ಇನ್ಮುಂದೆ ನಿಮ್ಮ ವಾಹನಕ್ಕೆ ಈ ದಾಖಲೆ ಇಲ್ಲದಿದ್ದರೆ ಪೆಟ್ರೋಲ್ ಕೂಡ ಹಾಕಲ್ಲ!
ಸರ್ಕಾರದ ನಿಯಮದ ಪ್ರಕಾರ ಇನ್ನು ಮುಂದೆ ರಸ್ತೆಯ ಮೇಲೆ ಓಡಾಡುವ ಯಾವುದೇ ವಾಹನಕ್ಕೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಇರಲೇಬೇಕು, ವಿಮೆ ಇಲ್ಲದೆ ವಾಹನ ಚಲಾವಣೆ ಮಾಡುವುದು ಮೋಟಾರ್ ವಾಹನ ಕಾಯ್ದೆಯ ಅಡಿ ಅಪರಾಧ ಎನಿಸಿಕೊಳ್ಳುತ್ತದೆ.
- ವಾಹನಕ್ಕೆ ಬೇಕು ಥರ್ಡ್ ಪಾರ್ಟಿ ಇನ್ಸೂರೆನ್ಸ್
- ಇನ್ಸೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್ ಕೂಡ ಹಾಕಲ್ಲ
- ಥರ್ಡ್ ಪಾರ್ಟಿ ಇನ್ಸೂರೆನ್ಸ್ ಇಲ್ಲದೆ ಇದ್ರೆ ಪಾವತಿಸಬೇಕು ದಂಡ
Vehicle Insurance : 1998ರ ಮೋಟಾರ್ ವಾಹನ ಕಾಯ್ದೆ ಪ್ರಕಾರ ಎಲ್ಲಾ ವಾಹನಗಳಿಗೆ ಮೂರನೇ ವ್ಯಕ್ತಿ ವಿಮೆ ಅಂದರೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ (Third Party Insurance) ಇರಲೇಬೇಕು. ಇದರಿಂದ ಅಪಘಾತದಲ್ಲಿ ಮೂರನೇ ವ್ಯಕ್ತಿಗೆ ಉಂಟಾಗುವ ಯಾವುದೇ ನಷ್ಟವನ್ನು ವಿಮೆ ಮೂಲಕ ತುಂಬಿಕೊಡಲಾಗುತ್ತದೆ.
ಆದರೆ, ಲಕ್ಷಾಂತರ ವಾಹನಗಳು ಇನ್ಸೂರೆನ್ಸ್ ಮಾಡಿಸಿಕೊಳ್ಳದೆ ಓಡಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಸರ್ಕಾರ!
ಸ್ಟೇಟ್ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿದ್ರೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕಾಗುತ್ತೆ?
ಥರ್ಡ್ ಪಾರ್ಟಿ ಇನ್ಸೂರೆನ್ಸ್ ಇರಲೇಬೇಕು!
ಹೌದು, ಸರ್ಕಾರದ ನಿಯಮದ ಪ್ರಕಾರ ಇನ್ನು ಮುಂದೆ ರಸ್ತೆಯ ಮೇಲೆ ಓಡಾಡುವ ಯಾವುದೇ ವಾಹನಕ್ಕೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಇರಲೇಬೇಕು. ಒಂದು ವೇಳೆ ಈ ವಿಮೆ ಇಲ್ಲದೆ ಇದ್ರೆ ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ (Petrol or Diesel) ಹಾಕಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಫಾಸ್ಟ್ ಟ್ಯಾಗ್ ಲೈನ್ ನಲ್ಲಿ ಹೋಗುವಂತಿಲ್ಲ, ಹೋದರು ದುಬಾರಿ ದಂಡವನ್ನು ಪಾವತಿಸಬೇಕು.
