುಪಾವತಿಸದಿದ್ದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನಿಮ್ಮ ಬಂಗಾರವನ್ನು ಹರಾಜು ಮಾಡಲು ಸಾಧ್ಯವಿದೆ. ಆದ್ದರಿಂದ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.

Related Stories