ಮೊದಲ ಮಗುವಿಗೆ 5 ಸಾವಿರ, 2ನೇ ಮಗುವಿಗೆ 6 ಸಾವಿರ! ಕೇಂದ್ರ ಸರ್ಕಾರದ ಯೋಜನೆ

ಮೊದಲ ಬಾರಿಗೆ ತಾಯಿಯಾಗುವ ಗರ್ಭಿಣಿ ಸ್ತ್ರೀಗೆ ರೂ.5,000ಗಳನ್ನು ನೀಡಲಾಗುತ್ತದೆ. ನಂತರ ಎರಡನೇ ಮಗುವಾದರೆ ಹೆಣ್ಣು ಮಗುವಾಗಿದ್ದರೆ ಆರು ಸಾವಿರ ರೂಪಾಯಿಗಳನ್ನು ನೀಡಲಾಗುವುದು.

  • ಮಹಿಳೆಯರಿಗೆ ಸಿಗುತ್ತೆ 11,000 ರೂಪಾಯಿ, ಕೇಂದ್ರ ಸರ್ಕಾರದ ಯೋಜನೆ
  • ಗರ್ಭಿಣಿ ಸ್ತ್ರೀಯರಿಗಾಗಿ ಕೇಂದ್ರ ಸರ್ಕಾರದ ಮಾತೃ ವಂದನಾ ಯೋಜನೆ
  • ಮೊದಲ ಎರಡು ಮಗುವಿನ ಜನನದ ನಂತರ ಸಿಗುತ್ತೆ ಪ್ರೋತ್ಸಾಹ ಧನ

Govt Scheme : ಕೇಂದ್ರ ಸರ್ಕಾರ ಮಹಿಳೆಯರ ಕಲ್ಯಾಣಕ್ಕಾಗಿ ಬೇರೆಬೇರೆ ಯೋಜನೆಗಳನ್ನು ರೂಪಿಸಿದೆ. ಅವುಗಳಲ್ಲಿ ಮಾತೃ ವಂದನಾ ಯೋಜನೆ ಕೂಡ ಒಂದಾಗಿದ್ದು, ಗರ್ಭಿಣಿ ಸ್ತ್ರೀಯರು ಇದರಿಂದ ಸಹಾಯಧನವನ್ನು ಪಡೆದುಕೊಳ್ಳಬಹುದು.

ಮಹಿಳೆಯರಿಗಾಗಿಯೇ ಇರುವ ಈ ಹೊಸ ಯೋಜನೆ, ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ.

ಮಾತೃ ವಂದನಾ ಯೋಜನೆ

ಕೇಂದ್ರ ಸರ್ಕಾರದ ಯೋಜನೆ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಬಾಣಂತಿಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರಸವದ ನಂತರ ಬಾಣಂತಿಯರಲ್ಲಿ ಕಾಡುವ ಅಪೌಷ್ಟಿಕತೆ ರಕ್ತ ಹೀನತೆ, ಮೊದಲಾದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಪ್ರೋತ್ಸಾಹ ಧನವನ್ನು ನೀಡಿ ಸಹಕರಿಸುತ್ತಿದೆ.

ಈ ಯೋಜನೆಯಡಿಯಲ್ಲಿ ಮೊದಲ ಎರಡು ಪ್ರಸವಕ್ಕೆ ಸರ್ಕಾರದ ಪ್ರಯೋಜನ ಸಿಗುತ್ತದೆ. ಇನ್ನು ಎರಡನೇ ಮಗು ಹೆಣ್ಣು ಮಗು ಆಗಿದ್ದರೆ ಪ್ರಯೋಜನ ಪಡೆಯಬಹುದು.

ಇನ್ಮುಂದೆ ನಿಮ್ಮ ವಾಹನಕ್ಕೆ ಈ ದಾಖಲೆ ಇಲ್ಲದಿದ್ದರೆ ಪೆಟ್ರೋಲ್ ಕೂಡ ಹಾಕಲ್ಲ!

ಮಾತೃ ವಂದನಾ ಯೋಜನೆಯಿಂದ ಸಿಗುವ ಹಣವೆಷ್ಟು?

ಮೊದಲ ಬಾರಿಗೆ ತಾಯಿಯಾಗುವ ಗರ್ಭಿಣಿ ಸ್ತ್ರೀಗೆ ರೂ.5,000ಗಳನ್ನು ನೀಡಲಾಗುತ್ತದೆ. ನಂತರ ಎರಡನೇ ಮಗುವಾದರೆ ಹೆಣ್ಣು ಮಗುವಾಗಿದ್ದರೆ ಆರು ಸಾವಿರ ರೂಪಾಯಿಗಳನ್ನು ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು.

ಸ್ಟೇಟ್ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿದ್ರೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕಾಗುತ್ತೆ?

ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಜಿಯನ್ನು ಭರ್ತಿ ಮಾಡಿ, ತಾಯಿ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಯುಷ್ಮಾನ್ ಕಾರ್ಡ್ ಗಳಂತಹ ದಾಖಲೆಗಳನ್ನು ಸಲ್ಲಿಸಬೇಕು.

5,000 for the first child, 6,000 for the second, Central government scheme

English Summary▼

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories