ತಿಂಗಳಿಗೆ 50 ಸಾವಿರದಿಂದ 1 ಲಕ್ಷ ಆದಾಯ; ಈ ತಳಿ ಮೇಕೆ ಸಾಕಾಣಿಕೆ ಮಾಡೋದ್ರಿಂದ ಕೈತುಂಬಾ ದುಡ್ಡು
Goat farming Business : ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮದೇ ಆದ ಸ್ವಂತ ಉದ್ಯಮ (Own Business) ಮಾಡಿ ಹಣ ಸಂಪಾದಿಸಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಯೋಚಿಸುತ್ತಾರೆ.
ಆದರೆ ಕೆಲವರಿಗೆ ಯಾವ ಉದ್ಯಮ ಮಾಡಬೇಕು ಎನ್ನುವ ಗೊಂದಲ ಸದಾ ಇದ್ದೆ ಇರುತ್ತದೆ. ಇನ್ನು ಇದೀಗ ಅನೇಕರು ಪ್ರಾಣಿ ಸಾಕಾಣಿಕೆ ಉದ್ಯಮ ಮಾಡುವ ಮೂಲಕ ಇದೀಗ ಲಕ್ಷಗಳಲ್ಲಿ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮದೇ ಸ್ವಂತ ಉದ್ಯಮ ಶುರು ಮಾಡಬೇಕು ಎಂದು ಕುರಿ, ಕೋಳಿ ಇಂತಹ ಪ್ರಾಣಿ ಸಾಕಾಣಿಕೆ ಉದ್ಯಮ ಮಾಡಲು ಮುಂದಾಗಿದ್ದಾರೆ.
ಮಹಿಳೆಯರಿಗೆ ಬಂಪರ್ ಸುದ್ದಿ, ಕೇಂದ್ರದಿಂದ ಹೊಸ ಯೋಜನೆ! ನಿಮ್ಮದಾಗಲಿದೆ 60 ಸಾವಿರ ರೂಪಾಯಿ
ಇನ್ನು ಇವರ ಪೈಕಿ ಅನೇಕರು ಪ್ರಾಣಿ ಸಾಕಾಣಿಕೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ ಈ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ಈ ಒಂದು ಉದ್ಯಮ ಮಾಡುವ ಮೂಲಕ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎನ್ನುವ ಕಾರಣದಿಂದ ಈ ಪ್ರಾಣಿ ಸಾಕಾಣಿಕೆ ಉದ್ಯಮದ ಮೇಲೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಅಲ್ಲದೆ ಕುರಿ, ಕೋಳಿ, ಮೇಕೆ ಅಂತಹ ಸಣ್ಣ ಪ್ರಾಣಿಗಳ ಸಾಕಾಣಿಕೆಯ ಖರ್ಚು ಕಡಿಮೆ ಇದ್ದು, ಇದರಿಂದ ದೊಡ್ಡ ಮಟ್ಟದಲ್ಲಿ ಲಾಭ ಪಡೆಯಬಹುದಾಗಿದೆ.
ಇನ್ನು ಸದ್ಯ ಭಾರತದಲ್ಲಿ ಮೇಕೆ ಸಾಕಾಣೆ ಹೆಚ್ಚಾಗುತ್ತಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾಂಸದ ಬೆಲೆ ಹೆಚ್ಚಿದ್ದು, ಇದೀಗ ಇಂತಹ ಒಂದು ವ್ಯಾಪಾರ ಮಾಡುವ ಮೂಲಕ ನೀವು ಸಹ ಸಾಕಷ್ಟು ಹಣ ಸಂಪಾದಿಸಿಕೊಳ್ಳಬಹುದು. ನೀವು ಉತ್ತಮ ಗುಣಮಟ್ಟದ ಮೇಕೆ ಸಾಕಾಣಿಕೆ ಮಾಡಿದರೆ ನೀವು ತಿಂಗಳಿಗೆ ಸುಮಾರು 50 ಸಾವಿರವರೆಗೂ ಆದಾಯ ಪಡೆದುಕೊಳ್ಳಬಹುದು.
ಮನೆಯಲ್ಲಿಯೇ ಇದ್ದುಕೊಂಡು ಈ ಬಿಸಿನೆಸ್ ಶುರು ಮಾಡಿ; ತಿಂಗಳಿಗೆ 1 ರಿಂದ 2 ಲಕ್ಷ ಆದಾಯ ಗಳಿಸಿ!
ನೀವು ಮೇಕೆ ಸಾಕಾಣಿಕೆ ಉದ್ಯಮ ಶುರು ಮಾಡುವ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕು. ನೀವು ಯಾವ ತಳಿಯ ಮೇಕೆಯನ್ನು ಖರೀದಿ ಮಾಡಲಿದ್ದೀರಿ ಎನ್ನುವುದರ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು.
ಸಿರೋಹಿ, ತೋತಾಪುರಿ, ಸಾಂಭಾರಿ ಇಂತಹ ತಳಿಯ ಮೇಕೆಗಳನ್ನು ನೀವು ಖರೀದಿ ಮಾಡಿದರೆ ಉತ್ತಮ. ಏಕೆಂದರೆ ಈ ಮೇಕೆಗಳು ಹೆಚ್ಚಿನ ಹಾಲು ನೀಡುವುದರ ಜೊತೆಗೆ ಇವುಗಳ ತೂಕ ಕೂಡ ಹೆಚ್ಚಿದ್ದು, ನೀವು ಈ ಮೇಕೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಹುದು.
ದಿನಕ್ಕೆ 30 ಲೀಟರ್ ಹಾಲು ಕೊಡುವ ಈ ಎಮ್ಮೆ ಸಾಕಣಿಕೆಯಿಂದ ತಿಂಗಳಿಗೆ ಲಕ್ಷಗಟ್ಟಲೆ ಆದಾಯ!
ನೀವು ಚಿಕ್ಕ ಮೇಕೆಯನ್ನು ಖರೀದಿ ಮಾಡಿ ಅದನ್ನು ಸರಿಯಾದ ರೀತಿಯಲ್ಲಿ ಸಾಕುವುದರ ಮೂಲಕ ನೀವು ಅದು ದೊಡ್ಡದಾದ ನಂತರ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ನೀವು ಈ ಒಂದು ಮೇಕೆ ಸಾಕಾಣಿಕೆ ವ್ಯಾಪಾರ ಮಾಡುವ ಮೂಲಕ ನೀವು ಪ್ರತಿ ತಿಂಗಳು ಸುಮಾರು 50 ಸಾವಿರದಿಂದ 1 ಲಕ್ಷದ ವರೆಗೂ ಆದಾಯ ಗಳಿಸಬಹುದು.
50 thousand to 1 lakh income per month by This Goat farming Business
Our Whatsapp Channel is Live Now 👇