SSLC ಪಾಸ್ ಆದವರಿಗೆ 73 ಸಾವಿರ ವಿದ್ಯಾರ್ಥಿ ವೇತನ! ಕೋಟಕ್ ಬ್ಯಾಂಕ್ ನಿಂದ ಬಂಪರ್ ಕೊಡುಗೆ
Education scholarship : ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ಕೂಡ SSLC ಅತ್ಯುತ್ತಮ ಶ್ರೇಣಿಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ಮತ್ತು ಬೆಂಬಲ ನೀಡಲು ಮುಂದಾಗಿದೆ
Education scholarship : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶ ಈಡೇರಿಕೆಗಾಗಿ ವಿದ್ಯಾರ್ಥಿ ವೇತನ ನೀಡುವುದು ಈ ಹಿಂದಿನಿಂದಲೂ ರೂಢಿಯಲ್ಲಿ ಇದೆ ಎಂದು ಹೇಳಬಹುದು. ಸರಕಾರ , ಸರಕಾರೇತರ ಸಂಸ್ಥೆ, ಮಾತ್ರವಲ್ಲದೆ ಸಹಕಾರಿ ಹಾಗೂ ಖಾಸಗಿ ಬ್ಯಾಂಕ್, ಸಂಘಸಂಸ್ಥೆಗಳು ಕೂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದನ್ನು ನಾವು ಕಾಣಬಹುದು.
ಇದೀಗ ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ಕೂಡ SSLC ಅತ್ಯುತ್ತಮ ಶ್ರೇಣಿಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ಮತ್ತು ಬೆಂಬಲ ನೀಡಲು ಮುಂದಾಗಿದ್ದು ಈ ಮಾಹಿತಿ ವಿದ್ಯಾರ್ಥಿಗಳಿಗೆ ಬಹಳ ಸಹಕಾರಿ ಆಗಲಿದೆ.
ಬೇರೆಯವರ ಸಾಲಕ್ಕೆ ನೀವು ಜಾಮೀನು ಸಹಿ ಹಾಕಿದ್ದೀರಾ? ಸರಕಾರದಿಂದ ಬಂತು ಈ ಹೊಸ ರೂಲ್ಸ್
ಭಾರತದ ಶ್ರೇಷ್ಠ ಖಾಸಗಿ ವ್ಯವಹಾರಿಕ ಬ್ಯಾಂಕ್ ನಲ್ಲಿ ಒಂದಾದ ಕೋಟಕ್ ಮಹೀಂದ್ರ ಬ್ಯಾಂಕ್ ನಲ್ಲಿ ಮಹೀಂದ್ರ ಗ್ರೂಪ್ ಕೋಟಕ್ ಎಜುಕೇಶನ್ ಫೌಂಡೇಶನ್( KEF) ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದು ಬರೀ ಒಮ್ಮೆಗೆ ಬೀಳುವ ಮೊತ್ತವಾಗಿರದೇ ಶೈಕ್ಷಣಿಕ ಕಾರ್ಯ ಚಟುವಟಿಕೆ ಪೂರ್ಣ ಗೊಳ್ಳುವ ತನಕವು ಸ್ಕಾಲರ್ ಶಿಪ್ ಸಿಗಲಿದೆ.
SSLC ಉತ್ತೀರ್ಣರಾಗಿದ್ದು ಪಿಯುಸಿ ಎರಡು ವರ್ಷ ವ್ಯಾಸಾಂಗ ಮಾಡುವ ಅವಧಿವರೆಗೂ ಪ್ರತೀ ತಿಂಗಳು ಕೂಡ ವಿದ್ಯಾರ್ಥಿ ವೇತನ ಮೊತ್ತನೀಡಲಾಗುವುದು.
ಅರ್ಹತೆ ಏನು?