ವರದಿಯ ಪ್ರಕಾರ, ಸಂಸದೀಯ ಸ್ಥಾಯಿ ಸಮಿತಿಯಲ್ಲಿ ವಿಮಾ ಕವರೇಜ್ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. 2024ರ ವರದಿಯ ಪ್ರಕಾರ, ದೇಶದಲ್ಲಿ ಸಂಚರಿಸುವ 30 ರಿಂದ 40 ಕೋಟಿ ವಾಹನಗಳಲ್ಲಿ 50% ವಾಹನಗಳಿಗೆ ಮಾತ್ರ, ಮೂರನೇ ವ್ಯಕ್ತಿ ವಿಮೆ ಮಾಡಿಸಲಾಗಿದೆ.
ವಿಮೆ ಇಲ್ಲದೆ ವಾಹನ ಚಲಾವಣೆ ಮಾಡುವುದು ಮೋಟಾರ್ ವಾಹನ ಕಾಯ್ದೆಯ ಅಡಿ ಅಪರಾಧ ಎನಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರು ವಿಮೆ ಮಾಡಿಸಿಕೊಳ್ಳುವುದು ಕಡ್ಡಾಯ.
ಯುಪಿಐ ಪೇಮೆಂಟ್ ಮಾಡುವವರಿಗೆ ಫೆಬ್ರವರಿ 1ರಿಂದ ಹೊಸ ನಿಯಮ ಜಾರಿ
ಥರ್ಡ್ ಪಾರ್ಟಿ ಇನ್ಸೂರೆನ್ಸ್ ಯಾಕೆ ಬೇಕು!
ವಾಹನದ ಇನ್ಸೂರೆನ್ಸ್ ನಲ್ಲಿ (Vehicle Insurance) ಮೂರು ಪ್ರಕಾರಗಳಿವೆ. ಫಸ್ಟ್ ಪಾರ್ಟಿ ಇನ್ಸೂರೆನ್ಸ್ ಥರ್ಡ್ ಪಾರ್ಟಿ ವಿಮೆ ಮತ್ತು ಕಾಂಪ್ರಹೆನ್ಸಿವ್ ಇನ್ಸೂರೆನ್ಸ್. ಫಸ್ಟ್ ಪಾರ್ಟಿ ಇನ್ಸೂರೆನ್ಸ್. ವಾಹನದ ಮಾಲೀಕನಿಗೆ ಮಾತ್ರ ಸಿಗುವ ಕವರೇಜ್ ಆಗಿದೆ. ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮೂರನೇ ವ್ಯಕ್ತಿಗೆ ಸಿಗುವ ಕವರೇಜ್ ಆಗಿದೆ.
ಅಂದರೆ ಇನ್ಸೂರೆನ್ಸ್ ಹೊಂದಿರುವ ವಾಹನ ಬೇರೆ ಯಾರಿಗಾದರೂ ಅಪಘಾತವನ್ನು ಉಂಟು ಮಾಡಿದರೆ ಆ ವ್ಯಕ್ತಿಗೆ ವಿಮೆ ಸೌಲಭ್ಯ ಸಿಗುತ್ತದೆ. ಇನ್ನು ಮೂರನೆಯದಾಗಿ ಕಾಂಪ್ರಹೆನ್ಸಿವ್ ಇನ್ಸೂರೆನ್ಸ್‌ನಲ್ಲಿ ಫಸ್ಟ್ ಪಾರ್ಟಿ ಮತ್ತು ಥರ್ಡ್ ಪಾರ್ಟಿ, ಎರಡನ್ನು ಇನ್ಕ್ಲ್ಯೂಡ್ ಮಾಡಲಾಗುತ್ತದೆ.
ಇನ್ಸೂರೆನ್ಸ್ ಇಲ್ಲದಿದ್ದರೆ ಪಾವತಿಸಬೇಕು ದಂಡ!
ಈಗಾಗಲೇ ಬಂದಿರುವ ಸುತ್ತೋಲೆಯ ಪ್ರಕಾರ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಇಲ್ಲದೆ ವಾಹನ ಚಲಾವಣೆ ಮಾಡಿದರೆ 2,000 ರೂಪಾಯಿಗಳ ದಂಡ ಅಥವಾ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು. ಇನ್ನು ಇದೇ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ ದಂಡದ ಮೊತ್ತವು ಹೆಚ್ಚಾಗುತ್ತದೆ.
Without this document, your vehicle won’t get petrol