ಕೋಟಕ್ ಮಹೀಂದ್ರ ಬ್ಯಾಂಕ್ ನಲ್ಲಿ (Kotak Mahindra Bank) ಸ್ಕಾಲರ್ ಶಿಪ್ ನೀಡುವ ಜೊತೆಗೆ ವೃತ್ತಿ ಮಾರ್ಗದರ್ಶನ ಕೂಡ ನೀಡಲಾಗಿದ್ದು ಅದನ್ನು ಕೂಡ ಪ್ರಯೋಜನೆ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ.
*ಅರ್ಜಿ ಹಾಕುವ ಅಭ್ಯರ್ಥಿಗಳು ಬೋರ್ಡ್ ಪರೀಕ್ಷೆ (SSC, CBSE, ICSE) ಮುಗಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 3,20,000 ಕ್ಕಿಂತ ಅಧಿಕ ಇರಬಾರದು.
*2024-25ರ ಅವಧಿಯಲ್ಲಿ SSLC ಪರೀಕ್ಷೆಯಲ್ಲಿ 85%. ಪಡೆದಿದ್ದು ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಮುಂಬೈ ಮೆಟ್ರಿಕ್ ಪಾಲಿಟನ್ ವಿಭಾಗದಲ್ಲಿ 11ನೇ ತರಗತಿ ಪ್ರವೇಶಾತಿ ಪಡೆದಿರಬೇಕು. ಮುಂಬೈ ಮೆಟ್ರೊಪಾಲಿಟನ್ ಪ್ರದೇಶದಲ್ಲಿ ವಾಸಿಸುವವರಿಗೆ ಮಾತ್ರ ಅವಕಾಶ ಇರಲಿದೆ
ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗ್ತಾಯಿದೆ, ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಿ
ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ?
ಪ್ರತೀ ತಿಂಗಳು ಕೂಡ 3,500 ರೂಪಾಯಿ ನಂತೆ 21 ತಿಂಗಳ ಅವಧಿಗೆ 73,000 ರೂಪಾಯಿ ತನಕವು ಸ್ಕಾಲರ್ ಶಿಪ್ ಸಿಗಲಿದೆ. ಈ ವಿದ್ಯಾರ್ಥಿ ವೇತನ ಪಡೆಯಲು ಮುಂಬೈ ನಿವಾಸಿಗಳಿಗೆ ಮಾತ್ರವೇ ಅವಕಾಶ ಇದ್ದು ಆ ಸಂಬಂಧಿತ ದಾಖಲೆ ನೀಡುವುದು ಅತ್ಯವಶ್ಯಕ.
SSC, ICSE, CBSE ನ ಬಗ್ಗೆ ಇ ಕಾಪಿ ಕಡ್ಡಾಯವಾಗಿ ನೀಡಬೇಕು. ಕಿತ್ತಳೆ ಹಾಗೂ ಹಳದಿ ಬಣ್ಣದ ಪಡಿತರ ಚೀಟಿ ವಿತರಣೆ ಮಾಡಬೇಕು. ಪೋಷಕರು ಮತ್ತು ವಿದ್ಯಾರ್ಥಿಗಳ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಪ್ರತಿ, ಆದಾಯ ಪ್ರಮಾಣ ಪತ್ರ, ಶಾಲೆಯ TC, ಪಾಸ್ ಪೋರ್ಟ್ ಗಾತ್ರದ ಫೋಟೋ ಸಲ್ಲಿಸಬೇಕು. ಅರ್ಹರಿಗೆ ಮಾತ್ರ ವಿದ್ಯಾರ್ಥಿ ವೇತನ ಸಿಗಲಿದೆ.
1 ಲಕ್ಷ ಬೆಲೆಬಾಳುವ ಚಿನ್ನಅಡ ಇಟ್ರೆ ಎಷ್ಟು ಹಣ ಸಿಗುತ್ತೆ? ಬಡ್ಡಿ ಎಷ್ಟು? ಇಲ್ಲಿದೆ ಬ್ಯಾಂಕುಗಳ ಲೆಕ್ಕಾಚಾರ
73 thousand Education scholarship for those who passed SSLC from Kotak Bank